ಸುಂಕೇಶ್ವರಹಾಳ್ ಕೊಲೆ ಪ್ರಕರಣದಲ್ಲಿ ಕೆಲ ಅಮಾಯಕರ ಹೆಸರು ಸೇರ್ಪಡೆಗೆ ವಾಲ್ಮೀಕಿ ನಾಯಕ ಸಂಘ ವಿರೋಧ. ಜಯ ಧ್ವಜ ನ್ಯೂಸ್, ರಾಯಚೂರು,ಆ.6- ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ್ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೆಲ ಅಮಾಯಕರ ಮೇಲೆ ಪ್ರಕರಣ ದಾಖಲಿಸಿರುವುದನ್ನು ಹೈದ್ರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘ ವಿರೋಧಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ ಅವರು ಕೊಲೆಯಂತಹ ಹೀನ ಕೃತ್ಯ ಖಂಡನೀಯ ಆದರೆ ಅಮಾಯಕ ನಿರಪರಾಧಿಗಳ ಹೆಸರನ್ನು ಆರೋಪಿ ಸ್ಥಾನದಲ್ಲಿ ಸೇರಿಸಿದ್ದು ಸರಿಯಲ್ಲ ಪತ್ರಕರ್ತರಾದ ಭೀಮರಾಯ ಹದ್ದಿನಾಳ ಕಳೆದ ಮೂರು ದಶಕಗಳಿಂದ ಪತ್ರಿಕಾ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ ಅವರ ಹೆಸರಿಗೆ ಕಪ್ಪು ಚುಕ್ಕೆ ತರಲು ಮತ್ತು ಇನ್ನಿತರ ಅಮಯಾಕರ ಹೆಸರನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ರಘುವೀರ್ ನಾಯಕ, ನಾರಾಯಣ ನಾಯಕ,ರಾಮು ನಾಯಕ, ರಂಗಸ್ವಾಮಿ ನಾಯಕ, ತಾಯಪ್ಪ ನಾಯಕ,ಗೋಪಾಲ ನಾಯಕ ಇನ್ನಿತರರು ಇದ್ದರು.

Comments
Post a Comment