ಆ.20 ದೇವರಾಜ ಅರಸು ಜಯಂತಿ ಆಚರಣೆ:    ಸೆಪ್ಟೆಂಬರ್ ನಲ್ಲಿ ಅರಸು ಪುತ್ಥಳಿ ಅನಾವರಣ- ಶಾಂತಪ್ಪ.                                                                     ಜಯ ಧ್ವಜ ನ್ಯೂಸ್, ರಾಯಚೂರು,ಆ.17- ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸುರವರ ಜಯಂತಿಯನ್ನು ಜಿಲ್ಲಾಡಳಿತ ಹಾಗೂ ಹಿಂದುಳಿದ ಜಾತಿ ಒಕ್ಕೂಟದಿಂದ ಆ.20ರಂದು ಆಯೋಜಿಸಲಾಗಿದೆ ಎಂದು ಜಿಲ್ಲಾ ಹಿಂದುಳಿದ ಜಾತಿ ಒಕ್ಕೂಟದ ಅಧ್ಯಕ್ಷ ಕೆ.ಶಾಂತಪ್ಪ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದೇವರಾಜು ಅರಸು ರಾಜ್ಯದ ಜನರಿಗೆ ನೀಡಿದ ಕೊಡುಗೆ ಅವಿಸ್ಮರಣೀಯ ಅವರ‌ ಜಯಂತಿಯನ್ನು ಆ.20ರಂದು ಬೆಳಿಗ್ಗೆ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಲಾಗಿದೆ ಎಂದರು.

ಮೊದಲಿಗೆ ಮಹಿಳಾ ಸಮಾಜದಿಂದ ಭಾವಚಿತ್ರ ಮೆರವಣಿಗೆ ನಂತರ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು. ಜನಪ್ರತಿನಿಧಿಗಳು, ಅಧಿಕಾರಿಗಳು ಸಮಾಜದ ಮುಖಂಡರು ಅನೇಕರು ಭಾಗವಹಿಸಲಿದ್ದು ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದರು. ನಗರದಲ್ಲಿ ಮಂತ್ರಾಲಯ ರಸ್ತೆಯಲ್ಲಿ ಅರಸುರವರ ಪುತ್ಥಳಿ ಅನಾವರಣಕ್ಕೆ ಸಿದ್ದವಾಗಿದೆ ಸೆ.13 ರಿಂದ 15ರೊಳಗೆ ಉದ್ಘಾಟನೆಗೊಳಲ್ಲಿದ್ದು ಸಿಎಂ, ಮಾಜಿ ಸಿಎಂ ಸೇರಿದಂತೆ ಸಚಿವರು ಆಗಮಿಸಲಿದ್ದಾರೆ ಎಂದರು. ಹಿಂದುಳಿದ ಜಾತಿಗಳಿಗೆ ಮಂಗಳ ಕಾರ್ಯಗಳು ಮಾಡಿಕೊಳ್ಳಲು ಅರಸು ಸ್ಮಾರಕ ಭವನಕ್ಕೆ ಪ್ರಸ್ತಾಪಿಸಲಾಗಿದ್ದು 10ಕೋಟಿ ರೂ ಅನುದಾನ ಕೊರಲಾಗಿದ್ದು ಪ್ರಾರಂಭಿಕವಾಗಿ 5ಕೋಟಿ ರೂ. ದೊರಕುವ ಭರವಸೆಯಿದ್ದು ಅಂದೆ ಭವನಕ್ಕೆ ಭೂಮಿ ಪೂಜೆ ಮಾಡುವ ಉದ್ದೇಶವಿದೆ ಎಂದರು. ಜಿಲ್ಲೆಗೆ ಸಚಿವ ಸ್ಥಾನ ಕೈತಪ್ಪಿದ್ದರ ಬಗ್ಗೆ ಬೇಸರವಿದೆ ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಲು ವರಿಷ್ಠರಿಗೆ ಮನವಿ ಮಾಡುತ್ತೇವೆಂದ ಅವರು ಮಂಕಾಳ ವೈದ್ಯರವರ ಹೆಸರು ಸಚಿವ ಸ್ಥಾನದಿಂದ ಕೈಬಿಟ್ಟಿದ್ದು ಸಹ ಬೇಸರ ತಂದಿದೆ ಸಮಾಜ ಮತ್ತಷ್ಟು ಜಾಗೃತರಾದರೇ ಇಂತಹ ನ್ಯೂನ್ಯತೆ ಸರಿಪಡಿಸಬಹುದೆಂದರು. ಈ ಸಂದರ್ಭದಲ್ಲಿ ವಿ.ಲಕ್ಷ್ಮೀರೆಡ್ಡಿ, ಹನುಮಂತಪ್ಪ ಯಾದವ್, ಶಾಮಣ್ಣ ಮಾಚನೂರು, ವಿಜಯ್ ಭಾಸ್ಕರ್ ,ನರಸಿಂಹಲು , ಸುರೇಖಾ, ಅಂಜಲಿ ಇನ್ನಿತರರು ಇದ್ದರು.

Comments

Popular posts from this blog