ಶ್ರೀ ಮಾತೆ ಬಾಲಮಾರೆಮ್ಮ ದೇವಸ್ಥಾನದ ಅಭಿವೃದ್ದಿಗೆ 40 ಲಕ್ಷ ರೂ.ಅನುದಾನ ನೀಡಿದ ವಸಂತ ಕುಮಾರ 

ಜಯ ಧ್ವಜ ನ್ಯೂಸ್ , ರಾಯಚೂರು , ಆ.11-  ವಿಧಾನ ಪರಿಷತ್ ಸದಸ್ಯರಾದ ಎ.ವಸಂತ್ ಕುಮಾರ್ ರವರು   ಬಾಲ ಮಾರಮ್ಮ ದೇವಸ್ಥಾನ ಅಭಿವೃದ್ಧಿಗೆ 40 ಲಕ್ಷ ರೂ. ಅನುದಾನ ನೀಡಿದರು. ಇಂದು ಬೆಳಿಗ್ಗೆ ಶ್ರೀ ಬಾಲ ಮಾರಮ್ಮ ದೇವಸ್ಥಾನ ಸಮಿತಿಯವರ ವಿಶೇಷ ಆಹ್ವನದ ಮೇರೆಗೆ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಬಾಲಮಾರಮ್ಮ ದೇವಿಯ ಆಶೀರ್ವಾದ ಪಡೆದು ಮಾತನಾಡಿದ ಅವರು ಸಮಿತಿಯವರ ವಿನಂತಿಯ ಮೇರೆಗೆ ದೇವಸ್ಥಾನದ ಅಭಿವೃದ್ದಿಗೆ 2026-27 ನೇ ಸಾಲಿನ ಎಂ. ಎಲ್. ಸಿ  ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿಯಲ್ಲಿ ದೇವಸ್ಥಾನದ ಅಭಿವೃದ್ದಿಗೆ 40 ಲಕ್ಷ ಅನುದಾನ ನೀಡುತ್ತಿರುವುದಾಗಿ ತಿಳಿಸಿದರು.  ದೇವಸ್ಥಾನಕ್ಕೆ ಅನುಧಾನ ನೀಡಿದ್ದಕ್ಕೆ ದೇವಸ್ಥಾನ ಸಮಿತಿ ಅಧ್ಯಕ್ಷರು ಸಮಿತಿ ಸದಸ್ಯರು ವಿಧಾನ ಪರಿಷತ್ ಸದಸ್ಯರನ್ನು ಸನ್ಮಾನಿಸಿ ಅಭಿನಂದನೆಗಳನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಆರ್ ಡಿ ಎ ಮಾಜಿ ಅಧ್ಯಕ್ಷ ತಿಮ್ಮಪ್ಪ ನಾಡಗೌಡ, ಕೆ ಟಿ ನರಸಣ್ಣ ಅಧ್ಯಕ್ಷರು ಬಾಲ ಮಾರೆಮ್ಮ ದೇವಸ್ಥಾನ ಸಮಿತಿ, ಡಿ ಕೆ ಮುರುಳಿ ಯಾದವ್, ತಿಮ್ಮಪ್ಪ ಕೋರ್ಟ್, ಬಂಕ ಶಿವಪ್ಪ, ಪ್ರಕಾಶ್ ವಕೀಲರು,  ಶ್ರೀನಿವಾಸ, ಸುರೇಂದ್ರ , ಮಾರಪ್ಪ ಸೆಂಟ್ರಿಂಗ್, ಬಂಕ ರಾಮು, ತಲಾರ್ ಶಂಕರ್, ಟೈಲರ್ ಹಣಮಂತು, ಡಾ, ನಾಗೇಶ್, ಮೇಸ್ತ್ರಿ ಹನಮಂತು, ಹಾಲ್ವಿ ನರಸಿಂಹುಲು, ನರಸಪ್ಪ ತಲಾರ್, ತಲಕಾಯಿ ನರಸಿಂಹಲು, ವೀರೇಶ್ ತಲಾರ್ ಪೂಜಾರಿ, ಮಾಸ್ಟರ್ ಮಲ್ಲಯ್ಯ ಮುಂತಾದವರು ಹಾಜರಿದ್ದರು.

Comments

Popular posts from this blog