ಆ.28 ರಂದು ಗಬ್ಬೂರಲ್ಲಿ ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಪ್ರಶಸ್ತಿ ಪ್ರದಾನ ಸಮಾರಂಭ: ಪ್ರೊ.ಮಲ್ಲೇಪುರಂ.ಜಿ ವೆಂಕಟೇಶ ,ರಘುನಾಥರೆಡ್ಡಿ ಮನ್ಸಲಾಪೂರು ,ಖಾಸೀಮ್ ಮಲ್ಲಿಗೆ ಮಡುವು ರವರಿಗೆ ಲಭಿಸಿದ ಪ್ರಶಸ್ತಿ -ಬಸವರಾಜ ಸಿನ್ನೂರ
ಜಯ ಧ್ವಜ ನ್ಯೂಸ್ ,ರಾಯಚೂರು, ಆ.10- ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠವು ಕೊಡಮಾಡುವ" ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆ.28ರಂದು ಆಯೋಜಿಸಲಾಗಿದೆ ಎಂದು ಮಹಾಶೈವ ಧರ್ಮಪೀಠದ ಸಾಂಸ್ಕೃತಿಕ ಸಮಿತಿಯ ಸದಸ್ಯ ಬಸವರಾಜ ಸಿನ್ನೂರ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸಮಾಜಸೇವೆ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಅವರ ಅಧ್ಯಾತ್ಮಿಕ ಗುರುಗಳಾದ ಧಾರವಾಡದ ತಪೋವನದ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರ ಹೆಸರಿನಲ್ಲಿ ಕುಮಾರಸ್ವಾಮಿಗಳವರ ಹುಟ್ಟುಹಬ್ಬವಾದ ನೂಲಹುಣ್ಣಿಮೆಯಂದು ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸಮಾಜಸೇವಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಿ, ಗೌರವಿಸುತ್ತಿದ್ದಾರೆ ಎಂದರು.
2026 ನೇ ಸಾಲಿನ ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಸಾಹಿತ್ಯ ರತ್ನ ಪ್ರಶಸ್ತಿಯನ್ನು ಕನ್ನಡದ ಹಿರಿಯ ವಿದ್ವಾಂಸರೂ ಬೆಂಗಳೂರಿನ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ.ಮಲ್ಲೇಪುರಂ ಜಿ ವೆಂಕಟೇಶ ಅವರನ್ನು 2026 ನೇ ಸಾಲಿನ "ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಸಾಹಿತ್ಯ ರತ್ನ" ಪ್ರಶಸ್ತಿಗೆ ಆಯ್ಕೆ ಮಾಡಲಾಗಿದಡ.ಪ್ರಶಸ್ತಿಯು ಒಂದು ಲಕ್ಷ ರೂಪಾಯಿಗಳನ್ನು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಪತ್ರಿಕಾಭೂಷಣ ಪ್ರಶಸ್ತಿಗೆ 'ಪ್ರಜಾಪ್ರಸಿದ್ಧ' ದಿನಪತ್ರಿಕೆಯ ಉಪಸಂಪಾದಕರಾದ ಶ್ರೀ ರಘುನಾಥರೆಡ್ಡಿ ಮನ್ಸಲಾಪುರ ಅವರನ್ನು 2026 ನೇ ಸಾಲಿನ"ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಪತ್ರಿಕಾಭೂಷಣ ಪ್ರಶಸ್ತಿ " ಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 51000 ( ಐವತ್ತೊಂದು ಸಾವಿರ ರೂಪಾಯಿಗಳು) ರೂಪಾಯಿಗಳು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಸೇವಾಭೂಷಣ ಪ್ರಶಸ್ತಿಗೆ ಗಮಕ ಕಲೆಯನ್ನು ನಾಡಿನಾದ್ಯಂತ ಪರಿಚಯಿಸುತ್ತಿರುವ ಖಾಸೀಮ್ ಮಲ್ಲಿಗೆ ಮಡುವು ಇವರನ್ನು 2026ನೇ ಸಾಲಿನ "ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಸೇವಾಭೂಷಣ ಪ್ರಶಸ್ತಿ" ಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 51000 ( ಐವತ್ತೊಂದು ಸಾವಿರ ರೂಪಾಯಿಗಳು) ರೂಪಾಯಿಗಳು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ಅವರು ತಿಳಿಸಿದರು.
ಅಗಸ್ಟ್ 28 ರ ನೂಲಹುಣ್ಣಿಮೆಯಂದು ಮಹಾಶೈವ ಧರ್ಮಪೀಠದಲ್ಲಿ ನಡೆಯುವ " ಮಹಾಶೈವ ಗುರುಪೂರ್ಣಿಮೆ " ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.ಅಗಸ್ಟ್09 ರಂದು ಮುಕ್ಕಣ್ಣ ಕರಿಗಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಶೈವ ಧರ್ಮಪೀಠದ ಸಾಂಸ್ಕೃತಿಕ ಸಮಿತಿಯು ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿತು ಎಂದು ಅವರು ಮಾಹಿತಿ ನೀಡಿದರು
ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು 2012 ರಿಂದ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡುತ್ತಿದ್ದು 2025 ನೇ ಸಾಲಿನ ಪ್ರಶಸ್ತಿಯನ್ನು ಬೂಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಅವರಿಗೆ ನೀಡಲಾಗಿತ್ತು.ಬಾನು ಮುಷ್ತಾಕ್ ಅವರನ್ನು ಒಳಗೊಂಡಂತೆ ಜಿ.ಎಸ್ ಶಿವರುದ್ರಪ್ಪ, ಬಿ.ಎ.ಸನದಿ, ಎನ್ ಎಸ್ .ಲಕ್ಷ್ಮೀನಾರಾಯಣ ಭಟ್ಟ,ಶಾಶ್ವತಸ್ವಾಮಿ ಮುಕ್ಕುಂದಿಮಠ,ಡಾಕ್ಟರ್ ಚಂದ್ರಶೇಖರ ಕಂಬಾರ, ಎಚ್ ಎಸ್ ಶಿವಪ್ರಕಾಶ್,ಸಿದ್ಧರಾಮ ಹೊನ್ಕಲ್ ಮೊದಲಾದ ಗಣ್ಯರಿಗೆ ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಸಾಹಿತ್ಯ ಪ್ರಶಸ್ತಿ " ಗಳನ್ನು ನೀಡಿ,ಗೌರವಿಸಲಾಗಿದೆ ಎಂದು ಅವರು ತಿಳಿಸಿದರು.
ಮಹಾಶೈವ ಧರ್ಮ ಪೀಠದ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಡಾ.ಎನ್.ಎಚ್. ಪೂಜಾರ ಧಾರವಾಡ, ಸದಸ್ಯರಾದ ಎಚ್.ಎಚ್.ಮೇಟಿ ಧಾರವಾಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


Comments
Post a Comment