ಸ್ವಸಹಾಯ ಸಂಘಗಳಿಂದ ಜೀವನ ಸುಧಾರಣೆ -ಪಟಗಾರ್. ಜಯ ಧ್ವಜ ನ್ಯೂಸ್, ರಾಯಚೂರ,ಆ.8 - ನಗರದ ಎಲ್ ಬಿ ಎಸ್ ನಗರ ವಲಯದಿಂದ ನಾಲ್ಕು ಸಂಘಗಳ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ನಿರ್ದೇಶಕರಾದ ರಾಘವೇಂದ್ರ ಪಟಗಾರ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯೋಜನೆಯ ಮಹತ್ವ ಹಾಗೂ ಸ್ವಸಹಾಯ ಸಂಘಗಳ ಪರಿಕಲ್ಪನೆಯ ಬಗ್ಗೆ ಸಂಘಗಳು ವಾರದ ಸಭೆಯ ಬಗ್ಗೆ ಹಾಗೂ ದಾಖಲಾತಿಗಳ ಮಾಹಿತಿ ನೀಡಿದರು ಹಾಗೂ ಈ ಸಂಸ್ಥೆಯಿಂದ ಅನೇಕ ಜನರು ಸಾವಲಂಬಿಯಾಗಿ ಬದುಕುತ್ತಿದ್ದಾರೆ. ಇಂದಿನ ಕಾಲದಲ್ಲಿ ಮಹಿಳೆಯರು ನಾಲ್ಕು ಗೋಡೆಗಳ ಮಧ್ಯೆ ಬದುಕುತ್ತಿದ್ದರು ಈ ಯೋಜನೆಯಿಂದ ಅನೇಕ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ. ತಮ್ಮ ಜೀವನವನ್ನು ಉಜ್ವಲ ಗೊಳಿಸುತ್ತಿದ್ದಾರೆ ಎಂದು ಹೇಳಿದ್ದರು .ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಲ್ಲಮಪ್ರಭು ಗೃಹ ನಿರ್ಮಾಣ ಸಂಘದ ನಿರ್ದೇಶಕರು ಮತ್ತು ಸುದ್ದಿಮೂಲ ಪತ್ರಿಕೆಯ ಛಾಯಾಗ್ರಹಕರಾದ ವೀರೇಶ್ ನಾಗಲದಿನ್ನಿ ಅವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬರುವ ಮುಂಚೆ ಸುಮಾರು 15 ವರ್ಷಗಳ ಹಿಂದೆ ಅನೇಕ ಜನರು ಬಡತನದಲ್ಲಿ ಜೀವನ ನಡೆಸುತ್ತಿದ್ದಾರು ಹೆಚ್ಚಿನ ಬಡ್ಡಿಗೆ ಸಾಲ ಮಾಡಿ ಜೀವನ ನಡೆಸುತ್ತಿರುವ ಕಷ್ಟಕಾಲದಲ್ಲಿ ಈ ಯೋಜನೆಯು ಬಂದ ಮೇಲೆ ಕಡಿಮೆ ಬಡ್ಡಿಯಲ್ಲಿ ಸಾಲ ದೊರೆಯುತ್ತದೆ ಬ್ಯಾಂಕುಗಳಿಗೆ ಹಲವಾರು ದಾಖಲೆಗಳನ್ನು ಅಡ ಇಟ್ಟು ಮಹಿಳೆಯರು ಅಲೆದಾಡುವ ಪರಿಸ್ಥಿತಿ ತಪ್ಪಿದೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲಿ ಯಾವುದೇ ದಾಖಲಾತಿಗಳನ್ನು ಪಡೆದುಕೊಳ್ಳದೆ ಸುಲಭವಾಗಿ ಸಾಲಗಳು ಪಡೆಯಬಹುದು ಎಂದು ತಿಳಿಸಿದರು.. ಇನ್ನೋರ್ವ ಅತಿಥಿಯಾಗಿ ಭಾಗವಹಿಸಿದ ಯೋಜನಾಧಿಕಾರಿಗಳು ಶಿವಾಜಿ ಮಾತನಾಡಿ ಪಿ ಆರ್ ಕೆ ಬಗ್ಗೆ. ವಾರದ ಸಭೆ ಮಾಡುವ ನಡೆಸುವುದು ನಿಮ್ಮ ಸಂಘವನ್ನು ಇದೆ ರೀತಿಯಾಗಿ ಉತ್ತಮವಾಗಿ ನಡೆಸಿಕೊಂಡು ಹೋಗಿ ಎಂದು ಕಿವಿಮಾತು ಹೇಳಿದರು. ನಂತರ ನಾಲ್ಕು ಸಂಘದ ಸದಸ್ಯರು ಸೇರಿ ಕೇಕ್ ಕಟ್ ಮಾಡಿ ವಾರ್ಷಿಕೋತ್ಸವ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು ಕಾರ್ಯಕ್ರಮವನ್ನು ವಲಯದ ಮೇಲ್ವಿಚಾರಕರಾದ ಅನಿಲ್ ಕುಮಾರ್ ಸ್ವಾಗತಿಸಿದರು ಸ್ಥಳೀಯ ಸೇವಾ ಪ್ರತಿನಿಧಿ ಆರಿಫ್ ವಂದಿಸಿದರು.

Comments
Post a Comment