ದ್ವೈತ ವೇದಾಂತದ ಮಹಾನ್ ದಾರ್ಶನಿಕರು ಶ್ರೀ ಜಯತೀರ್ಥರು.                            ಟೀಕಾಚಾರ್ಯರೆಂದೇ ಪ್ರಖ್ಯಾತರಾದ ಶ್ರೀಮದ್ ಜಯತೀರ್ಥರು ದ್ವೈತ ವೇದಾಂತದ ಮಹಾನ್ ದಾರ್ಶನಿಕರು.  ಪೂರ್ವಾಶ್ರಮದಲ್ಲಿ ಮಹಾರಾಷ್ಟ್ರದ ಮಂಗಳವೇಡಿಯಲ್ಲಿ ಧೋಂಡೋ ರಘುನಾಥ ದೇಶಪಾಂಡೆ ಎಂಬ ಹೆಸರಾಂತ ಶ್ರೀಮಂತ ಮನೆತನದಲ್ಲಿ ಜನಿಸಿದರು. ಅಕ್ಷೋಭ್ಯ ತೀರ್ಥರಿಂದ ಪ್ರಭಾವಿತಗೊಂಡು 33 ಕೃತಿಗಳನ್ನು ರಚಿಸಿದರು.


ಜಯತೀರ್ಥರು ಇಂದ್ರನ ಅವತಾರ ಆದಿಶೇಷನ ಅಂಶ ಹೊಂದಿರುವ ಇವರು ಪೂರ್ವ ಜನ್ಮದಲ್ಲಿ ಅರ್ಜುನನಾಗಿ ಅವತರಿಸಿ ಮುಂದಿನ ಜನ್ಮದಲ್ಲಿ ಧೋಂಡೋ ಪಂತರಾಗಿ ಜನಿಸಿ ಬಾಲ್ಯದಲ್ಲಿ ಕ್ರೀಡೆಯಲ್ಲಿ ವಿಶೇಷವಾಗಿ ಕುದುರೆ ಸವಾರಿಯನ್ನು ಮಾಡುತ್ತಿದ್ದರು. ಆಕಸ್ಮಿಕವಾಗಿ ಶ್ರೀ ಅಕ್ಷೋಭ್ಯತೀರ್ಥರ ಮುಖಾಮುಖಿ ಭೇಟಿಯ ನಂತರ ಅವರ ಜೀವನದಲ್ಲಿ ಸನ್ಯಾಸ ದೀಕ್ಷೆಯನ್ನು ಪಡೆದು ಜಯತೀರ್ಥರಾದರು. ತಾತ್ವಿಕ ಕೃತಿಗಳ ಆಳ ಅಗಲ ಅರಿವು, ಭವ್ಯವಾದ ಬರವಣಿಗೆಯ ಶೈಲಿ, ವಾಕ್ಚಾತುರ್ಯ, ತರ್ಕ ತೇಜಸ್ಸಿನಿಂದ ಕೂಡಿದ ಪಾಂಡಿತ್ಯ ಮೆಚ್ಚುಗೆಯನ್ನು ಪಡೆದರು. ಇವರು ಅನೇಕ ಭವ್ಯವಾದ ಬಿರುದುಗಳನ್ನು ಪಡೆದರು, ಟೀಕಾಚಾರ್ಯರೆಂದು ಕರೆಸಿಕೊಂಡು ಪ್ರಖ್ಯಾತರಾದರು. ಇವರು ಕಾರ್ಯಕ್ಷೇತ್ರ ಈಗಿನ ಕಲ್ಬುರ್ಗಿ ಜಿಲ್ಲೆಯ ರಾಷ್ಟ್ರಕೂಟರ ರಾಜಧಾನಿ ಮಾನ್ಯಖೇಟ ಅಥವಾ ಮಳಖೇಡ ವಾಗಿತ್ತು. ಇವರು ಮಧ್ವಾಚಾರ್ಯರ ಗ್ರಂಥಗಳಿಗೆ ಅತ್ಯುತ್ತಮ ಟೀಕೆಗಳನ್ನು ಬರೆದು ಟೀಕಾಚಾರ್ಯರು ಎಂದು ಪ್ರಸಿದ್ಧಿಯನ್ನು ಪಡೆದರು. ಜಯತೀರ್ಥರು 1388 ಮಳಖೇಡದ ಕಾಗಿನಾ ನದಿ ತೀರದಲ್ಲಿ ಬೃಂದಾವನ ಪ್ರವೇಶಿಸಿದರು . ಪ್ರತಿ ವರ್ಷವು ಭಕ್ತರು ಆಷಾಡ ಬಹುಳ ಪಂಚಮಿಯಂದು ಟೀಕಾ ರಾಯರ ಪಂಚಮಿಯಂದು ಆಚರಣೆ ಮಾಡುತ್ತಾರೆ ಇದೆ ಆ.3 ರಂದು ಅವರ ಮಧ್ಯಾರಾಧನೆಯಿದ್ದು ತನ್ನಿಮ್ಮಿತ್ಯ ಈ ಲೇಖನ ಟೀಕಾರಾಯರಿಗೆ ಸಮರ್ಪಿತ.               

     
                                                                 

-ಲೇಖಕರು, ಶ್ರೀಮತಿ ಪರಿಮಳ ಕರಣಂ, ರಾಯಚೂರು.

Comments

Popular posts from this blog