ತಾರಕಕ್ಕೇರಿದೆ ಬೆಂಬಲಿಗರ ಆರೋಪ ಪ್ರತ್ಯಾರೋಪ. ಜಯ ಧ್ವಜ ನ್ಯೂಸ್, ರಾಯಚೂರು,ಮೇ.26- ಕಾಂಗ್ರೆಸ್ ಪ್ರಭಾವಿ ರಾಜಕೀಯ ನಾಯಕರಿಬ್ಬರ ಬೆಂಬಲಿಗರ ಆರೋಪ ಪ್ರತ್ಯಾರೋಪ ತಾರಕಕ್ಕೇರಿದ್ದು ಬೆಂಬಲಿಗರ ಸರಣಿ ಪತ್ರಿಕಾಗೋಷ್ಠಿ ಮೂಲಕ ಏಟಿಗೆ ಎದಿರೇಟು ಎನ್ನುವ ರೀತಿಯಲ್ಲಿ ಸಾಗಿದೆ. ನಗರದ ಹರಿಜನವಾಡದಲ್ಲಿ 5 ಕೋಟಿ ರೂ. ವೆಚ್ಚದ ಡಾ.ಬಾಬು ಜಗಜೀವನರಾಮ್ ಸಮುದಾಯ ಭವನ ನಿರ್ಮಾಣಕ್ಕೆ ಕಾರಣಿಕರ್ತರು ಸಚಿವ ಎನ್.ಎಸ್.ಬೋಸರಾಜು ಕಾರಣವೆಂದು ಬೋಸರಾಜು ಕಟ್ಟಾ ಬೆಂಬಲಿಗರಾದ ನರಸಿಂಹಲು ಮಾಡಿಗಿರಿಯವರು ಪತ್ರಿಕಾ ಜಾಹಿರಾತು ಪ್ರಕಟಗೊಂಡ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಚರ್ಚಿತವಾದ ನಂತರ ಪತ್ರಿಕಾ ಗೋಷ್ಠಿಯಲ್ಲಿ ನರಸಿಂಹಲು ಮಾಡಗಿರಿ ಬೋಸರಾಜುರವರಿಂದಲೆ ಅಭಿವೃದ್ಧಿ ನಮ್ಮ ಬಡಾವಣೆಯಲ್ಲಿ ಆಗಿದೆ ವಸಂತ ಕುಮಾರ್ ಅಭಿವೃದ್ಧಿ ಶೂನ್ಯ ವೆಂದು ಹೇಳಿದ ನಂತರ ಮರುದಿನವೇ ವಸಂತ ಕುಮಾರ್ ಬೆಂಬಲಿಗರ ಪಡೆಯಲ್ಲಿ ಗುರುತಿಸಿಕೊಂಡಿರುವ ಅಂಜಿನ ಕುಮಾರ್ ಪತ್ರಿಕಾ ಗೋಷ್ಟಿಯ ಮೂಲಕ ಪ್ರತ್ಯುತ್ತರ ನೀಡಿ ನರಸಿಂಹಲು ಮಾಡಗಿರಿಯವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಹೇಳಿದ ಮರುದಿನವೇ ನರಸಿಂಹಲು ಮಾಡಗಿರಿ ಬೆಂಬಲಿಗರು ಪತ್ರಿಕಾ ಗೋಷ್ಠಿ ಏರ್ಪಡಿಸಿ ವಸಂತ ಕುಮಾರ್ ಪಕ್ಷ ವಿರೋಧಿ ನಡೆ ಬಗ್ಗೆ ಎಳೆ ಎಳೆಯಾಗಿ ಬಿಡಿಸಿಟ್ಟು ವಸಂತ ಕುಮಾರ್ ಬೆಂಬಲಿಗರೇ ಪಕ್ಷ ವಿರೋಧಿಗಳು ಎನ್ನುವುದಲ್ಲದೆ ದೇವರ ಮೇಲೆ ಪ್ರಮಾಣ ಮಾಡುವ ಸವಾಲು ಎಸೆದಿದ್ದಾರೆ ಒಟ್ಟಾರೆ ಇಬ್ಬರು ಕಾಂಗ್ರೆಸ್ ಹಿರಿಯ ನಾಯಕರ ಬೆಂಬಲಿಗರ ಕೆಸರೆರಚಾಟ ಯಾವ ದಿಕ್ಕಿನಲ್ಲಿ ಸಾಗುತ್ತದೆ ಪಕ್ಷದ ವರಿಷ್ಠರು ಇದಕ್ಕೆ ತೆರೆ ಎಳೆಯುತ್ತಾರೋ ಎಂಬುದು ಕಾದು ನೋಡಬೇಕಾಗಿದೆ.

Comments
Post a Comment