ದಲಿತರ ಕಗ್ಗೊಲೆ ಅತ್ಯಾಚಾರ ಖಂಡಿಸಿ ಬೃಹತ್ ಪ್ರತಿಭಟನೆ: ಸಿಐಡಿ ತನಿಖೆಗೆ ಆಗ್ರಹ. ಜಯ ಧ್ವಜ ನ್ಯೂಸ್, ರಾಯಚೂರು, ಆ.24- ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಮೂವರು ದಲಿತರ ಕಗ್ಗೊಲೆ ಘಟನೆ ಖಂಡಿಸಿ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದ ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಸಹಸ್ರಾರು ದಲಿತ ಸಂಘಟನೆಗಳ ಮುಖಂಡರು, ಹದ್ದಿನಾಳ ಭೂಮಾನಂದ ಕೊಲೆ, ಸಿರವಾರದ ಹೊಕ್ರಾಣಿಯಲ್ಲಿ ಅಶ್ವಿನಿ ಅತ್ಯಾಚಾರ ಕೊಲೆ, ರಾಣಿಮ್ಮ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಲ್ಲಾ ಪ್ರಕರಣಗಳನ್ನು ಸಿಐಡಿ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. ಜಿಲ್ಲೆಯಲ್ಲಿ ದಲಿತರ ಮೇಲಿನ ದಬ್ಬಾಳಿಕೆ ಕೊನೆಯಾಗಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒಕ್ಕೂರಲಿನಿಂದ ಒತ್ತಾಯಿಸಲಾಯಿತು. ಈ ಪ್ರತಿಭಟನೆಯಲ್ಲಿ ಮುಖಂಡರಾದ ನರಸಪ್ಪ ವಕೀಲರು, ರವೀಂದ್ರ ನಾಥ್ ಪಟ್ಟಿ, ಎಂ.ಆರ್.ಭೇರಿ, ಅಂಬಣ್ಣ ಅರೋಲಿಕರ್, ಹೇಮರಾಜ್ ಅಸ್ಕಿಹಾಳ,ಪಿ.ಯಲ್ಲಪ್ಪ, ವಿಶ್ವನಾಥ್ ಪಟ್ಟಿ ಸೇರಿದಂತೆ ದಲಿತ ಪರ ಸಂಘಟನೆಗಳ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು ಸಮಾಜ ಬಾಂಧವರು ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ಕ್ರಾಂತಿ ಗೀತೆ ಮೊಳಗಿದವು.
ಪಾರ್ವತಮ್ಮ ಪಾಪಾರೆಡ್ಡಿ ನಿಧನ ಹಿನ್ನಲೆ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಮುಂದೂಡಿಕೆ. ಜಯ ಧ್ವಜ ನ್ಯೂಸ್ ರಾಯಚೂರು,ಜೂ.19- ಮಾಜಿ ಶಾಸಕ ಎ.ಪಾಪಾರೆಡ್ಡಿಯವರ ಧರ್ಮಪತ್ನಿ ಪಾರ್ವತಮ್ಮ ನಿಧನ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಆಯೋಜಿಸಲಾಗಿದ್ದ ಮೂರು ದಿನಗಳ ಮುನ್ನೂರು ಕಾಪು ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಮುಂದೂಡಲಾಗಿದೆ ಎಂದು ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ ಹೇಳಿದರು. ಅವರಿಂದು ನಗರದ ಗದ್ವಾಲ್ ರಸ್ತೆಯ ವೀರಾಂಜನೇಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪಾರ್ವತಮ್ಮ ಪಾಪಾರೆಡ್ಡಿಯವರ ಶ್ರದ್ಧಾಂಜಲಿ ಕಾರ್ಯಕ್ರಮ ಬಳಿಕ ಮಾತನಾಡಿ ಮುನ್ನೂರು ಕಾಪು ಸಮಾಜದ ಹಿರಿಯರು, ಯುವಕರು ಸಭೆ ನಡೆಸಿ ನಿರ್ಣಯ ಕೈಗೊಂಡಿದ್ದು ಈ ಬಾರಿ ಸಮಾಜದ ಹಿರಿಯ ವ್ಯಕ್ತಿಯೊಬ್ಬರ ನಿಧನ ಹಿನ್ನಲೆ ದುಖದ ವಾತಾವರಣ ಕಾರಣದಿಂದ ಮುಂಗಾರು ಸಾಂಸ್ಕೃತಿಕ ಹಬ್ಬ ಮುಂದೂಡಲು ಸರ್ವಾನುಮತದಿಂದ ನಿರ್ಣಯ ...
Comments
Post a Comment