ವೈಟಿಪಿಎಸ್ ಅನರ್ಹ ಕಂಪನಿಗೆ ಗುತ್ತಿಗೆ ಆರೋಪ: ಪಾರದರ್ಶಕ ಕಾಯ್ದೆ ಸ್ಪಷ್ಟ ಉಲಂಘನೆ- ಶಿವಕುಮಾರ್ ಪೊಲೀಸ್ ಪಾಟೀಲ. ಜಯ ಧ್ವಜ ನ್ಯೂಸ್, ರಾಯಚೂರು,ಆ.17- ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ನಿರ್ವಹಣಾ ಗುತ್ತಿಗೆಯನ್ನು ಅನರ್ಹ ಕಂಪನಿಗೆ ನೀಡಲಾಗಿದೆ ಎಂದು ಮುಖಂಡರಾದ ಶಿವಕುಮಾರ್ ಪೊಲೀಸ್ ಪಾಟೀಲ್ ಆರೋಪಿಸಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ 1600ಮ್ಯ.ವ್ಯಾ ಉತ್ಪಾದನಾ ಸಾಮರ್ಥ್ಯದ ವೈಟಿಪಿಎಸ್ ಸುಪರ್ ಕ್ರಿಟಿಕಲ್ ಪ್ಲಾಂಟ್ ನಿರ್ವಹಣೆಯನ್ನು ಮೂರು ವರ್ಷದ ಅವಧಿಗೆ ಕೇರಳ ಮೂಲದ ಅನನುಭವಿ ಕಂಪನಿಗೆ ಟೆಂಡರ್ ಬಿಡ್ ನಲ್ಲಿ ಸ್ವೀಕೃತಿ ಗೊಳಿಸಲಾಗಿದೆ ಇದರಲ್ಲಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮತ್ತು ರಾಜ್ಯದ ಇಂಧನ ಸಚಿವರು ಮತ್ತು ಎಂಡಿ ಪ್ರಭಾವವಿದೆ ಎಂಬ ಗಂಭೀರ ಆರೋಪ ಮಾಡಿದರು.
ಸುಮಾರು 342ಕೋಟಿ .ರೂ ಮೊತ್ತದಲ್ಲಿ ನಿರ್ವಹಣಾ ಜವಾಬ್ದಾರಿ ನೀಡಲಾಗಿದೆ ಭವಾನಿ ಎಂಬ ಕೇರಳ ಮೂಲದ ಕಂಪನಿಗೆ ನೀಡಲಾಗಿದ್ದು ಕರ್ನಾಟಕ ಪಾರದರ್ಶಕ ಕಾಯ್ದೆ ಉಲ್ಲಂಘಿಸಿ ಟೆಂಡರ್ ಷರತ್ತು ಸಡಿಲಿಸಿ ಗುತ್ತಿಗೆ ನೀಡಲಾಗಿದ್ದು ಈ ಬಗ್ಗೆ ಸರ್ಕಾರ ತತಕ್ಷಣ ಇದನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ರಾಘವೇಂದ್ರ, ಮಹಾದೇವ, ರಾಚನಗೌಡ, ಬಾಬು ಇದ್ದರು.


Comments
Post a Comment