ಆ. 8 ರಂದು ನಗರಕ್ಕೆ ಸಚಿವ ಡಾ .ಅಜಯ್ ಧರಂಸಿಂಗ್
                                         ಜಯ ಧ್ವಜ ನ್ಯೂಸ್ , ರಾಯಚೂರು , ಆ.6-  ಕರ್ನಾಟಕ ಸರಕಾರದ ಸಚಿವರಾದ ಡಾ.ಅಜಯ್ ಧರಂಸಿಂಗ್ ರವರು ಆ.8ರಂದು ನಗರಕ್ಕಾಗಮಿಸಿ ಬರ ಪರಿಸ್ಥಿತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.  ಅಂದು ಅಪರಾಹ್ನ 3 ಘಂಟೆಗೆ ನಗರದ ನೂತನ ಜಿಲ್ಲಾಧಿಕಾರಿಗಳ ಕಛೇರಿ  ಸಭಾಂಗಣದಲ್ಲಿ ಸಭೆಯನ್ನು ಏರ್ಪಡಿಸಲಾಗಿದೆ.   ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಬರ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆಗಳು, ಮುಂಗಾರು ಹಂಗಾಮಿನ ಬಿತ್ತನೆ ಮತ್ತು ರಸಗೊಬ್ಬರ ಬೇಡಿಕೆಗಳು ಹಾಗೂ ಜಾನುವಾರುಗಳಿಗೆ ಮೇವಿನ ಲಭ್ಯತೆ ಕುರಿತು ಸದರಿ ಸಭೆಗೆ ಅಗತ್ಯ ಮಾಹಿತಿ, ದಾಖಲೆಗಳೊಂದಿಗೆ ಸಂಬಂಧಪಟ್ಟ ಅಧಿಕಾರಿಗಳು ಖುದ್ದಾಗಿ ಸದರಿ ದಿನದಂದು ಅಪರಾಹ್ನ 2:30 ಕ್ಕೆ ಹಾಜರಾಗಲು ಪ್ರಕಟಣೆಯಲ್ಲಿ  ಕೋರಲಾಗಿದೆ.

Comments

Popular posts from this blog