ಜಿಲ್ಲೆಯಲ್ಲಿ ಕೊಲೆ ಪ್ರಕರಣ ಹೆಚ್ಚಳ; ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ವಿಫಲ-ಬಸವರಾಜ ಭಂಡಾರಿ. ಜಯ ಧ್ವಜ ನ್ಯೂಸ್, ರಾಯಚೂರು,ಆ.22- ಜಿಲ್ಲೆಯಲ್ಲಿ ಕೊಲೆ ಪ್ರಕರಣ ಹೆಚ್ಚಳವಾಗಿದ್ದು ನಿಯಂತ್ರಣ ಮಾಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಬಹುಜನ ಸಮಾಜ ಪಕ್ಷ ರಾಜ್ಯ ಕಾರ್ಯದರ್ಶಿ ಬಸವರಾಜ ಭಂಡಾರಿ ಆರೋಪಿಸಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿ ಮೂವರು ದಲಿತರ ಕಗ್ಗೊಲೆಗಳಾಗಿವೆ ಅಪರಾಧಿಗಳಿಗೆ ಕಾನೂನು ಭಯವಿಲ್ಲದಂತಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ವಾತಾವರಣವಿದೆ ಎಂದು ದೂರಿದರು. ಹಳ್ಳಿಗಳಲ್ಲಿ ಕಿರಾಣಿ ಅಂಗಡಿಗಳಲ್ಲಿ ಮದ್ಯ ದೊರೆಯುತ್ತಿದೆ ಅಲ್ಲದೆ ಗಾಂಜಾ ಹಾವಳಿಯಿಂದ ಯುವಕರು ನಶೆಯಲ್ಲಿ ಉನ್ಮತ್ತ ರಾಗಿ ಕೊಲೆ ,ಅತ್ಯಾಚಾರದಂತ ಪ್ರಕರಣ ಹೆಚ್ಚಾಗಲು ಪ್ರೇರೇಪಣೆ ನೀಡುತ್ತಿವೆ ಎಂದರು. ಕಾನೂನು ಬಾಹಿರವಾಗಿ ಮದ್ಯದಂಗಡಿಗಳು ತಲೆಯತ್ತುತ್ತಿದ್ದು ಸರ್ಕಾರ ಅಬಕಾರಿ ಆದಾಯದತ್ತ ಮಾತ್ರ ದೃಷ್ಟಿ ನೆಟ್ಟಿದೆ ಎಂದರು.
ಸರ್ಕಾರ ಕೂಡಲೆ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಬಲಪಡಿಸಬೇಕು ಜನರಲ್ಲಿ ಪೊಲೀಸರು ಮೇಲೆ ಭರವಸೆ ಮೂಡುವಂತಾಗಬೇಕೆಂದು ಅಪರಾಧಿಗಳಿಗೆ ತ್ವರಿತ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಹನುಮಂತಪ್ಪ ವಕೀಲ,ಜೈ ಭೀಮ್ ವಲ್ಲಭ, ಎಂ.ಆರ್.ಭೇರಿ, ಬುಡ್ಡಪ್ಪ, ಚಂದ್ರಶೇಖರ ಇನ್ನಿತರರು ಇದ್ದರು.


Comments
Post a Comment