ಬಹುಮುಖ ಪ್ರತಿಭೆ ಶ್ರೀ ಗೌರಿ ಪಲ್ಲಕ್ಕಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ.

 ಜಯ ಧ್ವಜ ನ್ಯೂಸ್ ,ರಾಯಚೂರು. ಆ 5- ರಾಯಚೂರು ನಗರದ ಎಎಂಇಎಸ್ ಕಾಲೇಜಿನ ಬಿಸಿಎ ವಿದ್ಯಾರ್ಥಿನಿ ಕುಮಾರಿ ಶ್ರೀಗೌರಿ ಪಲ್ಲಕ್ಕಿ ತಂದೆ ಗುರುಪಾದಪ್ಪ ಪಲ್ಲಕ್ಕಿ ಇವರು ರಾಷ್ಟ್ರಮಟ್ಟದ  ರಾಷ್ಟ್ರೀಯ ಕಲಾ ರತ್ನ ಪ್ರಶಸ್ತಿಗೆ ಆಯ್ಕೆ ಯಾಗಿದ್ದಾರೆ.

 ಭರತನಾಟ್ಯ, ಗಾಯನ, ಚಿತ್ರಕಲೆ, ಯೋಗ ಮುಂತಾದ ಕಲೆಗಳನ್ನು ಒಗ್ಗೂಡಿಸಿಕೊಂಡಿರುವ ಅಪರೂಪದ ಕಲಾವಿದೆಯ ಬಹುಮುಖ ಪ್ರತಿಭೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 

 ಇದೆ ಆ. 23ರಂದು ರವಿವಾರ  ಗೋವಾ ರಾಜಧಾನಿ ಪಣಜಿಯ ಬ್ರಿಜೇಂಗ್  ಸಭಾಂಗಣದಲ್ಲಿ ನಡೆಯಲಿರುವ ಶ್ರಾವಣ ಬಂತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 10 ಜನ ಸಾಧಕರಿಗೆ  ರಾಷ್ಟ್ರ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಯಚೂರಿನ ಶ್ರೀ ಗೌರಿ ಪಲ್ಲಕ್ಕಿ ಅವರಿಗೆ ಪ್ರಶಸ್ತಿ ಪ್ರದಾನವನ್ನು ಗೋವಾ ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಸಿದ್ದಣ್ಣ ಮೇಟಿ, ಕಲಂಗುಟಿ ಕನ್ನಡ ಸಂಘದ ಅಧ್ಯಕ್ಷರಾದ ಮುರಳಿ ಮೋಹನ ಶೆಟ್ಟಿ ಮತ್ತು ಗೋವಾ ಸಚಿವರು,  ಶಾಸಕರಿಂದ  ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಕದಂಬ ಫೌಂಡೇಶನ್ ಅಧ್ಯಕ್ಷರಾದ ಬಾಳೆಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

Popular posts from this blog