ವೈಟಿಪಿಎಸ್ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮ ಸಡಿಲಿಕೆ: ೨೭೦ ಕೋಟಿ ರೂ. ಅವ್ಯವಹಾರ ತನಿಖೆ ಕೈಗೊಳ್ಳದಿದ್ದರೆ ರಾಜ್ಯದಂತ ಹೋರಾಟ- ವಿನೋದ್ ರೆಡ್ಡಿ
ಜಯ ಧ್ವಜ ನ್ಯೂಸ್ ,ರಾಯಚೂರು,ಆ.24-
ವೈಟಿಪಿಎಸ್ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮ ಸಡಿಲಿಕೆ ಮಾಡಿ 270 ಕೋಟಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ ಕರ್ನಾಟಕ ರಕ್ಷಣಾ ವೇದಿಕೆ ರಾಯಚೂರು ಜಿಲ್ಲಾ ಘಟಕದ ಜಿಲ್ಲಾಧ್ಯರಾದ ಎಂ. ವಿನೋದರೆಡ್ಡಿಯವರು ತನಿಖೆ ಕೈಗೊಳ್ಳದಿದ್ದರೆ ರಾಜ್ಯಾದಂತ ಹೋರಾಟ ಮಾಡಲಾಗುವುದು ಎಂದು ಕೆಪಿಸಿಎಲ್ ಎಂಡಿ ಗೆ ಮನವಿ ಮಾಡಿದ್ದಾರೆ.
ರಾಯಚೂರು ತಾಲೂಕಿನ ವೈಟಿಪಿಎಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ನಿರ್ವಹಣೆ ಹಾಗೂ ಕಾರ್ಯಾಚರಣೆ ಪ್ರಕ್ರಿಯೆಯಲ್ಲಿ ಭಾರಿ ಅಪರಾತಪರಾವಾಗಿದ್ದು, ರಾಜ್ಯ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಉನ್ನತ ಮಟ್ಟದ ತಂಡ ರಚನೆ ಮಾಡಿ ಸೂಕ್ತ ಕ್ರಮ ಜರುಗಿಸಬೇಕು.
ಜಿಲ್ಲೆಯ ಆರ್‌ಟಿಪಿಎಸ್ ಮತ್ತು ವೈಟಿಪಿಎಸ್ ಶಾಖೋತ್ಪನ್ನ ವಿದ್ಯುತ್ ಈ ಎರಡು ಕೇಂದ್ರಗಳು ರಾಜ್ಯಕ್ಕೆ ಶೇ.40 ಕ್ಕಿಂತ ಅಧಿಕ ವಿದ್ಯುತ್ ಪೂರೈಸಲಾಗುತ್ತಿದೆ. ಯಾವ ಉದ್ದೇಶದ ಅನ್ವಯ ಜಿಲ್ಲೆಯ ಜನರು ವಿದ್ಯುತ್ ಘಟಕಗಳ ಸ್ಥಾಪನೆಗೆ ಜಮೀನು ನೀಡಿದರು? ಸರಕಾರ ಯಾವ ಕಾರಣಕ್ಕೆ ಇಲ್ಲಿ ಘಟಕ ಸ್ಥಾಪನೆ ಮಾಡಿದೆ? ಇದರ ಉದ್ದೇಶವೇ ಸಂಪೂರ್ಣ ಬುಡಮೇಲಾಗಿದೆ.
ವೈಟಿಪಿಎಸ್ ಕಂಪನಿ ಕೇರಳ ಮೂಲದ ಭವಾನಿ ಎಲೆಕ್ಟಿçಕಲ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ನಿಯಮಬಾಹಿರ ಟೆಂಡರ್ ಪ್ರಕ್ರಿಯೆ ನೀಡುವ ಮೂಲಕ ರಾಜ್ಯ ಸರಕಾರಕ್ಕೆ ವಂಚನೆ ಹಾಗೂ ಜಿಲ್ಲೆಯ ಜನರಿಗೆ ಅನ್ಯಾಯ ಮಾಡುವ ಎಲ್ಲಾ ಪ್ರಮಾಣಗಳು ಬೆಳಕಿಗೆ ಬಂದಿವೆ. ಪ್ರತಿ ಮೂರು ವರ್ಷಕ್ಕೊಮ್ಮೆ ನಿರ್ವಹಣೆ ಮತ್ತು ಕಾರ್ಯಾಚರಣೆ ಪ್ರಕ್ರಿಯೆ ನಿರ್ವಹಿಸಲಾಗುತ್ತದೆ. ೨೦೨೩ರಲ್ಲಿ ಈ ಟೆಂಡರ್ ಪ್ರಕ್ರಿಯೆಯಲ್ಲಿ ತೆಲಂಗಾಣದ ಪವರ್ ಮೆಕ್ ಕಂಪನಿ ಕನಿಷ್ಟ ದರ ಟೆಂಡರ್ ದಾಖಲೆ ಮೂರು ವರ್ಷಗಳ ನಿರ್ವಹಣೆ ಮತ್ತು ಕಾರ್ಯಾಚರಣೆ ವಹಿಸಿಕೊಂಡಿತು.
ಆದರೆ ಈಗ 2026 ಕ್ಕೆ ನಿರ್ವಹಣೆ ಮತ್ತು ಕಾರ್ಯಾಚರಣೆ ಅವಧಿ ಮುಗಿದ ಹಿನ್ನೆಲೆಯಲ್ಲಿ ಪುನಃ ಟೆಂಡರ್ ಪ್ರಕ್ರಿಯೆ ನಿರ್ವಹಿಸಲಾಗುತ್ತಿದೆ. ಈ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಿಕೆಯ ಷರತ್ತಿನಲ್ಲಿ ೨೦೨೩ ಟೆಂಡರ್ ಪ್ರಕ್ರಿಯೆಯ ಅನೇಕ ನಿಯಮ ಬದಲಾವಣೆ, ಕೇರಳ - ಮೂಲದ ಭವಾನಿ ಎಲೆಕ್ಟಿçಕಲ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಸ್ಪಷ್ಟವಾಗಿ ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಹಾಗೆಯೇ ಜೂನ್ ೦೬ಕ್ಕೆ ವೈಟಿಪಿಎಸ್ ೨೭೦ ಕೋಟಿ ರೂ. ನಿರ್ವಹಣೆ ಮತ್ತು ಕಾರ್ಯಾಚರಣೆಗೆ ಟೆಂಡರ್ ಕರೆಯಲಾಗಿತ್ತು. ಜೂನ್ ೨೩ ಕೊನೆಯ ದಿನವಾಗಿತ್ತು. ಜುಲೈ ೯ರಂದು ಟೆಕ್ನಿಕಲ್ ಬಿಡ್ ತೆರೆಯಲಾಗಿತ್ತು. ಈ ಟೆಂಡರ್ ಪ್ರಕ್ರಿಯೆಯಲ್ಲಿ ೨೦೨೩ ಮತ್ತು ೨೦೨೬ರ ಷರತ್ತುಗಳ ಬದಲಾವಣೆಗಳು ಅನೇಕ ಅನುಮಾನಕ್ಕೆ ಆಸ್ಪದ ಮಾಡಿಕೊಡುತ್ತಿವೆ.
ಕಳೆದ ಮೂರು ವರ್ಷಗಳ ಕಾಲ ಪವರ್ ಮೆಕ್ ಕಂಪನಿ ನಿರ್ವಹಣೆ ಮತ್ತು ಕಾರ್ಯಾಚರಣೆ ಕೈಗೊಂಡಿತ್ತು. ೨೦೨೩ರ ಟೆಂಡರ್ ನಿಯಮಾವಳಿಗಳಲ್ಲಿ ಏಕಾಏಕಿ ಅನುಕೂಲಕ್ಕಾಗಿ ಎನ್ನುವ ಪ್ರಶ್ನೆ ಬದಲಾವಣೆ ಮತ್ತು ಅನುಭವ ಸಾರ್ವಜನಿಕ ಚರ್ಚೆಗೆ ಮತ್ತು ಆರ್ಥಿಕ ಮಿತಿಗೆ ಕಾರಣವಾಗಿದೆ. ಕಡಿತಗೊಳಿಸಿರುವುದು ಯಾರು ೨೦೨೩ ಟೆಂಡರ್ ಪ್ರಕ್ರಿಯೆಯಲ್ಲಿ ಗುತ್ತಿಗೆಯನ್ನು ತಮ್ಮ ಸ್ವಂತ ಹೆಸರಿನಲ್ಲಿ ನಿರ್ವಹಿಸಿರಬೇಕು. ಉಪ-ಗುತ್ತಿಗೆದಾರರಾಗಿ ನಿರ್ವಹಣೆ ಮತ್ತು ಕಾರ್ಯಾಚರಣೆ ಗುತ್ತಿಗೆಯನ್ನು ನಿರ್ವಹಿಸಿದ ಬಿಡ್‌ದಾರರನ್ನು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು.
ನಿಯಮ ೭.೫ ರಲ್ಲಿ ಟೆಂಡರ್‌ದಾರರು ಸಿಂಗಲ್ ವರ್ಕ್ ಆರ್ಡರ್ ೯೦ ಕೋಟಿಗೂ ಕಡಿಮೆ ಇರಬಾರದೆಂಬ ಮತ್ತೊಂದು ಷರತ್ತು ವಿಧಿಸಲಾಗಿತ್ತು. ಆದರೆ ಈ ಎರಡು ನಿಯಮಗಳನ್ನು ೨೦೨೬ರ ಟೆಂಡರ್ ನಿಯಮಾವಳಿಗಳಲ್ಲಿ ಸಡಲಿಸುವ ಮೂಲಕ ವೈಟಿಪಿಎಸ್ ಭವಾನಿ ಎಲೆಕ್ಟಿçಕಲ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಪರೋಕ್ಷವಾಗಿ ನೆರವಾಗಿದೆ.
ಮೂರು ವರ್ಷದ ಹಿಂದೆ ಸಿಂಗಲ್ ವರ್ಕ್ ಆರ್ಡರ್ ೯೦ ಕೋಟಿ ಷರತ್ತನ್ನು ಹೆಚ್ಚಿಸಬೇಕಾದ, ವೈಟಿಪಿಎಸ್ ಪವರ್ ಮೆಕ್ ಕಂಪನಿ ೯೦ ಕೋಟಿ ಸಿಂಗಲ್ ವರ್ಕ್ ಸಾಮರ್ಥ್ಯ ನಿರ್ವಹಣಾ ಅರ್ಹತೆ ಹೊಂದಿದ್ದರೂ ೨೦೨೬ರಲ್ಲಿ ಈ ಮೊತ್ತವನ್ನು ಕೇವಲ ೪೫ ಕೋಟಿಗೆ ಸೀಮಿತಗೊಳಿಸಿರುವುದು ಕೇರಳ ಮೂಲದ ಕಂಪನಿಗೆ ವೈಟಿಪಿಎಸ್ ಶರಣಾಗತವಾಗಿದೆ ಎನ್ನುವುದಕ್ಕೆ ನಿದರ್ಶನವಾಗಿದೆ. ತನ್ನ ಹೆಸರಿಗೆ ನಿರ್ವಹಣೆ ಮತ್ತು ಕಾರ್ಯಾಚರಣೆ ನೇರ ಅನುಭವ ಹೊಂದಿದ ಕಂಪನಿಗೆ ಮಾತ್ರ ಟೆಂಡರ್ ಅರ್ಹತೆ ಹೊಂದಿರಬೇಕು. ಉಪಗುತ್ತಿಗೆ ಆಧಾರಿತ ಕಂಪನಿ ಪರಿಗಣಿಸಲಾಗುವುದಿಲ್ಲ ಎನ್ನುವ ಷರತ್ತು ಈಗ ಕೈ ಬಿಡಲಾಗಿದೆ. ವೈಟಿಪಿಎಸ್ ನಿರ್ವಹಣೆ ಮತ್ತು ಕಾರ್ಯಚರಣೆ ಟೆಂಡರ್ ಪ್ರಕ್ರಿಯೆಯಲ್ಲಿ ಇಷ್ಟೆಲ್ಲ ಲೋಪ ದೋಷಗಳು ಸ್ಪಷ್ಟವಾಗಿ ಕಂಡುಬರುತ್ತಿದೆ ಎಂದು ಆರೋಪಿಸಿದ್ದಾರೆ.
ಇದು ನಗರದಿಂದ ಕೇವಲ ಮೂರು, ನಾಲ್ಕು ಕಿಲೋಮೀಟರ ಅಂತರದಲ್ಲಿರುವ ವೈಟಿಪಿಎಸ್ ಬೃಹತ್ ವಿದ್ಯುತ್ ಉತ್ಪಾದನಾ ಕೇಂದ್ರವಾಗಿದೆ. ನಿರ್ವಹಣೆ ಮತ್ತು ಕಾರ್ಯಾಚರಣೆ ಲೋಪದೋಷಗಳಿಂದ ಏನಾದರೂ ಅನಾಹುತ ಸಂಭವಿಸಿದರೆ ಇದರ ದುಷ್ಪರಿಣಾಮ ಅಲ್ಲಿಯ ಸಿಬ್ಬಂದಿ ಮತ್ತು ಅಕ್ಕ ಪಕ್ಕದ ಗ್ರಾಮ, ನಗರದ ಮೂರು ಲಕ್ಷ ಜನ ಅನುಭವಿಸಬೇಕಾಗುತ್ತದೆ. ಅನುಭವವಿಲ್ಲದ ಕೇವಲ ರಾಜಕೀಯ ಪ್ರಭಾವದಿಂದ ನಿರ್ವಹಣೆ ಮತ್ತು ಕಾರ್ಯಾಚರಣೆ ವಹಿಸಿಕೊಳ್ಳುವ ಕಂಪನಿಗಳಿAದ ಏನಾದರೂ ಅನಾಹುತ ಉಂಟಾದರೆ ಯಾರು ಹೊಣೆ? ಮುಂದೆ ಆಗುವ ಅನಾಹುತಕ್ಕೆ ರಾಜ್ಯ ಸರ್ಕಾರ ನೇರ ಹೊಣೆಯಾಗಬೇಕಾಗುತ್ತದೆ.
ಕಳೆದ ವಾರವಷ್ಟೇ ವಿದ್ಯುತ್ ಸ್ಪೋಟದಿಂದ ವೈಟಿಪಿಎಸ್ ಕಾರ್ಮಿಕರು ತೀವ್ರ ಗಾಯಗೊಂಡಿದ್ದರು. ಪವರ್ ಮೆಕ್ ನಂತಹ ಸಂಸ್ಥೆಯ ನಿರ್ವಹಣೆ ಮತ್ತು ಕಾರ್ಯಾಚರಣೆಯಲ್ಲಿ ಈ ದುರ್ಘಟನೆ ಸಂಭವಿಸುವಾಗ ಉಪಗುತ್ತಿಗೆ ಆಧಾರಿತ ಅನುಭವಕ್ಕೆ ಮಾತ್ರ ಸೀಮಿತವಾಗಿರುವ ಮತ್ತು ಇಲ್ಲಿವರೆಗೂ ನಿರ್ವಹಣೆ ಮತ್ತು ಕಾರ್ಯಾಚರಣೆ ಕ್ಷೇತ್ರದಲ್ಲಿ ಯಾವುದೇ ಅನುಭವ ಹೊಂದಿರದ ಭವಾನಿ ಎಲೆಕ್ಟಿçಕಲ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಗುತ್ತಿಗೆ ನೀಡುವ ಪರಿಣಾಮಗಳು ಅತಂಕಕಾರಿಯಾಗಿದೆ. ಕೂಡಲೇ ರಾಜ್ಯ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕೇರಳ ಮೂಲದ ಭವಾನಿ ಎಲೆಕ್ಟಿçಕಲ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಟೆಂಡರ್ ರದ್ದುಪಡಿಸಿ, ಮರು ಟೆಂಡರ್ ಪ್ರಕ್ರಿಯೆ ಅಧಿಸೂಚನೆ ಹೊರಡಿಸಬೇಕು.
ಕೂಡಲೇ ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಇವರನ್ನು ಅಮಾನತ್ತಿನಲ್ಲಿಟ್ಟು, ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರರವರು ಉನ್ನತ ಮಟ್ಟದ ಅಧಿಕಾರಿಗಳ ತಂಡ ರಚನೆ ಮಾಡಿ ಕೂಲಂಕುಶವಾಗಿ ತನಿಖೆಗೆ ಒಳಪಡಿಸಲು ಆದೇಶಿಸಬೇಕು. ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಯಚೂರು ಜಿಲ್ಲಾ ಘಟಕ ಹಾಗೂ ರಾಜ್ಯ ಘಟಕ ನೇತೃತ್ವದಲ್ಲಿ ರಾಜ್ಯದ್ಯಂತ ಉಗ್ರ ಸ್ವರೂಪ ಹೋರಾಟ ರೂಪಿಸಲಾಗುತ್ತದೆ ಎಂದು ಈ ಮೂಲಕ ತಮ್ಮವರೆಗೂ ತಮ್ಮ ಗಮನಕ್ಕೆ ಈ ದೂರಿನೊಂದಿಗೆ ಸಂಘಟನೆ ಎಚ್ಚರಿಸುತ್ತದೆ. ಆದಕಾರಣ ಈ ವಿಚಾರಕ್ಕೆ ಸಂಬAಧಿಸಿ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಇಂಧನ ಸಚಿವರು ಹಾಗೂ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ಮೇಲಾಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಶೀಘ್ರ ಕ್ರಮ ಕೈಗೊಳ್ಳಬೇಕಾಗಿ ವಿನಂತಿಸಿಕೊಂಡಿದ್ದಾರೆ.

Comments
Post a Comment