ಬೆಂಗಳೂರು-ಮುಂಬೈ  ವಂದೇ ಭಾರತ ಸ್ಲೀಪರ್ ರೈಲು ಶೀಘ್ರದಲ್ಲೇ ಪ್ರಾರಂಭ- ಡಾ.ಬಾಬುರಾವ್


ಜಯ ಧ್ವಜ ನ್ಯೂಸ್ ,ರಾಯಚೂರು, ಆ.11- ಬೆಂಗಳೂರು-ಮುಂಬೈ  ವಂದೇ ಭಾರತ ಸ್ಲೀಪರ್ ರೈಲು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ.ಬಾಬುರಾವ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಮತ್ತೊಂದು ವೇಗದ ರೈಲು ಸಂಪರ್ಕವನ್ನು ಕೊಡುಗೆ ನೀಡಲು ಮುಂದಾಗಿದ್ದು ಕಲ್ಯಾಣ ಕರ್ನಾಟಕ ಜನತೆಗೆ ಸಿಹಿ ಸುದ್ಧಿ ನೀಡಿದೆ.

ದಕ್ಷಿಣ ಪಶ್ಚಿಮ ರೈಲೈ ವಂದೇ ಭಾರತ ಸ್ಲೀಪರ್ ರೈಲುಗಳ ಸಂಚಾರಕ್ಕೆ ಸಿದ್ಧತೆ ನಡೆಸಿದ್ದು ಬೆಂಗಳೂರು-ಮುಂಬೈ ಮಾರ್ಗದಲ್ಲಿ ಶೀಘ್ರದಲ್ಲೇ ಪ್ರೀಮಿಯಂ ರಾತ್ರಿ ಸೇವೆ ಆರಂಭಿಸಲಿದೆ‌

ಬೆಂಗಳೂರು ರೈಲು ನಿಲ್ದಾಣ ವನ್ನು ಸಂಜೆ 6ಗಂಟೆಗೆ ನಿರ್ಗಮಿಸುವ ಈ ರೈಲು ರಾತ್ರಿ 9.25ಕ್ಕೆ  ಗುಂತಕಲ್,10.55ಕ್ಕೆ ರಾಯಚೂರು, ಮಧ್ಯ ರಾತ್ರಿ 12.40ಕ್ಕೆ  ಕಲಬುರಗಿ,ತಡರಾತ್ರಿ 2.05ಕ್ಕೆ ಸೊಲ್ಲಾಪುರ, ಬೆಳಗಿನ ಜಾವ 5.50ಕ್ಕೆ ಪುಣೆ,ಬೆಳಿಗ್ಗೆ 8.30ಕ್ಕೆ ಮುಂಬೈ ತಲುಪಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ ಎಂದು ಅವರು ಹೇಳಿದ್ದಾರೆ.

ಈ ರೈಲು ಓಡಿಸುವಂತೆ ಈ ಭಾಗದ ಜನರ ಪರವಾಗಿ ರೈಲ್ವೆ ಸಚಿವರಲ್ಲಿ ಮಾಡಿಕೊಂಡ ಮನವಿಗೆ ಈಗ ಸ್ಪಂದನೆ ಸಿಕ್ಕಿದ್ದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿರುವ ಅವರು ಕಲ್ಯಾಣ ಕರ್ನಾಟಕ ಜನತೆ ಇದರ ಪ್ರಯೋಜನ ಪಡೆಯಲು ಪ್ರಕಟಣೆಯಲ್ಲಿ ಕೋರಿದ್ದಾರೆ.

Comments

Popular posts from this blog