ದಲಿತರ ವಿಮೋಚನೆಗೆ ಶಿಕ್ಷಣವೇ ಅಸ್ತ್ರ- ವೆಂಕಟೇಶ ಬೇವಿನಬೆಂಚಿ


ಜಯ ಧ್ವಜ ನ್ಯೂಸ್ ,ರಾಯಚೂರು, ಆ.23- ದೇಶದಲ್ಲಿ ಸಾವಿರಾರು ವರ್ಷಗಳ ಕಾಲ ದಲಿತರು ಜಾತಿ ದೌರ್ಜನ್ಯ, ಅತ್ಯಾಚಾರ, ಕೊಲೆ - ಸುಲಿಗೆಗೆ ಬಲಿಯಾಗುತ್ತಾ ಬಂದಿದ್ದಾರೆ. ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದಂತೆ ಶಿಕ್ಷಣವು ಹುಲಿಯ ಹಾಲುದ್ದಿಂತೆ ಅದನ್ನು ಕುಡಿದವರು ಘರ್ಜಿಸಲೇಬೇಕು ಎನ್ನುವಂತೆ ದಲಿತರ ಸರ್ವ ವಿಮೋಚನೆಗೆ ಶಿಕ್ಷಣವೇ ಅಸ್ತ್ರ  ಎಂದು ಸಾಮಾಜಿಕ ಚಿಂತಕರು ಹಾಗೂ ರಾಯಚೂರು ಆಕಾಶವಾಣಿ ಕೇಂದ್ರ ಕಾರ್ಯಕ್ರಮ ಪ್ರಸಾರ ನಿರ್ವಾಹಕರಾದ ವೆಂಕಟೇಶ ಬೇವಿನಬೆಂಚಿ ಅಭಿಮತ ವ್ಯಕ್ತಪಡಿಸಿದರು.


ರಾಯಚೂರು ತಾಲೂಕಿನ ಮರ್ಚೆಡ್ ಗ್ರಾಮದ ಹನುಮಂತಿ ದಿ. ಕೋಳಿ ಹುಸೇನಪ್ಪ ಮ್ಯಾತ್ರಿ ಇವರ ಮನೆಯಲ್ಲಿ ಬಹುಜನ ಸಂಘರ್ಷ ಸಮಿತಿ ಹಾಗೂ ಜನತಾ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್(ರಿ) ಬಲ್ಲಟಗಿ ವತಿಯಿಂದ ಶನಿವಾರ ಆಯೋಜಿಸಿದ್ದ 127 ನೇ ಮನೆ ಮನೆಗೆ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಮಾತನಾಡಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಹೋರಾಟಗಾರ ರಾಘವೇಂದ್ರ ಭೋರೆಡ್ಡಿ ಮನ್ಸಾಲಪೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಾಬಾಸಾಹೇಬ್ ಅಂಬೇಡ್ಕರ್ ವಿಚಾರಗಳನ್ನು ಮತ್ತು ಅವರ ಮಾರ್ಗ ಹಾಗೂ ಆಶಯಗಳನ್ನು ಮನೆ ಮನೆಗೆ ತಲುಪಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು. 

ಖ್ಯಾತ ಬಹುಜನ ಚಿಂತಕರಾದ ಶ್ರೀನಿವಾಸ ಮರೆಡ್ಡಿ, ಉಪನ್ಯಾಸಕ ಎಸ್.ಪ್ಯಾಟೆಪ್ಪ, ರಾಯಚೂರಿನ ಕೆಪಿಸಿಎಲ್  ಪ್ರಥಮ ದರ್ಜೆ ಸಹಾಯಕ ಮಲ್ಲೇಶ್, ಮಾತನಾಡಿದರು.


ಕಾರ್ಯಕ್ರಮದ ಕೊನೆಯಲ್ಲಿ ‌ಕುಟುಂಬಸ್ಥರಿಗೆ ಗೌರವಹಿಸಿ, ಅವರಿಗೆ ಬಾಬಾಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರವನ್ನು ಹಸ್ತಾಂತರಿಸಲಾಯಿತು.


ಪ್ರಾಸ್ತಾವಿಕವಾಗಿ ಬಹುಜನ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಮುಖಂಡರು ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶರಣಪ್ಪ ಮ್ಯಾತ್ರಿ ಮರ್ಚೆಡ್, ವಹಿಸಿದ್ದರು. ಶಿಕ್ಷಕ ಶಿವರಾಜ ಅರಸ್ ನಿರೂಪಿಸಿದರೆ ಅರಣ್ಯ ಇಲಾಖೆಯ ಯಲ್ಲಪ್ಪ ಮರ್ಚೆಡ್ ಸ್ವಾಗತಿಸಿ, ವಂದಿಸಿದರು.


ಈ ಸಂದರ್ಭದಲ್ಲಿ ಬಹುಜನ ಚಿಂತಕ ಕೊರೇನಲ್ ರಾಯಚೂರು, ರಾಯಚೂರು ತಾಲೂಕ ಮಾದಿಗ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಮಹಾದೇವ ರಂಗೋಲಿ ಚಂದ್ರಬಂಡಾ, ಪ್ರಧಾನ ಕಾರ್ಯದರ್ಶಿ ಸುರೇಶ ರಘುನಾಥನಹಳ್ಳಿ, ಖಜಾಂಚಿ ಕರಿಯಪ್ಪ, ಸದಸ್ಯರಾದ ಶಂಕರ್ ಜಗ್ಲಿ ಪೋಲೀಸ್, ರಾಯಚೂರು ಕೃಷಿ ವಿಶ್ವವಿದ್ಯಾಲಯ ಉಪನ್ಯಾಸಕ ಮಲ್ಲಿಕಾರ್ಜುನ ದಂಡು ಕುರುಬದೊಡ್ಡಿ, ಮುಖಂಡರಾದ ಶಿವರಾಜ ಹೋಸಪೇಟೆ, 

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮರ್ಚೆಡ್ ಎಸ್ ಡಿಎಮ್ ಸಿ ಆದ್ಯಕ್ಷ ಯಂಕಪ್ಪ ಗಜ್ಜೆಳ್, ಹಿರಿಯ ಪ್ರಾಥಮಿಕ ಶಾಲೆ ಅಧ್ಯಕ್ಷ ಅಡಿವೆಪ್ಪ ಬೋಳಬಂಡಿ, ಗೋಪಾಲ್ ದಾಸ್ಕಾಯಿ, ನರಸಿಂಹಲು ಗಾಣಿಗ, ಭೀಮಪ್ಪ ಮ್ಯಾತ್ರಿ, ಗಂಗಪ್ಪ ಮ್ಯಾತ್ರಿ, ಗೋಪಾಲ್ ದೈಹಿಕ ಶಿಕ್ಷಕರು, ಮಲ್ಲೇಶ್ ಶಿಕ್ಷಕರು, ಹೊನ್ನಪ್ಪ, ರಾಜ, ಶರಣಪ್ಪ ಕೊತಾಯ್,

ಗೋಪಲ್ ಮರ್ಚೆಡ್, ಗಂಗಪ್ಪ ಸೇರಿದಂತೆ ಮಹಿಳೆಯರು, ಯುವಕರು, ಮಕ್ಕಳು, ಕುಟುಂಬಸ್ಥರು ಭಾಗವಹಿಸಿದ್ದರು.

Comments

Popular posts from this blog