ಗುರು ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ವಿಶೇಷ ರೈಲು - ಡಾ.ಬಾಬುರಾವ್


ಜಯ ಧ್ವಜ ನ್ಯೂಸ್ ,ರಾಯಚೂರು,ಆ.18- ಕಲಿಯುಗದ ಕಾಮಧೇನು ಎಂದೇ ಜನಜನಿತವಾಗಿರುವ ಗುರು ರಾಘವೇಂದ್ರರಾಯರ ಭಕ್ತರಿಗೆ ನೈರುತ್ಯ ರೈಲ್ವೆ ಸಿಹಿ ಸುದ್ದಿ ನೀಡಿದೆ ಎಂದು ರೈಲು ಸಲಹಾ ಸಮಿತಿ ಮಂಡಳಿ ಮಾಜಿ ಸದಸ್ಯ ಡಾ.ಬಾಬುರಾವ್ ತಿಳಿಸಿದ್ದಾರೆ.

ಮೈಸೂರು-ಬೆಂಗಳೂರು- ಮಂತ್ರಾಲಯ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸೇವೆ  ಆರಂಭಿಸಲಾಗಿದೆ.

ಮೈಸೂರಿನಿಂದ ಸಂಜೆ 5.50ಕ್ಕೆ ನಿರ್ಗಮಿಸುವ ರೈಲು ಬೆಂಗಳೂರಿಗೆ 8.25ಕ್ಕೆ ತಲುಪಿ ಮರುದಿನ ಬೆಳಿಗ್ಗೆ 3.30ಕ್ಕೆ ಮಂತ್ರಾಲಯಕ್ಕೆ ಬರಲಿದೆ.

ಆನ್ ಲೈನ್ ನಲ್ಲಿ ಮುಂಗಡ ಬುಕ್ಕಿಂಗ್ ಮಾಡಲು ಐಆರ್ ಸಿಟಿಸಿ ಸೌಲಭ್ಯ ಲಭ್ಯ ಇದೆ ಎಂದು ತಿಳಿಸಿದ್ದಾರೆ.

Comments

Popular posts from this blog