ಸಾಧನೆಗೆ ಕಠಿಣ ಪರಿಶ್ರಮವೇ ಮೂಲಮಂತ್ರ- ವೆಂಕಟೇಶ ಬೇವಿನಬೆಂಚಿ

ಜಯ ಧ್ವಜ ನ್ಯೂಸ್ ರಾಯಚೂರು, ಆ.26- ಜೀವನದಲ್ಲಿ ಯಾವುದೇ ಕ್ಷೇತ್ರದಲ್ಲಿ ಯಶಸ್ಸು  ಕಾಣಬೇಕಾದರೆ ಮತ್ತು ಸಾಧನೆ ಮಾಡಬೇಕಾದರೆ ಕಠಿಣ ಪರಿಶ್ರಮವೇ ಮೂಲ ಮಂತ್ರವಾಗಿದೆ.

ಸಾಧನೆಗೆ ಕಠಿಣ ಪರಿಶ್ರಮ ಸ್ಪಷ್ಟವಾದ ಗುರಿ,  ಪ್ರಾಮಾಣಿಕ ಪ್ರಯತ್ನ ಇದ್ದರೆ  ಯಶಸ್ಸು ಕಾಣಲು ಸಾಧ್ಯ ಎಂದು ಆಕಾಶವಾಣಿಯ ಕಾರ್ಯಕ್ರಮ ನಿರ್ದೇಶಕರಾದ ವೆಂಕಟೇಶ್ ಬೇವಿನಬೆಂಚಿ ಹೇಳಿದರು.  

ಅವರು ನಗರದ ಸರಕಾರಿ ಅಲ್ಪಸಂಖ್ಯಾತರ  ಮುರಾರ್ಜಿ ದೇಸಾಯಿ ಬಾಲಕಿಯತ ವಸತಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಸನ್ಮಾನ ಸಮಾರಂಭವನ್ನು  ಉದ್ಘಾಟಿಸಿ ಮಾತನಾಡಿದರು.


ಎಷ್ಟೇ ಕಷ್ಟ ಬಂದರೂ ನಿರಂತರವಾಗಿ ಕೆಲಸ ಮಾಡುವುದರಿಂದ ಗುರಿ ಮುಟ್ಟಬಹುದು, ಸರಿಯಾದ ವೇಳಾಪಟ್ಟಿ ಮತ್ತು ಸಮಯದ ಸದುಪಯೋಗ ಸಾಧನೆಯನ್ನು ಸುಲಭಗೊಳಿಸುತ್ತದೆ‌ 

ಮಾಡುವ ಕೆಲಸದಲ್ಲಿ ಸಂಪೂರ್ಣ ಗಮನಹರಿಸಿದರೆ ಮಾತ್ರ ಉತ್ತಮ ಫಲಿತಾಂಶ ಸಿಗುತ್ತದೆ‌ ಎಂದು ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಶ್ರೀ ಹನುಮೇಶ ರವರ ವಹಿಸಿದ್ದರು.

ಕಾಲೇಜಿನ ಕನ್ನಡ ಉಪನ್ಯಾಸಕರಾದ  ಶ್ರೀ ಸುರೇಶ ಜಿ ಗುರುಗುಂಟ* ರವರು ಮಾತನಾಡಿ ತಾಳ್ಮೆ, ಕಷ್ಟಪಟ್ಟು ಕೆಲಸಮಾಡುವುದು ಗುರಿಸಾಧಿಸುವ  ಛಲ, ಸ್ವಯಂ ಪ್ರೇರಣೆ , ಸಮಯ ಪರಿಪಾಲನೆ.. ಇವೆಲ್ಲವು ವಿದ್ಯಾರ್ಥಿಗಳು ಬೆಳಸಿಕೊಂಡಾಗ ಪ್ರತಿಯೊಬ್ಬರು ಉತ್ತಮ ಸಾಧನೆ ಮಾಡಹುದು ಎಂದು ಕಿವಿಮಾತು ಹೇಳಿದರು...

ಇನ್ನೋರ್ವ  ಉಪನ್ಯಾಸಕರಾದ ಶ್ರೀ ಶಿವಗ್ಯಾನಪ್ಪರವರು ಪ್ರಾಸ್ತಾವಿಕವಾಗಿ  ಮಾತನಾಡಿ ಕಾಲೇಜು ನಡೆದು ಬಂದ ದಾರಿ ಹೇಳಿದರು.

ಮತ್ತೊಬ್ಬ ಉಪನ್ಯಾಸಕರಾದ ಶ್ರೀ ಸುಧಾಕರರವರು  ಮಾತನಾಡಿ, ಇತಿಹಾಸ ಅರಿಯದವರು ಇತಿಹಾಸದ ಸೃಷ್ಟಿಸಲಾರರು ಎಂಬ ಬಾಬ ಸಾಹೇಬರ ಮಾತಿನಂತೆ ಶಿಕ್ಷಣ ಎಂಬುವುದು ಹುಲಿ ಹಾಲಿದ್ದಂತೆ ಅದನ್ನು ಕುಡಿದವರು ಘರ್ಜಿಸಲೆ ಬೇಕು ಎಂದರು.

ವಿಜ್ಞಾನ ವಿಭಾಗದಲ್ಲಿ ಕು.ಸಾನಿಯಾ ಮದರ ಸಾಬ್, ಕು ಭಾಗ್ಯಶ್ರೀ  ವಾಣಿಜ್ಯ ವಿಭಾಗದಲ್ಲಿ ಅನ್ನಮ್ಮ ಶಾಂತಪ್ಪ   ಮತ್ತು  ಕುಮಾರಿ ವಿ ಸಂಜನಾ ರವರಿಗೆ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಹಾಗೂ ಸಿಬ್ಬಂದಿಯವರು ಸನ್ಮಾನಿಸಿದರು.

ಉಪನ್ಯಾಸಕರಾದ ಶರಣಪ್ಪ ಕೋರಿ ನಾಗೇದ್ರಪ್ಪ  ಪ್ರ ದ ಸ ವೀರೇಶ  ನಿಲಯಪಾಲಕರಾದ ಶ್ರೀ ಮತಿ ಶಕುಂತಲಾ  ಹಾಗೂ  ಅಥಿತಿ  ಉಪನ್ಯಾಸಕರು ಭಾಗವಹಿಸಿದ್ದರು.


Comments

Popular posts from this blog