ನವೋದಯ 88.4 ಎಫ್.ಎಮ್. ಬಾನುಲಿ ಕೇಂದ್ರ ಉಧ್ಘಾಟನೆ: ಎಸ್.ಆರ್.ರೆಡ್ಡಿ ಕನಸು ಕಂಡದ್ದನ್ನು ನನಸು ಮಾಡುವ ಛಲಗಾರ-ಬೋಸರಾಜು. ಜಯ ಧ್ವಜ ನ್ಯೂಸ್, ರಾಯಚೂರು,ಆ.29- ಎಸ್.ಆರ್.ರೆಡ್ಡಿ ಕನಸು ಕಂಡದ್ದನ್ನು ನನಸು ಮಾಡುವ ಛಲಗಾರ ಎಂದು ಮಾಜಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು. ಅವರಿಂದು ನವೋದಯ ಸಂಸ್ಥೆಯಲ್ಲಿ ನವೋದಯ 88.4 ಬಾನುಲಿ ಕೇಂದ್ರ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಎಸ್ ಆರ್ ರೆಡ್ಡಿ ನವೋದಯ ಸಂಸ್ಥೆ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ ನಗರಕ್ಕೆ ವಿದ್ಯಾರ್ಜನೆಗೆ ಆಗಮಿಸಿದ ಅವರು ತಮ್ಮದೇ ಬೃಹತ್ ಶಿಕ್ಷಣ ಸಂಸ್ಥೆ ರೂಪಿಸಿದ್ದು ಅತ್ಯಂತ ಶ್ಲಾಘನೀಯ ಎಂದರು. ಬಾನುಲಿ ಕೇಂದ್ರ ಸ್ಥಾಪಿಸುವ ಮೂಲಕ ಶಿಕ್ಷಣ, ಮನೋರಂಜನೆಗೆ ಹೊಸ ಹೆಜ್ಜೆಯಿರಿಸಿದ್ದು ಬಾನುಲಿ ಕೇಂದ್ರ ಜನರಿಗೆ ಉಪಯುಕ್ತ ಮಾಹಿತಿ ಒದಗಿಸಲಿ ಎಂದರು.
ನಗರದಲ್ಲಿ ಮದುವೆ ಸಮಾರಂಭಗಳಿಗೆ ಅನೂಕೂಲವಾಗಲು ನಗರದ ಹೊರ ವಲಯದಲ್ಲಿ ಸುಸಜ್ಜಿತ ಕಲ್ಯಾಣ ಮಂಟಪ ಕಟ್ಟಿಸುವ ಮೂಲಕ ಶುಭ ಕಾರ್ಯಗಳಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದರು. ಅವರ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ಭಾರಿ ಪೈಪೋಟಿಯಿರುತ್ತದೆ ಕೇವಲ
ಪ್ರತಿಭೆಯಿದ್ದವರಿಗೆ ಪ್ರವೇಶ ಸಿಗುತ್ತದೆ ಯಾವುದೇ ಲಾಬಿಗೆ ಅವರು ಮಣಿಯುವುದಿಲ್ಲ ಈ ಹಿಂದೆ ಸಂಸ್ಥೆಯಲ್ಲಿ ಪ್ರವೇಶ ನೀಡಿಲ್ಲವೆಂದು ಬೃಹತ್ ಪ್ರತಿಭಟನೆಗಳು ಆದರೂ ಯಾವುದಕ್ಕು ಜಗ್ಗಲಿಲ್ಲ ವೆಂದರು. ಸಂಸದ ಜಿ.ಕುಮಾರ ನಾಯಕ ಮಾತನಾಡಿ ನಾನು ಜಿಲ್ಲಾಧಿಕಾರಿಯಾಗಿ ಜಿಲ್ಲೆಗೆ ಬಂದಾಗ ಅವರ ಪರಿಚಯವಾಯಿತು ಅವರು ಕಾಲೇಜು ಕಟ್ಟುವ ವೇಳೆ ನನ್ನನ್ನು ಭೇಟಿಯಾಗಿದ್ದರು ಇಂದು ಅವರ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ ಅವರ ಶೈಕ್ಷಣಿಕ ಕೊಡುಗೆ ಮಾದರಿಯಾಗಿದೆ ಎಂದರು. ಎಸ್.ಆರ್ .ರೆಡ್ಡಿ ಮಾತನಾಡಿ ನಮ್ಮ ಸಂಸ್ಥೆ ವಿದ್ಯಾರ್ಥಿಗಳ ಸರ್ವತೋಮುಖ ಅಭ್ಯುದಯಕ್ಕೆ ಸಕಲ ರೀತಿಯಲ್ಲಿ ನೆರವು ನೀಡುತ್ತದೆ ಎಂದರು. ಬೋಧಕ , ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



Comments
Post a Comment