ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನಕ್ಕೆ ಒತ್ತಾಯಿಸಿ ಬೆಂಗಳೂರಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೃಹತ್ ಪ್ರತಿಭಟನೆ:
ಬ್ರಾಹ್ಮಣರನ್ನ ದೂರವಿಡಬೇಡಿ, ಸಮಾಜ ಕಟ್ಟುವ ಕೆಲಸ ಮಾಡುವವರು ಬ್ರಾಹ್ಮಣರು- ರಘನಾಥ
ಜಯ ಧ್ವಜ ನ್ಯೂಸ್ , ರಾಯಚೂರು,ಆ.6- ಬೆಂಗಳೂರಿನ ಫೀಡಂ ಪಾರ್ಕ್ ಅವರಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆ ಮತ್ತು ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್.ರಘುನಾಥ್ ರವರು ಮಾತನಾಡಿ ಕಳೆದ 70ವರ್ಷದಲ್ಲಿ ಮೊಟ್ಟ ಮೊದಲ ಬಾರಿಗೆ ಸಚಿವ ಸಂಪುಟದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ನೀಡಿಲ್ಲವೆಂದರು.
ಪಕ್ಷದಲ್ಲಿ ನಿರ್ಣಯ ಮಾಡುತ್ತಾರೆ.ಅವರ ಪಕ್ಷದ ನಿಲುವು ಕುರಿತು ನಾವು ಮೂಗು ತುರಿಸುವ ಕೆಲಸ ಮಾಡಲ್ಲ.ಬ್ರಾಹ್ಮಣರನ್ನ ಸಚಿವ ಸಂಪುಟ ವಿಸ್ತರಣೆಯಿಂದ ಹೊರಗಿಡಲಾಗಿದೆ.
ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ಇಂದಿನ ವರಗೆ ಬ್ರಾಹ್ಮಣರು ಕಾಂಗ್ರೆಸ್ ಪಕ್ಷ ಕಟ್ಟುವ ಕೆಲಸ ಮಾಡಿದ್ದಾರೆ.ಸಚಿವ ಸಂಪುಟದಲ್ಲಿ ಬ್ರಾಹ್ಮಣರಿಗೆ ಸಚಿವ ಸ್ಥಾನ ಸಿಗದಿರುವುದು ಅನ್ಯಾಯ, ಯಾಕೆ ನಮ್ಮ ಸಮುದಾಯ ಕಡೆಗಣಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ನಮ್ಮ ಸಮುದಾಯದವರು ಇದ್ದಾರೆ.
ಸರ್ಕಾರದ ವಿರುದ್ದ ಅಥವಾ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ವಿರುದ್ದ ಅಲ್ಲ. ಹಿರಿಯ ಶಾಸಕರುಗಳಾದ ಆರ್.ವಿ.ದೇಶಪಾಂಡೆ, ದಿನೇಶ್ ಗುಂಡೂರಾವ್, ವಿಶ್ವಾಸವೈದ್ಯ ಇದ್ದಾರೆ. ಬ್ರಾಹ್ಮಣರನ್ನು ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿರುವುದು ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಒಂದು ಸಚಿವ ಸ್ಥಾನ ನಮ್ಮ ಸಮಾಜಕ್ಕೆ ನೀಡಬೇಕು ಎಂಬ ಮನವಿ ಎಂದು ಹೇಳಿದರು.ಅಶೋಕ್ ಹಾರನಹಳ್ಳಿರವರು ಮಾತನಾಡಿ ಬ್ರಾಹ್ಮಣರು ಸಂಖ್ಯೆ ಕಡಿಮೆ ಇದೆ ಎಂದು ಕಡಗಣನೆ ಮಾಡಬೇಡಿ. ಆರ್.ಗುಂಡೂರಾವ್, ರಾಮಕೃಷ್ಣ ಹೆಗಡೆರವರು ಮುಖ್ಯಮಂತ್ರಿಯಾಗಿದ್ದಾರೆ.
ಶುದ್ದ ಚಾರಿತ್ಯ್ರವುಳ್ಳವುರು ನಮ್ಮವರು ಅವರಿಗೆ ಯಾಕೆ ನಮ್ಮರಿಗೆ ಸಚಿವ ಸ್ಥಾನ ನೀಡಿಲ್ಲ. ರಾಜಸ್ತಾನ್, ಉತ್ತರಪ್ರದೇಶ, ಮಧ್ಯಪ್ರದೇಶದಲ್ಲಿ ಬ್ರಾಹ್ಮಣರ ಸಂಖ್ಯೆ ಹೆಚ್ಚಿದೆ. ನಮ್ಮ ಸಮಾಜ ತೀರ್ಮಾನ ತೆಗೆದುಕೊಂಡರೆ ಬಾರಿ ಬದಲಾವಣೆಯಾಗುತ್ತದೆ ಎಂದರು.
ಪ್ರತಿಯೊಂದು ಜಾತಿಯವರಿಗೆ ಅವಕಾಶಕೊಡಿ, ನಮ್ಮ ಬ್ರಾಹ್ಮಣ ಸಮಾಜಕ್ಕೆ ಒಂದು ಸಚಿವ ಸ್ಥಾನ ಕೊಡಿ. ಮರು ಪರಿಶೀಲನೆ ಮಾಡಿ ಅವಕಾಶ ಮಾಡಿಕೊಡಿ ಎಂದರು.
ಅಸಗೋಡು ಜಯಸಿಂಹ ರವರು ಮಾತನಾಡಿ ಆರ್.ಗುಂಡೂರಾವ್ ಮುಖ್ಯಮಂತ್ರಿ ಆಗಿದ್ದಾಗ ಬಡವರಿಗೆ ಭಾಗ್ಯಜ್ಯೋತಿ, ಕೆಂಪೇಗೌಡ ಬಸ್ ನಿಲ್ದಾಣ, ಹಲವಾರು ಯೋಜನೆಗಳು ರಾಜ್ಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಬ್ರಾಹ್ಮಣರು ಆನಿವಾರ್ಯ ಈ ಸಮಾಜಕ್ಕೆ. ಬ್ರಾಹ್ಮಣ ಸಮಾಜ ಕಟ್ಟುವ ಕೆಲಸ ಮಾಡುತ್ತಾರೆ. ಬ್ರಾಹ್ಮಣರು ಜಾತ್ಯತೀತ ವಾದಿಗಳು.ದೇಶಪಾಂಡೆ ಒಂಬತ್ತು ಬಾರಿ, ದಿನೇಶ್ ಗುಂಡೂರಾವ್ ಆರು ಬಾರಿ ಶಾಸಕರಾಗಿದ್ದಾರೆ. ಡಿ.ಕೆ.ಶಿವಕುಮಾರ್ ಅಪಾರ ದೈವ ಭಕ್ತರು ಅವರ ಸರ್ಕಾರಕ್ಕೆ ಶುಭಕೋರುತ್ತೇವೆ. ಬ್ರಾಹ್ಮಣರಿಗೆ ಸಚಿವ ಸ್ಥಾನ ನೀಡಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಅಗಮಿಕರ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಡಾ.ಕೆ.ಎಸ್.ಎನ್.ದೀಕ್ಷಿತ್ ,ಮಹಾಸಭಾದ ಹಿರಿಯ ಉಪಾಧ್ಯಕ್ಷ ಆರ್.ಲಕ್ಷ್ಮೀಕಾಂತ್ ಜಿಲ್ಲಾ ಪ್ರತಿನಿಧಿಗಳಾದ ರಮೇಶ್ ಕುಲಕರ್ಣಿ, ಪಿ.ಆರ್.ಪ್ರಕಾಶ್, ಕೆ.ಎನ್.ರವಿಕುಮಾರ್, ನಾಗೇಶ್, ದಿಲೀಪ್, ಸತೀಶ್ ಉರಾಳ್ , ಮಂಜುನಾಥ್,ಬ್ರಾಹ್ಮಣ ಸಮುದಾಯದ ಮುಖಂಡರುಗಳಾದ ಎಲ್.ಜಯಸಿಂಹ ಭಾರದ್ವಾಜ್, ನಾಗಭೂಷಣ್ ರಾವ್ ರವರು ಬ್ರಾಹ್ಮಣ ಮಹಾಸಭಾದ ಸದಸ್ಯರು, ಸಮುದಾಯದ ಮುಖಂಡರುಗಳು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಿಕ್ಕಬಳ್ಳಾಪುರ,ರಾಯಚೂರು, ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬ್ರಾಹ್ಮಣ ಸಮುದಾಯದ ಜನರು ಆಗಮಿಸಿದ್ದರು.


Comments
Post a Comment