ವಾರ್ಡ್ ನಂ.17ರಲ್ಲಿ ನಿಯಮ ಉಲ್ಲಂಘಿಸಿ ದೌರ್ಜನ್ಯದಿಂದ ಮನೆ ನಿರ್ಮಾಣ                                                 ಜಯ ಧ್ವಜ ನ್ಯೂಸ್, ರಾಯಚೂರು,ಆ.11- ನಗರದ ವಾರ್ಡ್ ನಂ.17ರಲ್ಲಿ ನಿಯಮ ಉಲ್ಲಂಘಿಸಿ ಮನೆ ನಿರ್ಮಿಸುತ್ತಿದ್ದು ಮಹಾನಗರ ಪಾಲಿಕೆ ಇದನ್ನು ತಡೆಯಲು ಕೋರಲಾಗಿದೆ. ಕನ್ನಿಕಾ ಪರಮೇಶ್ವರಿ ಹಾಸ್ಟೆಲ್ ಹಿಂಬಾಗದ ಓಣಿಯಲ್ಲಿ ಕಾಡ್ಲೂರು ದೇಸಾಯಿಯವರ ಮನೆಯ ಹಿಂಬದಿ ಹೊಂದಿಕೊಂಡಂತೆ

ಅವರ ಮನೆಯ ವೆಂಟೀಲೇಟರ್ ಗಳನ್ನು ಮುಚ್ಚಿ ಮನೆ ನಿರ್ಮಿಸುತ್ತಿದ್ದು ಇದನ್ನು  ಪ್ರಶ್ನಿಸಿದರೆ ದಬ್ಬಾಳಿಕೆಯಿಂದ ಉದ್ಧಟತನದ ವರ್ತನೆಯಿಂದ ಮನೆ ನಿರ್ಮಿಸುತ್ತಿದ್ದು ಇದನ್ನು ಕೂಡಲೆ ಸಂಬಂಧಿಸಿದ ಮಹಾನಗರ  ಪಾಲಿಕೆ ಅಧಿಕಾರಿಗಳು ತಡೆದು ನ್ಯಾಯ

ದೊರಕಿಸಿಕೊಡಬೇಕು ಮತ್ತು ಸ್ಥಳದಲ್ಲಿ ಉದ್ವಿಗ್ನತೆ ಪರಿಸ್ಥಿತಿ ಉಂಟಾಗದಂತೆ ಪೊಲೀಸರು ಕ್ರಮ ಕೈಗಳ್ಳಬೇಕೆಂದು ಕೋರಲಾಗಿದೆ
.

Comments

Popular posts from this blog