ನಗರದ ವಿವಿಧೆಡೆ ಸಂಭ್ರಮದಿಂದ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ. ಜಯಧ್ವಜ ನ್ಯೂಸ್ , ರಾಯಚೂರು ,ಆ.15- ನಗರದ ವಿವಿಧೆಡೆ ಸಂಭ್ರಮದಿಂದ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ. ಮಹಾನಗರ ಪಾಲಿಕೆಯಲ್ಲಿ:ಪಾಲಿಕೆ ಆಯುಕ್ತರಾದ ಶ್ರೀ ಜುಬಿನ್ ಮಹಾಪಾತ್ರ ಭಾ ಆ ಸೇ ರವರು ಬೆಳಿಗ್ಗೆ 6-30 ಕ್ಕೆ ನಗರದ ಗಾಂಧಿ ವೃತ್ತದಲ್ಲಿ ಹಾಗೂ 6-45 ಕ್ಕೆ ಕ್ರೀಡಾಂಗದಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಪೂಜೆ ಸಮರ್ಪಿಸಿ ಮಾಲಾರ್ಪಣೆ ಮಾಡಿದರು,
ನಂತರ 7-30 ಕ್ಕೆ ಮಹಾನಗರ ಪಾಲಿಕೆಯ ವಲಯ-1 (ಹಳೆಯ ನಗರಸಭೆ) ಧ್ವಜಾರೋಹಣ ಕೊನೆಯದಾಗಿ 7-45ಕ್ಕೆ ಆಯುಕ್ತರ ಕಛೇರಿ ವಲಯ-2 ಧ್ವಜಾರೋಹಣ ನೆರೆವೇರಿಸಿದರು ಈ ಸುಸಂಧರ್ಭದಲ್ಲಿ ಮಾತನಾಡಿ
ಇಂದು ನಮ್ಮ ದೇಶದ ಇತಿಹಾಸದಲ್ಲಿ ಅತ್ಯಂತ ಪವಿತ್ರವಾದ ದಿನ. 1947ರ ಆಗಸ್ಟ್ 15ರಂದು ನಮ್ಮ ಭಾರತ ದೇಶವು ಬ್ರಿಟಿಷರ ದಾಸ್ಯದಿಂದ ಮುಕ್ತವಾಗಿ ಸ್ವತಂತ್ರವಾಯಿತು."
*ನಮ್ಮ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸೋಣ,ದೇಶದ ಏಕತೆ ಮತ್ತು ಪ್ರಗತಿಗಾಗಿ ಹೆಮ್ಮೆಯಿಂದ ಕೈಜೋಡಿಸೋಣ.*
*ನಮ್ಮ ರಾಷ್ಟ್ರದ ಸ್ವಾತಂತ್ರ್ಯದ ಹೆಮ್ಮೆ ನಮ್ಮ ನಿಮ್ಮ ಹೃದಯದಲ್ಲಿ ಶಾಶ್ವತವಾಗಿ ಬೆಳಗಲಿ ಎಂದು ಆಶಯ ವ್ಯಕ್ತಪಡಿಸಿ ಹಾಗೂ
80ನೇ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ಯ ನಗರದ ಜನತೆಗೆ ಶುಭ ಕೋರಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಸ್ವಾತಂತ್ರ ಪೂರ್ವದಲ್ಲಿ ದೇಶವು ತಿನ್ನುವ ಪದಾರ್ಥಗಳಾದ ಗೋದಿ ಇನ್ನಿತರ ವಸ್ತುಗಳು ಅಭಾವ ಎದ್ದು ಕಾಣುತಿತ್ತು ಆದರೇ ನಮ್ಮ ಸರ್ವತೋಮುಖ ಅಭಿವೃದ್ಧಿಯಾಗಿದೆ ಗಗನ ಯಾನದಲ್ಲಿ ದೇಶವು ಸೂಪರ್ ಪವರ್ ಆಗಿದೆ.. ಜಗತ್ತಿನಲ್ಲಿ ಅತೀ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ದೇಶವಾಗಿದೆ ನಮ್ಮ ದೇಶವು ಆಡಳಿತದಲ್ಲಿ ಸಾಕಷ್ಟು ಮೈಲುಗಲ್ಲು ಸ್ಥಾತಪಿಸಿದೆ.. ನಮ್ಮ ದೇಶದ ಸಂವಿಧಾನದಲ್ಲಿ ಮೂರು ಅಂಗಗಳು ಇರುವುದು ಮತ್ತು ಮಾಧ್ಯಮ ಅಂಗ ಸೇರಿ ನಾಲ್ಕು ಅಂಗಗಳು ಪರಸ್ಪರ ಹೊಂದಾಣಿಕೆ ಮತ್ತು ಜವಾಬ್ದಾರಿಯುತ ಕೆಲಸ ನಿರ್ವಹಿಸುವುದು ನಮ್ಮೆಲ್ಲರ ಕರ್ತವ್ಯ. ವರ್ಷದಲ್ಲಿ ನಾಲ್ಕು ಪ್ರಜಾಪ್ರಭುತ್ವ ಹಬ್ಬಗಳನ್ನು ಆಚರಿಸುತ್ತಿವೆ..
ಕಳೆದ ಯಾವ ಸ್ಥಿತಿಯಲ್ಲಿ ನಮ್ಮ ನಗರವಿತ್ತು ಈಗ ಆಗಿರುವ ಸಣ್ಣ ಪುಟ್ಟ ಬದಲಾವಣೆ ಆದಾಗ ನಮ್ಮ ಯಶಸ್ಸು ಎಂದು ಭಾವಿಸೋಣ. ಯಾವುದೇ ಬದಲಾವಣೆ ಕಂಡು ಬರದೆ ಇದ್ದರೇ ಅದು ನಮ್ಮ ವೃಫಲ್ಯ. ಸುಧಾರಣೆಗಾಗಿ ಮಾಡು ನೀಲ ನಕ್ಷೆ ತಯಾರಿಸಿ ಕೆಲಸ ನಿರ್ವಹಿಸಬೇಕಿದೆ. ನಾವೆಲ್ಲ ಪ್ರಜಾಪ್ರಭುತ್ವ ಕಾರ್ಯಾಂಗ ವ್ಯವಸ್ಥೆ ಮಾಡುವುದು ನಮ್ಮ ಪುಣ್ಯ. ಸಾರ್ವಜನಿಕರ ತೆರಿಗೆ ಪಾವತಿಸಿದ ಹಣದಿಂದ ನಮಗೆಲ್ಲರಿಗೂ ಸಂಬಳ ದೋರೆಯುತ್ತೀರುವುದು. ಕೆಲವು ಸಾರಿ ಅಧಿಕಾರಿಗಳು/ಸಿಬ್ಬಂದಿಗಳು ಜೋತೆಗೆ ಕಾಲ ಮಿತಿಯಲ್ಲಿ ಕೆಲಸ ಕಾರ್ಯ ಅಗದ್ದಿದ್ದಾಗ ಸಿಡಿಮಿಡಿಗೊಂಡಿರುವುದು ಸಹಜ ಆದರೆ ಅದು ದ್ವೇಷ ವೃಷಮ್ಯವಲ್ಲ. ಉತ್ತಮ ಸಮಾಜ, ನಗರ ಹಾಗೂ ದೇಶಕ್ಕಾಗಿ ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವುದು ಅಷ್ಟು ಸುಲಭ ಕೆಲಸ ಅಲ್ಲ.. ಕೇಲವು ಸರಕಾರ ನೀಡಿದ ಗಡುವಿನಲ್ಲಿ ಕೆಲಸ ಕಡ್ಡಾಯವಾಗಿರುತ್ತದೆ.. ಇನ್ನು ಮಹಾನಗರದ ಸಾರ್ವಜನಿಕರ ಹಿತದ್ರೃಷ್ಠಿಯಿಂದ ಯೋಜನೆ ರೂಪಿಸಿ ಪ್ರತಿಯೊಬ್ಬ ಅಧಿಕಾರಿಗಳು/ಸಿಬ್ಬಂದಿಗಳು ಒಟ್ಟಾಗಿ ಕೆಲಸ ಮಾಡಿದಾಗ ಸಕಾಲಕ್ಕೆ ಗುರಿ ಮುಟ್ಟಲು ಸಾಧ್ಯ, ಇದುವರೆಗೂ ಮಹಾನಗರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ಅಗಿವೆ ಅದರ ಶ್ರೇಯಸ್ಸು ನಮ್ಮ ಅಧಿಕಾರಿಗಳು/ಸಿಬ್ಬಂದಿಗಳಿಗೆ ಸಿಕ್ಕಿದೆ..
ಅದಕ್ಕಾಗಿ ಉಪ-ಆಯುಕ್ತರುಗಳಿಗೆ, ಅಧಿಕಾರಿಗಳಿಗೆ, ಪೌರಕಾರ್ಮಿಕರಿಗೆ ಹಾಗೂ ಸಿಬ್ಬಂದಿಗಳಿಗೆ ಧನ್ಯವಾದ ಹೇಳಿದರು..
ರಾಯಚೂರು ಮಹಾನಗರ ಹೇರಳವಾದ ಸಂಪನ್ಮೂಲಗಳು ಇವೆ. ಎರಡು ಕಡೆ ನದಿಗಳು ಹಾಗೂ ಭೂಭಾಗ ಪ್ರದೇಶ ಹೊಂದಿದೆ.. ಸಾಕಷ್ಟು ವಿದ್ಯಾವಂತರು ನಿರುದ್ಯೋಗಿಗಳಾಗಿ ಇದ್ದಾರೆ..ಅಂತಹ ವಿದ್ಯಾವಂತರನ್ನು ಬಳಸಿಕೊಂಡು ಇನ್ನು ಹೆಚ್ಚಿನ ಕಾರ್ಯ ಕ್ಷಮತೆಯಿಂದ ನಿರ್ವಹಿಸಬೇಕು..
ಸ್ವಚ್ಛ ಭಾರತ ಯೋಜನೆಯಲ್ಲಿ ಭಾರತ ಸರಕಾರದಿಂದ 2 ಬಾರಿ ಪ್ರಶಂಸೆ ಪತ್ರ ಲಭಿಸಿದೆ ಅಷ್ಟೊಂದು ಸುಲಭದ ಮಾತಲ್ಲ..
ಇತ್ತೀಚಿಗೆ ನಡೆದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಡಿಜಿಟಲೖಜೇಶನ್ ಕಾರ್ಯದಲ್ಲಿ ನಮ್ಮ ಮಹಾನಗರ ಪಾಲಿಕೆಗೆ ದ್ವಿತೀಯ ಸ್ಥಾನ ಲಭಿಸಿದೆ.
ಹಿರಿಯ ಅಧಿಕಾರಿಗಳು/ಸಿಬ್ಬಂದಿಗಳು ರಾಜ್ಯದ ವಿವಿಧ ಸ್ಥಳದಲ್ಲಿ ಕೆಲಸ ಮಾಡಿ ಬಂದ ತಮ್ಮ ಅನುಭವಗಳ ಹಂಚಿಕೊಂಡು ಮುಂಬರುವ ಸ್ವಾತಂತ್ರ್ಯ ದಿನಾಚರಣೆಯ ಸಂಧರ್ಭ ದೇಶದ 10 ನೇ ಪಡೆದುಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಉಪ-ಆಯುಕ್ತರು (ಕಂದಾಯ),ಉಪ-ಆಯುಕ್ತರು (ಆಡಳಿತ) ಉಪ-ಆಯುಕ್ತರು (ಅಭಿವೃದ್ಧಿ)
ಆಡಳಿತಾಧಿಕಾರಿಗಳು (ಆಡಳಿತ),ಆಡಳಿತಾಧಿಕಾರಿಗಳು (ಕಂದಾಯ), ಮುಖ್ಯ ಲೇಕ್ಕಾಧಿಕಾರಿಗಳು, ಉಭಯ ವಲಯ ಆಯುಕ್ತರುಗಳು,ಲೆಕ್ಕಾಧೀಕ್ಷಕರು, ಡೇ-ನಲ್ಮ್ ಸಿ ಎ ಓ, ಸಹಾಯಕ ಕಾರ್ಯ ನಿರ್ವಾಹಕರು ಗಳು ಹಾಗೂ ಇತರೆ ಅಧಿಕಾರಿಗಳು/ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ:
ಸರ್ವಧರ್ಮ ಸಮನ್ವಯತೆ ಸಾರೋಣ : ಪ್ರೊ. ಶಿವಾನಂದ ಕೆಳಗಿನಮನಿ.
ಈ ದೇಶ ನನ್ನದು ದೇಶದಲ್ಲಿರುವ ಭಾರತೀಯರು ನನ್ನವರು ಅದನ್ನು ಬಿಟ್ಟು ಹೊರಗಿನವರು ಈ ದೇಶವನ್ನು ಆಳಲು ಸಾಧ್ಯವಿಲ್ಲ ಎನ್ನುವ ಆಲೋಚನೆಯನ್ನು ಅಂದಿನ ಪ್ರತಿಯೊಬ್ಬ ನಾಯಕರು ಜನಸಾಮಾನ್ಯರಲ್ಲಿ ಬಿತ್ತಿದರು, ಹೀಗೆ ಒಬ್ಬರಿಂದ ಆಳಿಸಿಕೊಂಡು ಸ್ವತಂತ್ರ ಹೀನರಾಗಿ ಬದುಕಿದರೆ ಆ ಪರಿಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ಇಂದಿನ ಯುವಪೀಳಿಗೆ ಅರ್ಥ ಮಾಡಿಕೊಳ್ಳಬೇಕು ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಶಿವಾನಂದ ಕೆಳಗಿನಮನಿ ಅವರು ಹೇಳಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಆವರಣದಲ್ಲಿಂದು 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಂಡಿದ್ದು ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿ ವಿಶೇಷ ಸಂದೇಶ ನೀಡುತ್ತಾ ಮಾತನಾಡಿದ ಅವರು ಈ ದಿನವು 200 ವರ್ಷಗಳ ಬ್ರಿಟಿಷ್ ಆಳ್ವಿಕೆಯ ಅಂತ್ಯವನ್ನು ಸೂಚಿಸುತ್ತದೆ. ಆಗಸ್ಟ್ 15, 1947 ರಂದು, ದೀರ್ಘ ಮತ್ತು ಕಠಿಣ ಹೋರಾಟದ ನಂತರ, ಭಾರತವು ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿತು. ಅಂದಿನಿಂದ, ಪ್ರತಿ ವರ್ಷ ಈ ಸಂದರ್ಭವನ್ನು ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಮತ್ತು ಈ ಸ್ವಾತಂತ್ರ್ಯವನ್ನು ಸಾಧ್ಯವಾಗಿಸಿದ ವೀರರನ್ನು ಗೌರವಿಸುವ ಮೂಲಕ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಭಾರತವು 1947ರ ಆಗಸ್ಟ್ 15ರಂದು ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯಿತು. ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಮುಂತಾದ ನಾಯಕರ ಅಹಿಂಸಾಸತ್ಮಕ ಮತ್ತು ಕ್ರಾಂತಿಕಾರಿ ಹೋರಾಟಗಳು, 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ, ಜಲಿಯನ್ ವಾಲಾಬಾಗ್ ಹತ್ಯಾಕಾಂಡ, ಕ್ವಿಟ್ ಇಂಡಿಯಾ ಚಳವಳಿ ಹಾಗೂ 1950ರ ಜನವರಿ 26ರಂದು ಸಂವಿಧಾನ ಜಾರಿಗೆ ಬಂದದ್ದು ದೇಶದ ಪ್ರಮುಖ ಐತಿಹಾಸಿಕ ಘಟನೆಗಳಾಗಿವೆ.
ಸ್ವತಂತ್ರ ಬಂದು ಎಂಟು ದಶಕಗಳು ಕಳೆದ ನಂತರವೂ ನಾವಿಂದು ಕೂಡ ಮೂಢನಂಬಿಕೆ,ಜಾತಿಪದ್ಧತಿ, ಕಂದಾಚಾರ ಅರ್ಥವಿಲ್ಲದ ಆಚರಣೆ, ಮಹಿಳಾ ತಾರತಮ್ಯ ,ಬೌದ್ಧಿಕ ದಿವಾಳಿತನವನ್ನು ಅನುಭವಿಸುತ್ತಿದ್ದೇವೆ. ಇಂದು ನಮ್ಮ ವಿದ್ಯೆ ವಿವೇಕದ ಮೂಲಕ ಸರ್ವಧರ್ಮ ಸಮನ್ವಯತೆಯನ್ನು ಸಾರುವುದು ನಮ್ಮೆಲ್ಲರ ಕರ್ತವ್ಯವಾಗಿದೆ.ರಾಜಕೀಯ ಸ್ವಾತಂತ್ರ್ಯದೊಂದಿಗೆ ಸಾಮಾಜಿಕ ಹಾಗೂ ಆರ್ಥಿಕ ಸಮಾನತೆ ಸಿಕ್ಕಾಗ ಮಾತ್ರ ನಿಜವಾದ ಸ್ವಾತಂತ್ರ್ಯ ಸಾಧ್ಯ ಎಂಬುದು ಡಾ. ಬಿ.ಆರ್. ಅಂಬೇಡ್ಕರ್ ಅವರ ದೃಢವಾದ ನಂಬಿಕೆಯಾಗಿತ್ತು. ಬ್ರಿಟಿಷರಿಂದ ಮುಕ್ತಿ ಪಡೆದರೂ ದೇಶದೊಳಗೆ ಬೇರೂರಿದ್ದ ಜಾತಿ ವ್ಯವಸ್ಥೆ ಮತ್ತು ಅಸಮಾನತೆ ಹೊಡೆದೊಡಿಸದಿದ್ದರೆ ಸ್ವಾತಂತ್ರ್ಯಕ್ಕೆ ಅರ್ಥವಿರುವುದಿಲ್ಲ ಎಂದು ಅವರು ಎಚ್ಚರಿಸಿದ್ದರು.ಭಾರತೀಯ ಸಂವಿಧಾನ ರಚನೆಯ ಮೂಲಕ ಪ್ರತಿಯೊಬ್ಬ ನಾಗರಿಕನಿಗೂ ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳನ್ನು ಖಾತರಿಪಡಿಸಿ, ಅಸ್ಪೃಶ್ಯತೆ ನಿವಾರಣೆ ಮತ್ತು ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವವನ್ನು ಗಟ್ಟಿಗೊಳಿಸಿ,ಸಮಾನ ಅವಕಾಶಗಳನ್ನು ಕಲ್ಪಿಸಲು ಶ್ರಮಿಸಿದರು.
ಭಾರತವು ವೈವಿಧ್ಯತೆಯ ದೇಶವಾಗಿದ್ದು ವೈವಿಧ್ಯತೆಯಲ್ಲಿ ಏಕತೆಯೇ ನಮ್ಮನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಶಕ್ತಿಯಾಗಿದೆ.
ಭಾರತವು ಜಾಗತಿಕ ವಿದ್ಯಮಾನವಾಗಿದ್ದು, ಭಾರತವನ್ನು ಅಭಿವೃದ್ಧಿಗೆ ತರುವಲ್ಲಿ ಇಂದಿನ ಯುವಕರ ಪಾತ್ರ ಮುಖ್ಯವಾಗಿದೆ.
ಅಂದು ದೇಶದ ಸ್ವತಂತ್ರಕ್ಕಾಗಿ ಒಂದಾದ ನಾಯಕರಂತೆ ಇಂದು ನಮ್ಮ ದೇಶದ ಯುವಕರು ಒಂದಾಗಿ ದೇಶದ ಶಾಂತಿಗೆ ಧಕ್ಕೆ ತರುವ ಶಕ್ತಿಗಳ ವಿರುದ್ಧ ಹೋರಾಡಲು ಮುಂದಾಗ ಬೇಕಾಗಿದೆ. ತಮ್ಮ ಅಭಿವೃದ್ಧಿಯ ಜೊತೆಗೆ ದೇಶದ ಅಭಿವೃದ್ಧಿಯ ಬಗ್ಗೆ ಗಮನ ಹರಿಸಬೇಕು. ವಿದ್ಯಾರ್ಥಿಗಳಾದ ತಾವು ಜೀವನದಲ್ಲಿ ಚೆನ್ನಾಗಿ ಓದಿಕೊಳ್ಳುವ ಜೊತೆಗೆ ಪ್ರಪಂಚ ಜ್ಞಾನವನ್ನು ಬೆಳೆಸಿಕೊಂಡು, ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಿ ಎಂದು ವಿಶೇಷ ಸಂದೇಶ ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ
ಕುಲಸಚಿವರಾದ ಡಾ. ಎ ಚೆನ್ನಪ್ಪ, ಪರೀಕ್ಷಾಂಗ ಕುಲಸಚಿವರಾದ ಪ್ರೊ. ಜ್ಯೋತಿ ಧಮ್ಮ ಪ್ರಕಾಶ್, ಡೀನರಾದ ಪ್ರೊ ಪಾರ್ವತಿ ಸಿ ಎಸ್, ಡಾ. ಕೆ ವೆಂಕಟೇಶ್ ಡಾ ಲತಾ ಎಂ ಎಸ್, ಡಾ ಜಿ ಎಸ್ ಬಿರಾದರ್, ದೈಹಿಕ ಶಿಕ್ಷಣ ಹಾಗೂ ಕ್ರೀಡಾ ವಿಭಾಗದ ಸಂಯೋಜಕ ಮಲ್ಲಿಕಾರ್ಜುನ್ ಎನ್, ಸಿಂಡಿಕೇಟ್ ಸದಸ್ಯರಾದ ಡಾ. ಮೀನಾಕ್ಷಿ ಖಂಡಿಮಠ, ಡಿ.ಆರ್. ಚಿನ್ನ, ಶ್ರೇಯಾಂಕ ಹೆಚ್.ವಿ ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಇತಿಹಾಸ ವಿಭಾಗದ ವಿದ್ಯಾರ್ಥಿನಿ ಸ್ನೇಹ ವಂದೇ ಮಾತರಂ ಗೀತೆ ಹಾಡಿದರು. ಇಂಗ್ಲಿಷ್ ವಿಭಾಗದ ಉಪನ್ಯಾಸಕರಾದ ಅನಿಲ್ ಅಪ್ರಾಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಆಕಾಶವಾಣಿ ಕೇಂದ್ರದಲ್ಲಿ: ಹಿರಿಯರ ತ್ಯಾಗದ ಫಲ ಸ್ವತಂತ್ರ್ಯ ದಿನಾಚರಣೆ: ವೆಂಕಟೇಶ ಬೇವಿನಬೆಂಚಿ.
ಸರಕಾರದ ಶಿಷ್ಟಾಚಾರದಂತೆ ರಾಷ್ಟಧ್ವಜ ನೇರವೇರಿಸಿದ ನಂತರ ರಾಷ್ಟಗೀತೆ ಮತ್ತು ವಂದೇ ಮಾತರಂ ಗೀತೆಯನ್ನು ಹಾಡಿ ರಾಷ್ಟ್ರೀಯ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಆಕಾಶವಾಣಿ ಕಾರ್ಯಕ್ರಮದ ಮುಖ್ಯಸ್ಥರಾದ ವೆಂಕಟೇಶ ಬೇವಿನಬೆಂಚಿ ಮಾತನಾಡಿ, ನಮ್ಮ ಹಿರಿಯರ ತ್ಯಾಗ ಬಲಿದಾನಗಳ ಕಾರಣದಿಂದ ನಮಗೆ ಸ್ವಾತಂತ್ರ್ಯ ಲಭಿಸಿದೆ.
ಸ್ವತಂತ್ರಕ್ಕಾಗಿ ಹೋರಾಡಿದ ಎಲ್ಲಾ ಸ್ವಾತಂತ್ರ ಹೋರಾಟಗಾರರನ್ನು ಇಂದು ನಾವೆಲ್ಲರೂ ನೆನಪು ಮಾಡಿಕೊಳ್ಳಲೇಬೇಕು. ಅವರ ತ್ಯಾಗದ ಫಲದಿಂದ ಇಂದು ಸ್ವತಂತ್ರವಾಗಿ ದೇಶವನ್ನು ಮುನ್ನಡಿಸುತ್ತಿದ್ದೇವೆ ಎಂದರು.
ಸ್ವತಂತ್ರ ದಿನಾಚರಣೆಯನ್ನು ಆಚರಿಸುವ ಈ ಸಂದರ್ಭದಲ್ಲಿ ಎಲ್ಲಾ ರಂಗಗಳಲ್ಲಿ ಸ್ವಾತಂತ್ರ ಪಡೆಯುವಂತೆ ಆಗಬೇಕು, ಶೈಕ್ಷಣಿಕವಾಗಿ, ಸಾಮಾಜಿಕವಾಗಿ,ಮತ್ತು ಆರ್ಥಿಕವಾಗಿ ಸ್ವತಂತ್ರವನ್ನು ಪಡೆದಾಗ ಮಾತ್ರ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ತಾಂತ್ರಿಕ ವಿಭಾಗದ ಮುಖ್ಯಸ್ಥರಾಗಿ ಅರವಿಂದಾಕ್ಷಣ, ತಾಂತ್ರಿಕ ವಿಭಾಗದ ಅರಸು,ಸೋಮಶೇಖರ್, ಮಲ್ಲಿಕಾರ್ಜುನ, ಆಡಳಿತ ವಿಭಾಗದ ನಾಗಮಣಿ, ಉದ್ಘೋಷಕರಾದ ಶ್ರೀದೇವಿ,ರಮಾ ಕುಲಕರ್ಣಿ,ಶ್ರೀನಿವಾಸ ಕುಲಕರ್ಣಿ, ನಾಗರತ್ನ,ನರೇಂದ್ರ,ಪುರುಷ ರಾಮ,ಉಮೇಶ್ ಸೇರಿದಂತೆ ಇತರ ಸಿಬ್ಬಂದಿ ಇದ್ದರು.
ಸೂರ್ಯವಂಶಿ ಕ್ಷತ್ರಿಯ ಕಾಟಿಕ್ ಸಮಾಜದ: ರಾಯಚೂರು ನಗರದಲ್ಲಿ ೮೦ನೇ ವರ್ಷದ ಸ್ವಾತಂತ್ರö್ಯ ದಿನಾಚರಣೆಯ ನಿಮಿತ್ಯ ಶ್ರೀ ಸೂರ್ಯವಂಶಿ ಕ್ಷತ್ರಿಯ ಕಾಟಿಕ್ ಸಮಾಜದ ಭವನದಲ್ಲಿ ಅಧ್ಯಕ್ಷರಾದ ಶ್ರೀ ಶಿವಶಂಕರ ನಿಜಾಮಕಾರ ಅವರು ಧ್ವಜಾರೋಹಣ ಮಾಡುವುದರ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ನಾಗೇಶ ಜಗತಕಾರಿ ಅವರು ನಿರ್ವಹಿಸಿದರು. ಈ ಸಂದರ್ಭದಲ್ಲಿ ವಂದೇ ಮಾತರಂ ಹಾಡಿನ ೧೫೦ನೇ ವರ್ಷದ ನಿಮಿತ್ಯ ಸಮಾಜದಲ್ಲಿ ನೇರದಿದ್ದ ಎಲ್ಲಾ ಸದಸ್ಯರು ಹಾಡನ್ನು ಹಾಡುವುದರ ಮೂಲಕ ವಂದೇ ಮಾತರಂ ಹಾಡಿಗೆ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಯುವಾಧ್ಯಕ್ಷರಾದ ಶ್ರೀ ವಿಶಾಲ್ ಕಲ್ಯಾಣಕಾರ್, ಹಾಗೂ ಸಮಾಜದ ಹಿರಿಯ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು, ಯುವಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಸತೀಶ ಕಲ್ಯಾಣಕಾರ್. ಅಶೋಕ ಕುಮಾರ ಮೈದಾರಕರ್, ಅಶ್ವಿನ್ ಕಲ್ಯಾಣಕರ್ ದೇಶಭಕ್ತಿಗೀತೆಗಳನ್ನು ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಮೇರೆಗೂ ತಂದರೂ ಕೋನೆಯಲ್ಲಿ ಶ್ರೀ ಶಿವಶಂಕರ ನಿಜಾಮಕಾರ್ ಕಾರ್ಯಕ್ರಮವನ್ನು ವಂದಾನಾರ್ಪಣೆ ಮೂಲಕ ಮುಕ್ತಾಯಗೊಳಿಸಿದರು.
ಮಾಣಿಕ್ ಪ್ರಭು ಅಂಧ ಮಕ್ಕಳ ಶಾಲೆ: ಸ್ವಾತಂತ್ರ್ಯ ನಗರದ ಮಾಣಿಕ್ ಪ್ರಭು ಅಂಧ ಮಕ್ಕಳ ಶಾಲೆಯ ಆವರಣದಲ್ಲಿ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಆಚರಿಸಲಾಯಿತು.
ರಾಯಚೂರು ರಿಪೋರ್ಟರ್ಸ್ ಗಿಲ್ಡ್:ನಗರದ ಪತ್ರಿಕಾ ಭವನದಲ್ಲಿ ರಾಯಚೂರು ರಿಪೋರ್ಟ್ ರ್ಸ್ ಗಿಲ್ಡ್ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ಪತ್ರಕರ್ತರು ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆಯ ಅಧಿಕಾರಿಗಳು, ಸಿಬಂದಿಗಳಿದ್ದರು.






Comments
Post a Comment