ದಲಿತ ಪರ ಸಂಘಟನೆಗಳ ಪ್ರತಿಭಟನೆಗೆ ಶಿವರಾಮೇಗೌಡ ಕರವೇ ಬೆಂಬಲ

ಜಯ ಧ್ವಜ ನ್ಯೂಸ್ , ರಾಯಚೂರು, ಆ.6-ದಲಿತಪರ ಸಂಘಟನೆಗಳ ಒಕ್ಕೂಟದ ಮುಖಂಡ ಎಸ್ ಮಾರೆಪ್ಪ ಅವರ ನೇತೃತ್ವದಲ್ಲಿ ರಾಯಚೂರು ಜಿಲ್ಲೆಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ಅಗಸ್ಟ್ 15ರಂದು ಬೇರೆ ಜಿಲ್ಲೆಯ ಉಸ್ತುವಾರಿಗಳು ಬಂದು ಧ್ವಜಾರೋಹಣ ಮಾಡುವುದಕ್ಕೆ, ವಿರೋಧಿಸಿ ಪ್ರತಿಭಟಿಸುವ ಕುರಿತು ಹೇಳಿರುವ ದಲಿತ ಸಂಘಟನೆಗೆ, ಶಿವರಾಮೇಗೌಡ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಸಂಪೂರ್ಣ ಬೆಂಬಲಿಸುತ್ತದೆ. ಅವರೊಡನೆ ಕೂಡಿ ಪ್ರತಿಭಟನೆಗೆ ಜೊತೆಗೂಡುತ್ತದೆ. ದಶಕಗಳಿಂದ ರಾಯಚೂರು ಜಿಲ್ಲೆಗೆ ಅನ್ಯಾಯವೆಸಗುತ್ತಿರುವ, ಸರ್ಕಾರಗಳು ಅದು ಯಾವುದೇ ಸರ್ಕಾರ ಆಗಿರಬಹುದು, ನಿರಂತರವಾಗಿ ಜಿಲ್ಲೆಗೆ ಮಂತ್ರಿ ನೀಡಿದರು ಉಸ್ತುವಾರಿ ನೀಡುವುದಿಲ್ಲ, ಬೇರೆ ಜಿಲ್ಲೆಯ ಉಸ್ತುವಾರಿಗಳನ್ನ ನೇಮಕ ಮಾಡುತ್ತಾರೆ. ಅದಲ್ಲದೆ ಸ್ಥಳೀಯ ಮಂತ್ರಿ ಇದ್ದರೂ ಉಸ್ತುವಾರಿ ನೀಡುವುದಿಲ್ಲ. ರಾಯಚೂರು ಜಿಲ್ಲೆಯು ಮಹತ್ವಕಾಂಕ್ಷಿ ಜಿಲ್ಲೆ ಎಂದು ಕೇಂದ್ರ ಸರ್ಕಾರದಿಂದ ಘೋಷಣೆ ಆಗಿದ್ದರೂ ಕೂಡ  ಡಿಕೆ ಶಿವಕುಮಾರ್ ನೇತೃತ್ವದ ಸರಕಾರ ರಾಯಚೂರು ಜಿಲ್ಲೆಯನ್ನು ಕಡೆಗಣಿಸಿ, ಇಲ್ಲಿಯ ಜನರಿಗೆ ನಾವು ಅಖಂಡ ಕರ್ನಾಟಕದಲ್ಲಿ ಇದಿವೋ ಇಲ್ಲವೋ, ಎಂಬಂತ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಹಾಗಾಗಿ ರಾಯಚೂರು ಜಿಲ್ಲೆಗೆ ಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸ್ಥಳಿಯರಿಗೆ ನೀಡಬೇಕೆಂದು ನಮ್ಮ ಸಂಘಟನೆಯ ಕೂಗಾಗಿರುತ್ತದೆ ಎಂದು ಅಶೋಕ್ ಕುಮಾರ್ ಜೈನ್ ತಿಳಿಸಿದ್ದಾರೆ.

Comments

Popular posts from this blog