ವಿಧಾನ ಸೌಧ ಮೆಟ್ಟಿಲ ಮೇಲೆ ಉರ್ದು ಹಬ್ಬ ಖಂಡನೀಯ - ಪಲುಗುಲ ನಾಗರಾಜ
ಜಯ ಧ್ವಜ ನ್ಯೂಸ್ , ರಾಯಚೂರು,ಅ.1- ಕರ್ನಾಟಕ ರಾಜ್ಯದ ಶಕ್ತಿಕೇಂದ್ರ ವಿಧಾನ ಸೌಧ ಮೆಟ್ಟಿಲು ಮೇಲೆ ಉರ್ದು ಹಬ್ಬ ಮಾಡಲು ಹೊರಟಿರುವ ಕಾಂಗ್ರೆಸ್ ಪಕ್ಷದ ಆಡಳಿತ ನಿರ್ಧಾರ ಖಂಡನೀಯ ಎಂದು ಹಿರಿಯ ಸಾಹಿತಿ ಪಲುಗುಲ ನಾಗರಾಜ ತಿಳಿಸಿರುತ್ತಾರೆ. ರಾಜ್ಯದಲ್ಲಿ ಕನ್ನಡ ಭಾಷೆ ಸಾರ್ವಭೌಮ ಇಲ್ಲಿ ಎಲ್ಲಾ ಜಾತಿ ಧರ್ಮದವರು ಕನ್ನಡವನ್ನು ಪ್ರೀತಿಸುತ್ತಾರೆ ಯಾವತ್ತೂ ಸಾಹಿತಿಗಳು ಕನ್ನಡ ಭಾಷೆಯನ್ನು ಜಾತಿ ಧರ್ಮಕ್ಕೆ ಅಂಟಿಸಿಕೊಂಡಿಲ್ಲ ಹೀಗಿರುವಾಗ ರಾಜ್ಯದ ಮುಕುಟ ವಿಧಾನ ಸೌಧ ಅದರ ಮೆಟ್ಟಿಲು ಮೇಲೆ ಉರ್ದು ಹಬ್ಬದ ಚರ್ಚೆ ನಿಜಕ್ಕೂ ಬೇಸರದ ವಿಷಯ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಂದಿನಿಂದ ಅಲ್ಪಸಂಖ್ಯಾತರ ಓಲೈಕೆಗೆ ಏನಿಲ್ಲದ ಕಸರತ್ತು ಮಾಡುತ್ತಿದೆ. ಕಳೆದ ವರ್ಷ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಹ್ವಾನಿಸಿ ಅಲ್ಪಸಂಖ್ಯಾತರ ಓಲೈಕೆ ಮಾಡಲಾಗಿತ್ತು. ಇದೀಗಗ ಸಚಿವ ಯು.ಟಿ.ಖಾದರ್ ರವರು ಉರ್ದು ಭಾಷೆಯನ್ನು ನೇರವಾಗಿ ವಿಧಾನ ಸೌಧ ಮೆಟ್ಟಿಲು ಮೇಲೆ ವೈಭವಿಸಲು ಹೊರಟಿರುವುದು ಸರಿಯಲ್ಲ, ಕನ್ನಡಿಗರು ಈಗಾಗಲೇ ಹಲವು ಭಾಷೆಯ ಒತ್ತಡದಲ್ಲಿ ಸಿಲುಕಿದ್ದಾರೆ ಅಂದು ತುತ್ತಿನ ಚೀಲ ತುಂಬಲು ಬಂದು ಇಂದು ರಾಜ್ಯದಲ್ಲಿ ತಮ್ಮ ಭಾಷೆಯನ್ನು ಗಟ್ಟಿಗೊಳಿಸುತ್ತಿದ್ದಾರೆ. ಯು.ಟಿ.ಖಾದರ್ ಉರ್ದು ಭಾಷೆಯನ್ನು ವಿಧಾನ ಸೌಧ ಮೆಟ್ಟಿಲು ಹತ್ತಿಸಿದರೆ ನಾಳೆ ಬೆಳಗಾವಿ ಸುವರ್ಣ ಸೌಧ ಮೆಟ್ಟಿಲಲ್ಲಿ ಮರಾಠ ಹಬ್ಬ ಆಚರಿಸಲು ಮುಂದಾಗ ಬಹುದು ಎಂಬ ಎಚ್ಚರ ಇರಲಿ.
ಈಗಾಗಲೇ ಮಂಗಳೂರು ಸಚಿವ ಸಂಪುಟದಲ್ಲಿ ತುಳು ಭಾಷೆಯನ್ನು ರಾಜ್ಯದ ಎರಡನೇ ಭಾಷೆ ಮಾನ್ಯತೆ ನೀಡಿರುತ್ತೀರಿ. ಕರಾವಳಿ ಭಾಗದಲ್ಲಿ ಕನ್ನಡ ಭಾಷೆ ನಾವು ಉಳಿಸಿಕೊಳ್ಳಲು ಹೊರಟಿರುವಾಗ ನೀವು ತುಳು ಭಾಷೆಗೆ ಮಾನ್ಯತೆ ನೀಡಿದಿರಿ.
ನಿಮ್ಮ ರಾಜಕೀಯ ಅಸ್ತಿತ್ವಕ್ಕೆ ಜಾತಿ ಓಲೈಕೆ ಮಾಡಿದಿರಿ ಈಗ ಭಾಷೆ ಓಲೈಕೆ ಮಾಡಿದರೆ ಕರ್ನಾಟಕ ಕನ್ನಡಿಗರು ನಿಮಗೆ 2028 ರ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸ ಬೇಕಾಗುತ್ತದೆ. ಅಧಿಕಾರ ಇದೆ ಎಂದು ಕೇಂದ್ರ ಸರ್ಕಾರದ ವಂದೇ ಮಾತರಂ ಆದೇಶ ವಿರೋಧ ಮಾಡಿದ್ದೀರಿ , ಈ ಹಿಂದೆ ಉರ್ದು ವಾರ್ತೆ ಜಾರಿಗೊಳಿಸಿ ಕನ್ನಡಿಗರ ಭಾವನೆಗೆ ಧಕ್ಕೆ ಆಗಿದೆ ಪ್ರತಿಯಾಗಿ ದೊಡ್ಡ ವಿರೋದ ಕನ್ನಗರು ಮಾಡಿರುತ್ತಾರೆ ಭಾಷೆ ವಿಷಯದಲ್ಲಿ ನಡೆ ಸೂಕ್ಷ್ಮ ಆಗಿರಲಿ ಎಂದು ಸಾಹಿತಿ ಪಲುಗುಲ ನಾಗರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments
Post a Comment