ಸಿಕಿಂದರ್ ಬಾದ್ ನಿಂದ ತಿರುಪತಿವರೆಗೆ ವಾರಕ್ಕೆರಡು ಸಲ ಸೂಪರ್ ಫಾಸ್ಟ್ ಎಕ್ಸ ಪ್ರೆಸ್ ರೈಲು- ಡಾ.ಬಾಬುರಾವ್ 
ಜಯ ಧ್ವಜ ನ್ಯೂಸ್ ,  ರಾಯಚೂರು,ಆ.16- ಮುತ್ತಿನ ನಗರಿಯಿಂದ ಶ್ರೀ ವೆಂಕಟೇಶ್ವರನ ಸನ್ನಿಧಿಗೆ ತಿರುಪತಿ ಸೂಪರ್ ಫಾಸ್ಟ್  ಎಕ್ಸಪ್ರೆಸ್ ರೈಲು ವಾರಕ್ಕೆರಡು ಬಾರಿ ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿರುವುದಾಗಿ ರೈಲ್ವೆ ಸಲಹಾ ಸಮಿತಿ ಮಂಡಳಿ ಮಾಜಿ ಸದಸ್ಯ ಡಾ. ಬಾಬುರಾವ್ ತಿಳಿಸಿದ್ದಾರೆ.
ರೈಲು (ಸಂಖ್ಯೆ 12732) ಬುಧವಾರ ಮತ್ತು ಶನಿವಾರ ಸಂಚರಿಸಲಿದೆ. ಸಿಕಿಂದರ್ ಬಾದ್ ನಿಂದ ಹೊರಡುವ ರೈಲು ತಿರುಪತಿ ಮುಖ್ಯ ನಿಲ್ದಾಣದವರೆಗೆ ಸಂಚರಿಸುತ್ತದೆ. ಸಂಜೆ 4.15 ಕ್ಕೆ ಸಿಕಿಂದರ್ ಬಾದ್ ಜಂಕ್ಷನ್ ನಿಂದ ಹೊರಡುವ ಈ ರೈಲು ಸಂಜೆ 4.50 ಕ್ಕೆ ಲಿಂಗಪಲ್ಲಿ, ಸಂಜೆ 5.15 ಕ್ಕೆ ವಿಕಾರಾಬಾದ್, ರಾತ್ರಿ 8.40 ಕ್ಕೆರಾಯಚೂರು, ರಾತ್ರಿ9.35 ಕ್ಕೆಆದೋನಿ, ರಾತ್ರಿ 10.50ಕ್ಕೆ ಗುಂತಕಲ್ ಜಂ , ರಾತ್ರಿ 11.30 ಕ್ಕೆ ಗೂಟಿ ಜಂ.  ಎರಡನೇ ದಿನ 12.30 ಕ್ಕೆ ಅನಂತಪುರ, ಬೆಳಿಗ್ಗೆ 1.20 ಧರ್ಮಾವರಂ ಜಂ. ಬೆಳಿಗ್ಗೆ 2 ಗಂಟೆಗೆ ಕದಿರಿ, ಬೆಳಿಗ್ಗೆ 2.25 ಕ್ಕೆ ಮುಲಕಲ್ ಚೆರುವು, ಬೆಳಿಗ್ಗೆ 3.05 ಕ್ಕೆ ಮದನಪಲ್ಲಿ ರಸ್ತೆ, ಬೆಳಿಗ್ಗೆ 3.30ಕ್ಕೆ ಕಲಿಕಿರಿ, ಬೆಳಿಗ್ಗೆ 3.50 ಕ್ಎಕ ಪಿಲೇರ್, ಬೆಳಿಗ್ಗೆ 4.40 ಪಾಕಾಲ ಜಂ. ಬೆಳಿಗ್ಗೆ 6.25 ತಿರುಪತಿ ಗಮ್ಯಸ್ಥಾನಕ್ಕೆ ತಲುಪಲಿದೆ ಎಂದು ಅವರು ತಿಳಿಸಿದ್ದಾರೆ. 
ಈ ರೈಲನ್ನು ಓಡಿಸುವಂತೆ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವಿ ಹಾಗೂ ರೈಲ್ವೆ ರಾಜ್ಯ ಸಚಿವ ವಿ.ಸೋಮವಣ್ಣ ಅವರಿಗೆ ಮನವಿ ಸಲ್ಲಿಸಿ ಈ ರೈಲನ್ನು ಓಡಿಸುವಂತೆ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿ ಈಗ ರೈಲು ಸಂಚಾರಕ್ಕೆ ಮುಂದಾಗಿರುವ ರೈಲ್ವೆ ಇಲಾಖೆಯ ಸಚಿವರಿಗೆ ಅಭಿನಂದನೆಗಳು. ಈ ಭಾಗದಿಂದ ತಿರುಪತಿ ವೆಂಕಟೇಶ್ವರ ಸನ್ನಿಧಿಗೆ ತೆರಳುವ ಭಕ್ತರ ಸಂಖ್ಯೆ ಹೆಚ್ಚಿದೆ ಎನ್ನುವುದು ಗಮನಾರ್ಹ. ತಿರುಪತಿ ವೆಂಕಟೇಶ್ವರನ ಭಕ್ತರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

Comments

Popular posts from this blog