ಭೂಮಾನಂದ ಕೊಲೆ ಪ್ರಕರಣ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಆ.24 ಬೃಹತ್ ಸಭೆ- ಎಸ್.ಮಾರೆಪ್ಪ. ಜಯ ಧ್ವಜ ನ್ಯೂಸ್ , ರಾಯಚೂರು,ಆ.13- ಹದ್ದಿನಾಳ ಗ್ರಾಮದ ಭೂಮಾನಂದ ಕೊಲೆ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಆ.24 ರಂದು ನಗರದಲ್ಲಿ ಬೃಹತ್ ಸಭೆ ಆಯೋಜಿಸಲಾಗಿದೆ ಎಂದು ಭೂಮಾನಂದ ಕಗ್ಗೊಲೆ ವಿರೋಧಿ ಒಕ್ಕೂಟ ಮುಖಂಡ ಎಸ್.ಮಾರೆಪ್ಪ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇತ್ತೀಚೆಗೆ ನಡೆದ ಭೂಮಾನಂದ ಕೊಲೆ ಪ್ರಕರಣದಲ್ಲಿ ಯಾರನ್ನು ಸಿಲುಕಿಸಲು ನಾವು ಪ್ರಯತ್ನಿಸುತ್ತಿಲ್ಲ ಬದಲಾಗಿ ಕೊಲೆ ಆರೋಪಿಗಳಿಗೆ ಶಿಕ್ಷೆಯಾಗಬೇಕೆಂದು ಮತ್ತು ಜಿಲ್ಲೆಯಲ್ಲಿ ಕೊಲೆ, ಮಾರಾಮಾರಿ ಮುಂತಾದವು ನಿಲ್ಲಬೇಕೆಂದು ನಮ್ಮ ಹೋರಾಟವಾಗಿದೆ ಎಂದರು.
ಪ್ರಕರಣದಲ್ಲಿ ಪತ್ರಕರ್ತ ಭೀಮರಾಯ ಹದ್ದಿನಾಳ ಪಾತ್ರವಿರುವ ಬಗ್ಗೆ ದೂರುದಾರರು ಹೇಳಿಕೆ ಅರಿತುಕೊಂಡು ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ ಹೊರತು ನಮ್ಮ ಒತ್ತಾಯಕ್ಕಲ್ಲವೆಂದರು. ಯಾವುದೆ ಒಂದು ಸಮುದಾಯ ಮತ್ತೊಂದು ಸಮುದಾಯಕ್ಕೆ ವೈರಿಯಂದು ಬಿಂಬಿಸುವ ಕಾರ್ಯ ನಿಲ್ಲಬೇಕು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮತ್ತು ಸರ್ಕಾರ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡದಂತೆ ಕ್ರಮವಹಿಸಬೇಕು ಎಂದರು. ಆ.23 ರಂದು ಹದ್ದಿನಾಳ ಗ್ರಾಮದಿಂದ ಬೈಕ್ ಜಾಥಾ ಮುಖಾಂತರ ಆ.24ರಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗಿದೆ ಒಂದು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ರವೀಂದ್ರನಾಥ ಪಟ್ಟಿ, ಜೆ.ಬಿ.ರಾಜು,ಅಂಬಣ್ಣ ಅರೋಲಿಕರ್, ಎಂ.ಆರ್.ಭೇರಿ, ಹೇಮರಾಜ್ ಅಸ್ಕಿಹಾಳ, ಜೈ ಭೀಮ್ ವಲ್ಲಭ, ವಿಶ್ವನಾಥ್ ಪಟ್ಟಿ, ಶ್ರೀ ನಿವಾಸ್ ಕೊಪ್ಪರ ಇನ್ನಿತರರು ಇದ್ದರು.


Comments
Post a Comment