ಎಲ್.ಬಿ.ಎಸ್. ನಗರದಲ್ಲಿ  399ನೇ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅದ್ದೂರಿ ಆಚರಣೆ

ಜಯ ಧ್ವಜ ನ್ಯೂಸ್ , ರಾಯಚೂರು, ಫೆ.20- ನಗರದ ಎಲ್.ಬಿ.ಎಸ್. ನಗರದಲ್ಲಿ ಗುರುವಾರದಂದು 399ನೇ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅತ್ಯಂತ ವಿಜೃಂಭಣೆಯಿಂದ, ಭಕ್ತಿ ಮತ್ತು ದೇಶಭಕ್ತಿಯ ಉತ್ಸಾಹದೊಂದಿಗೆ ಆಚರಿಸಲಾಯಿತು.


ಬೆಳಿಗ್ಗೆ ವಿಶೇಷ ಪೂಜೆ ಸಲ್ಲಿಸಿ, ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ನಂತರ ಭವ್ಯ ಶೋಭಾಯಾತ್ರೆ ಆಯೋಜಿಸಲಾಗಿತ್ತು ಜಯಘೋಷಗಳ ಮಧ್ಯೆ ಹಾಗೂ “ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ” ಎಂಬ ಘೋಷಣೆಗಳೊಂದಿಗೆ ಖಾಸ್ ಬಾವಿ ಹತ್ತಿರ ಇರುವ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದವರೆಗೆ ಸಾಗಿತು. ಅಲ್ಲಿ ಮಹಾರಾಜರ ಪ್ರತಿಮೆಗೆ ಗೌರವಪೂರ್ವಕವಾಗಿ ಮಾಲಾರ್ಪಣೆ ಮಾಡಲಾಗಿತು.


ಕಾರ್ಯಕ್ರಮದಲ್ಲಿ ಯುವಕರು, ಮಹಿಳೆಯರು ಮತ್ತು ಸಮಾಜದ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿವಾಜಿ ಮಹಾರಾಜರ ಆದರ್ಶಗಳು, ಧೈರ್ಯ, ಸ್ವಾಭಿಮಾನ ಮತ್ತು ರಾಷ್ಟ್ರಪ್ರೇಮವನ್ನು ಸ್ಮರಿಸಿದರು. ಮಹಾರಾಜರ ಆಡಳಿತ ತತ್ವಗಳು, ಶೌರ್ಯ ಮತ್ತು ಸಮಾನತೆ ಸಂದೇಶಗಳು ಇಂದಿನ ಪೀಳಿಗೆಗೆ ದಾರಿದೀಪವಾಗಿವೆ ಎಂದು ವಕ್ತಾರರು ಅಭಿಪ್ರಾಯಪಟ್ಟರು.

ಒಟ್ಟಾರೆ, ಈ ಜಯಂತಿ ಆಚರಣೆ ಸಮಾಜದ ಒಗ್ಗಟ್ಟಿನ ಸಂಕೇತವಾಗಿ, ದೇಶಭಕ್ತಿ ಮತ್ತು ಸಂಸ್ಕೃತಿ ಪ್ರೇಮದ ಪ್ರೇರಣೆಯಾಗಿ ಎಲ್ಲರ ಮನಗಳಲ್ಲಿ ಸ್ಪಂದನೆ ಮೂಡಿಸಿತು. ಶಿವಾಜಿ ಮಹಾರಾಜರ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. 

ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ಅಂಬಾಜಿ ರಾವು ಮೈದರ್ಕರ್, ರಘು ನನ್ನೋರೆ, ಆಂಬೊಜಿ ನನ್ನೋರೆ, ಬಸವರಾಜ್ ಭೋಸಲೇ, ಜಗದೀಶ್ ಭೋಸಲೇ, ಅಶೋಕ್ ನನ್ನೋರೆ, ಆಂಬೊಜಿ ಜಾಗ್ತಪ್, ಫಿರೋಜಿ, ಮಹಿಳಾ ಘಟಕದವರಾದ ಭಾಗ್ಯಶ್ರೀ ನನ್ನೋರೆ, ಪವಿತ್ರ ನನ್ನೋರೆ, ಪರಿಮಳ ನನ್ನೋರೆ, ಶಿಲ್ಪಾ ಗರುಡ ಸೇರಿದಂತೆ ಅನೇಕರು ಹಾಜರಾಗಿ ಜಯಂತಿಯಲ್ಲಿ  ಭಾಗವಹಿಸಿದ್ದರು.


Comments

Popular posts from this blog