ಜಿಲ್ಲೆಯಲ್ಲಿ ದಲಿತರ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸದಿದ್ದರೆ ಹೋರಾಟ ತೀರ್ವ:                                                                    ಡಿಸಿ ,ಎಸ್ಪಿಯವರನ್ನು ಕೂಡಲೆ ವರ್ಗಾವಣೆಗೊಳಿಸಿ-  ಎಸ್. ಮಾರೆಪ್ಪ                                                                                         ಜಯಧ್ವಜ ನ್ಯೂಸ್, ರಾಯಚೂರು,ಆ.27- ಜಿಲ್ಲೆಯಲ್ಲಿ ನಡೆದಿರುವ ಮೂವರು ದಲಿತರ ಕಗ್ಗೊಲೆ ಪ್ರಕರಣವನ್ನು ಸಿಐಡಿಗೆ ಸರ್ಕಾರ ವಹಿಸದಿದ್ದರೆ ಹೋರಾಟ ತೀರ್ವ ಗೊಳಿಸಬೇಕಾಗುತ್ತದೆ ಎಂದು ರಾಯಚೂರು ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರಾದ ಎಸ್.ಮಾರೆಪ್ಪ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಒಂದೆ ತಿಂಗಳಲ್ಲಿ ಭೂಮಾನಂದ ಕೊಲೆ ಹಾಗೂ ಅಶ್ವಿನಿ, ರಾಣಿಮ್ಮ ಅತ್ಯಾಚಾರ ಕೊಲೆ ಪ್ರಕರಣಗಳು ಇಡಿ ಸಮಾಜವೇ ತಲೆ ತಗ್ಗಿಸುವ ಹೇಯ್ ಕೃತ್ಯಗಳಾಗಿವೆ ಈ ಬಗ್ಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸರಿಯಾಗಿ ನಿಭಾಯಿಸುತ್ತಿಲ್ಲವೆಂದು ಆರೋಪಿಸಿದ ಅವರು ಗೃಹ ಸಚಿವರಿಗೆ ಕೇವಲ ಒಂದು ಪ್ರಕರಣ ಮಾಹಿತಿ ದೊರೆತಿದೆ ಎಂದರೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ ಅವರು ಗೃಹ ಸಚಿವರು ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು ಕೇವಲ ಆರೆಸ್ಸೆಸ್ ಟೀಕಿಸಲು ನಿಮ್ಮನ್ನು ಮಂತ್ರಿ ಮಾಡಿಲ್ಲ ಬದಲಾಗಿ ರಾಜ್ಯದ ಜನರ ರಕ್ಷಣೆ ಮತ್ತು  ಕಾನೂನು ಸುವ್ಯವಸ್ಥೆ ಕಾಪಾಡಲು ಸಚಿವ ಸ್ಥಾನ ದೊರೆತಿದೆ ಸೂಕ್ತ ರೀತಿಯಲ್ಲಿ ಗೃಹ ಖಾತೆ ನಿಭಾಯಿಸಲು ಒತ್ತಾಯಿಸಿದ ಅವರು ಕೊಲೆ ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಿ ಸಮಗ್ರವಾಗಿ ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕೆಂದು ಆಗ್ರಹಿಸಿದರು.

ಮುಖಂಡರಾದ ರವೀಂದ್ರನಾಥ ಪಟ್ಟಿ ಮಾತನಾಡಿ ಜಿಲ್ಲಾಧಿಕಾರಿಗಳು ಪ್ರಕರಣದ ಬಗ್ಗೆ ಗಂಭೀರವಾಗಿ ನಡೆದುಕೊಳ್ಳುತ್ತಿಲ್ಲವೆಂದು ಆರೋಪಿಸಿದ ಅವರು ಎಸ್ಪಿಯವರು ಮೃದು ಧೋರಣೆ ಅನುಸರಿಸಬಾರದು ಎಂದರು. ಜಿಲ್ಲೆಯಲ್ಲಿ ಎರೆಡು ಬಣಗಳ ರಾಜಕೀಯ ಭಿನ್ನಾಭಿಪ್ರಾಯಕ್ಕೆ ಸಿಲುಕಿದ ಜನರ ಪಾಡು ಹೇಳತೀರದಾಗಿದೆ ಆಡಳಿತ ಯಂತ್ರಾಂಗ ಹಳಿ ತಪ್ಪದಂತೆ ಜನಪ್ರತಿನಿಧಿಗಳು ನಿಗಾ ವಹಿಸಬೇಕೆಂದರು. ಇಂದು ಜಿಲ್ಲೆಗೆ ಭೇಟಿ ನೀಡಿದ ವಿಧಾನ ಪರಿಷತ್ ವಿರೋಧಿ ಪಕ್ಷದ ನಾಯಕ ಚೆಲುವಾದಿ ನಾರಾಯಣ ಸ್ವಾಮಿಯವರಿಗೂ ಮೂರು ಕೊಲೆ ಪ್ರಕರಣಗಳ ಬಗ್ಗೆ ಸದನದಲ್ಲಿ ಏಕೆ ಧ್ವನಿಯೆತ್ತಿಲ್ಲವೆಂದು ಪ್ರಶ್ನಿಸಿದ್ದೇವೆಂದರು. ಕೂಡಲೆ ಕೊಲೆ, ಅತ್ಯಾಚಾರ ಪ್ರಕರಣಗಳನ್ನು ಸಿಐಡಿ ಗೆ ವಹಿಸದಿದ್ದರೆ ಹಂತ ಹಂತವಾಗಿ ಹೋರಾಟ ತೀರ್ವಗೊಳಸಲಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಜೈಭೀಮ ವಲ್ಲಭ, ಹೇಮರಾಜ್ ಅಸ್ಕಿಹಾಳ, ಎಂ.ಆರ್.ಭೇರಿ,ಶರಣಪ್ಪ,  ದಿನ್ನಿ,ನರಸಿಂಹಲು ಇತರರು ಇದ್ದರು.

Comments

Popular posts from this blog