Posts

ಬಸನಗೌಡ ದದ್ದಲ್ ರಿಂದ ಜಲ ಜೀವನ ಮಿಷನ್ ಯೋಜನೆ ಭೂಮಿ ಪೂಜೆ

Image
  ಬಸನಗೌಡ ದದ್ದಲ್ ರಿಂದ ಜಲ ಜೀವನ ಮಿಷನ್ ಯೋಜನೆ ಭೂಮಿ ಪೂಜೆ  .                                ರಾಯಚೂರು,ಡಿ.15- ತಲಮಾರಿ  ಹಾಗೂ ಗಿಲ್ಲೇಸೂಗುರು  ಜಿಲ್ಲಾ  ಪಂಚಾಯಿತಿ ವ್ಯಾಪ್ತಿಯ ಎಲ್.ಕೆ ದೊಡ್ಡಿ, ಜಂಬಲದಿನ್ನಿ, ಗುಂಜಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಂಟಪೂರ ,ವೈ ಮಲ್ಲಪೂರ, ಜುಲುಮಗೇರಾ ಮಾಸದೊಡ್ಡಿ, ಗ್ರಾಮಗಳಲ್ಲಿ ಗ್ರಾಮೀಣ  ಶಾಸಕರಾದ  ಬಸನಗೌಡ ದದ್ದಲ್ ರವರು ಜಲ ಜೀವನ ಮಿಷನ್ ಯೋಜನೆಯಡಿಯಲ್ಲಿ ಮನೆ ಮನೆಗೆ ವೈಯಕ್ತಿಕ ನಳ ಯೋಜನೆಗೆ ಭೂಮಿ ಪೂಜೆ  ನೆರವೇರಿಸಿದರು.                                          ಶಾಸಕರು ಮಾತನಾಡಿ ಕ್ಷೇತ್ರದಲ್ಲಿ ಯಾರು ಸಹ ಕೊಡ ಹೊತ್ತು ನೀರು ತರುವ ತಾಪತ್ರೆಯ ಬರಬಾರದೆಂದು ಪ್ರತಿಯೊಂದು ಮನೆಗೆ ವೈಯಕ್ತಿಕ ನಳದ ವ್ಯವಸ್ಥೆ ಕಲ್ಪಿಸಲಾಗುತ್ತದೆ ಮತ್ತು ಪೈಪ್ ಲೈನ್ ಹಾಕುವಾಗ ಸಿಸಿ ರಸ್ತೆ ಹಾಕಲಾಗುತ್ತದೆ ಎಂದು ಹೇಳಿದರು .   ತುಂಟಪೂರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಮಂಜೂರು ಮಾಡಲಾಗಿದೆ.   ಗುಂಜಳ್ಳಿ ಗ್ರಾಮದಲ್ಲಿ ಹೈಮಾಸ್ ವಿದ್ಯುತ್ ದೀಪ ಉದ್ಘಾಟನೆ ,ಹಂಚಿನಾಳ ಗ್ರಾಮದಲ್...

ಡಾ.ರಝಾಕ ಉಸ್ತಾದರವರಿಂದ ಅಮರೇಗೌಡ ಪಾಟಿಲ್ ಬಯ್ಯಾಪುರ ಹುಟ್ಟು ಹಬ್ಬಕ್ಕೆ ಶುಭ ಕೋರಿಕೆ

Image
ಡಾ.ರಝಾಕ ಉಸ್ತಾದರವರಿಂದ ಅಮರೇಗೌಡ ಪಾಟೀಲ್ ಬಯ್ಯಾಪುರ ಹುಟ್ಟು ಹಬ್ಬಕ್ಕೆ ಶುಭ ಕೋರಿಕೆ  .                   ರಾಯಚೂರು,ಡಿ.16- ಡಾ.ರಝಾಕ ಉಸ್ತಾದ ಇವರು  ಕುಷ್ಟಗಿ ಶಾಸಕರು  ಹಾಗೂ ಮಾಜಿ ಸಚಿವರಾದ ಅಮರೇಗೌಡ ಪಾಟಿಲ್ ಬಯ್ಯಾಪುರ ರವರ 69ನೇ ಜನುಮ ದಿನದ ಪ್ರಯುಕ್ತ ಕುಷ್ಟಗಿಯ ಶಾಸಕರ ಮನೆಯಲ್ಲಿ ಭೇಟಿಯಾಗಿ ಸನ್ಮಾನಿಸಿ ಶುಭ ಕೋರಿದರು. ಅವರ‌ ಮುಂದಿನ ರಾಜಕೀಯ ಭವಿಷ್ಯ ಉಜ್ವಲವಾಗಲಿ, ಅವರ ಸೇವೆ ಜನರಿಗೆ ಸದಾ ಸಿಗುವಂತಾಗಲಿ  ಎಂದು ಹಾರೈಕೆ ಮಾಡಲಾಯಿತು.                                          ಈ ಸಂದರ್ಭದಲ್ಲಿ ಅಬ್ದುಲ್ ಹೈ ಫೆರೋಜ್, ವೆಂಕಟೇಶ ಯಾದವ, ಮೊಹಮ್ಮದ ಫರೀದ ಗೋಗಿ ಉಪಸ್ಥಿತರಿದ್ದರು.

ನೂತನ ಪ್ರಾದೇಶಿಕ ಕಚೇರಿ, ಪ್ರಯೋಗಾಲಯ ಉದ್ಘಾಟನೆ: ಮಾಲಿನ್ಯ ನಿಯಂತ್ರಣಕ್ಕಾಗಿ ಉತ್ತಮ ಕಾರ್ಯಗಳಾಗಬೇಕು- ಸಚಿವ ಶಂಕರ ಪಾಟೀಲ ಮುನೇನಕೊಪ್ಪ

Image
  ನೂತನ ಪ್ರಾದೇಶಿಕ ಕಚೇರಿ, ಪ್ರಯೋಗಾಲಯ ಉದ್ಘಾಟನೆ: ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಉತ್ತಮ ಕಾರ್ಯಗಳಾಗಬೇಕು- ಸಚಿವ ಶಂಕರ ಪಾಟೀಲ ಮುನೇನಕೊಪ್ಪ ರಾಯಚೂರು,ಡಿ.15- ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿ0ದ ಜನರಿಗೆ ಉಪಯೋಗವಾಗುವಂತಹ ಕಾರ್ಯಗಳಾಗಬೇಕೆಂದು ಕೈಮಗ್ಗ ಮತ್ತು ಜವಳಿ ಇಲಾಖೆ, ಕಬ್ಬು ಮತ್ತು ಸಕ್ಕರೆ ಸಚಿವ ಶಂಕರ ಬ. ಪಾಟೀಲ್ ಮುನೇನಕೊಪ್ಪ ಅವರು ಹೇಳಿದರು. ಅವರು  ನಗರದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ಆವರಣದಲ್ಲಿ ನೂತನ ಪ್ರಾದೇಶಿಕ ಕಚೇರಿ ಮತ್ತು ಪ್ರಯೋಗಾಲಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಮಾಲಿನ್ಯ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಪ್ರಾದೇಶಿಕ ಕಚೇರಿಯ ಕಟ್ಟಡ ಮತ್ತು ಪ್ರಯೋಗಾಲಯ ನಿರ್ಮಾಣಗೊಂಡಿರುವುದು ಸಂತಸದ ವಿಚಾರವಾಗಿದ್ದು, ಮುಂದಿನ ದಿನಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯಿ0ದ ಜನರಿಗೆ ಉಪಯುಕ್ತವಾದ ಕಾರ್ಯವಾಗಬೇಕು ಇದಕ್ಕೆ ಸರ್ಕಾರದ ಸಂಪೂರ್ಣ ಸಹಕಾರವಿದೆ ಎಂದರು. ರಾಯಚೂರು ನಗರದಲ್ಲಿ ಕುಡಿಯುವ ನೀರಿನ ಶುದ್ಧತೆ, ಪರಿಸರ ಮಾಲಿನ್ಯ ಸೇರಿದಂತೆ ಇನ್ನಿತರ ಮಾಲಿನ್ಯ ವಿಚಾರಕ್ಕೆ ಸಂಬoಧಿಸಿದoತೆ ಪ್ರಯೋಗಾಲಯದಲ್ಲಿ ಪರೀಕ್ಷೆಗಳು ಉತ್ತಮವಾಗಿ ಹಾಗೂ ಗುಣಮಟ್ಟದ ರೀತಿಯಲ್ಲಿ ನಡೆಯಬೇಕು ಹಾಗೂ ನಿರಂತವಾಗಿ ಪರೀಕ್ಷೆಯ ವರದಿಗಳನ್ನು ಪರಿಶೀಲಿಸುವ ಕೆಲಸಗಳಾಗಬೇಕು ಎಂದರು ಮಾಲಿನ್ಯ ನಿಯಂತ್ರಣಕ್ಕೆ ಸಂಬoಧಿಸಿದoತೆ ಮಂಡಳಿಯು ಸರ್ಕಾರದ ನಿಯಮದಡಿ ಕಾರ್ಯನಿರ್ವಹಿಸಿ, ಯಾವುದೇ ಸಮಸ್ಯೆ...

ಕಾಡ್ಲೂರು ಸಂಸ್ಥಾನ ಮತ್ತು ರಂಗದೇ ವತಿಯಿಂದ ಕಿರು ಗ್ರಂಥಾಲಯ ಕಾರ್ಯ ಶ್ಲಾಘನೀಯ : ಮಕ್ಕಳಲ್ಲಿ ನೈತಿಕ ಶಿಕ್ಷಣ ಅತಿ ಮುಖ್ಯ-ಶ್ರೀಸುಜಯನಿಧಿ ತೀರ್ಥರು

Image
" ಕಾಡ್ಲೂರು ಸಂಸ್ಥಾನ" ಮತ್ತು "ರಂಗದೇ" ವತಿಯಿಂದ ಕಿರು ಗ್ರಂಥಾಲಯ ಕಾರ್ಯ ಶ್ಲಾಘನೀಯ : ಮಕ್ಕಳಲ್ಲಿ ನೈತಿಕ ಶಿಕ್ಷಣ ಅತಿ ಮುಖ್ಯ-ಶ್ರೀಸುಜಯನಿಧಿ ತೀರ್ಥರು ರಾಯಚೂರು,ಡಿ.೧೪-ಮಕ್ಕಳು ಕೇವಲ ಅಂಕ ಗಳಿಕೆಗೆ ಮಾತ್ರ ಶಿಕ್ಷಣ ಪಡೆಯದೆ ನಮ್ಮ ದೇಶದ ಸಂಸ್ಕೃತಿ ಆಚಾರ ವಿಚಾರಗಳನ್ನು ಅರಿತುಕೊಂಡು ಉತ್ತಮ ಪ್ರಜೆಯಾಗುವತ್ತ ದಾಪುಗಾಲಿಡಬೇಕು ಈ ನಿಟ್ಟಿನಲ್ಲಿ ಕಿರು ಗ್ರಂಥಾಲದಲ್ಲಿರುವ ಆದರ್ಶ ಪುರುಷರ  ಪುಸ್ತಕಗಳು ಮಕ್ಕಳಿಗೆ ಪ್ರೇರಣೆ ನೀಡುತ್ತವೆ ಎಂದು ಮುಳಬಾಗಿಲು ಶ್ರೀಪಾದರಾಜ ಮಠದ ಪೀಠಾಧಿಪತಿಗಳಾದ ಶ್ರೀಶ್ರೀ ೧೦೦೮ ಶ್ರೀ ಸುಜಯನಿಧಿ ತೀರ್ಥರು ನುಡಿದರು. ಅವರಿಂದು ನಗರದ ಗಾಜಗಾರಪೇಟೆಯ ಕಾಡ್ಲೂರು ದೇಸಾಯರ ನಿವಾಸದಲ್ಲಿ ಪಾದಪೂಜೆ ಸ್ವೀಕರಿಸಿ  ನಿವಾಸದ  ಆವರಣದಲ್ಲಿ" ಕಾಡ್ಲೂರು ಸಂಸ್ಥಾನ" ಮತ್ತು "ರಂಗದೇ" ವತಿಯಿಂದ  ಸ್ಥಾಪಿಸಲಾಗಿರುವ ಭಾರತ ಭಾರತಿ ಪುಸ್ತಕಗಳ ಕಿರು ಗ್ರಂಥಾಲಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಶಾಲಾ ಮಕ್ಕಳು ಕೇವಲ ತಮ್ಮ ಪಠ್ಯದಲ್ಲಿರುವ ಪಠ್ಯಕ್ರಮವನ್ನು ಮಾತ್ರ ಅಭ್ಯಸಿಸದೆ  ದೇಶ ಭಕ್ತಿ ಸಾಮಾಜಿಕ ಪ್ರಜ್ಞೇ ನೈತಿಕತೆ ಮೂಡಿಸುವ ಮಹಾನ್ ಪುರುಷರ, ಸಂತರ, ಸ್ವಾತಂತ್ರö್ಯ ಹೋರಾಟಗಾರರ, ತತ್ವಜ್ಞಾನಿಗಳ, ರಾಷ್ಟç ನಾಯಕರ ,ಕವಿಗಳ ದರ್ಶನಿಕರ ಪುಸ್ತಕಗಳನ್ನು ಇಲ್ಲಿ ಇಡಲಾಗಿದ್ದುಇ ಅವುಗಳನ್ನು ತಮ್ಮ ನಿತ್ಯದ ಅಥವಾ ಬಿಡುವಾದ ಸಮಯದಲ್ಲಿ ಓದಿದರೆ ಅವರಿಗೆ ಉತ್ತಮ ಸಂಸ್ಕಾರ ದೊರೆಯು...

ಝೀಕಾ ವೈರಸ್ ಹರಡದoತೆ ಸೂಕ್ತ ಕ್ರಮ ಕೈಗೊಳ್ಳಿ-ಎಲ್ ಚಂದ್ರಶೇಖರ ನಾಯಕ

Image
ಝೀಕಾ ವೈರಸ್ ಹರಡದoತೆ ಸೂಕ್ತ ಕ್ರಮ ಕೈಗೊಳ್ಳಿ: ಎಲ್. ಚಂದ್ರಶೇಖರ ನಾಯಕ ರಾಯಚೂರು,ಡಿ.13- ಜಿಲ್ಲೆಯಲ್ಲಿ ಝೀಕಾ ವೈರಸ್ ಲಕ್ಷಣಗಳು ಕಂಡುಬರುತ್ತಿದ್ದು, ಈ ವೈರಸ್ ಹೆಚ್ಚಾಗಿ ಹರಡದಂತೆ ಮುಂಜಾಗೃತಾ ಕ್ರಮವಾಗಿ ಎಲ್ಲಾ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ್ ನಾಯಕ ಅವರು ಅಧಿಕಾರಿಗಳಿಗೆ ಸೂಚಿಸಿದರು. ಅವರು  ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಝೀಕಾ ವೈರಸ್‌ಗೆ ಸಂಬoಧಪಟ್ಟoತೆ ಆರೋಗ್ಯ ಇಲಾಖೆ ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಮಾನವಿ ತಾಲೂಕಿನ ನೀರಮಾನ್ವಿ ಗ್ರಾಮದ ಕೋಳಿ ಕ್ಯಾಂಪ್ ಎನ್ನುವ ಪ್ರದೇಶದಲ್ಲಿ ಈಗಾಗಲೇ ಒಬ್ಬಳು ಬಾಲಕಿಯಲ್ಲಿ ಝೀಕಾ ವೈರಸ್ ಕಂಡುಬoದಿದ್ದು, ಸೊಳ್ಳೆಗಳಿಂದಲೇ ಈ ವೈರಸ್ ಅತ್ಯಂತ ವೇಗವಾಗಿ ಹರಡುವುದರಿಂದ ಗ್ರಾಮದಲ್ಲಿ ಹಾಗೂ ಜಿಲ್ಲೆಯಾದ್ಯಂತ ಎಲ್ಲಾ ಗ್ರಾಮಗಳಲ್ಲಿ ಜನರು ಸ್ವಚ್ಛತೆ ಹಾಗೂ ನೀರು ನಿಲ್ಲದಂತೆ ನೋಡಿಕೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದರು. ನೀರಮಾನವಿಯ ಕೋಳಿ ಕ್ಯಾಂಪ್ ಹಾಗೂ ನೀರಮಾನ್ವಿ, ನೀರಮಾನವಿ ತಾಂಡಾ, ರಾಧಾಕೃಷ್ಣಾ ಕ್ಯಾಂಪ್, ಹರವಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಎಲ್ಲಾ ಗ್ರಾಮಗಳಲ್ಲಿ ಜನರ ರಕ್ತದ ಮಾದರಿಗಳನ್ನು ಸಂಗ್ರಹಿಸಬೇಕು ಹಾಗೂ ಈ ಗ್ರಾಮಗಳಲ್ಲಿ ಸೊಳ್ಳೆಗಳು ಹೆಚ್ಚಾಗದಂತೆ ಫಾಗಿಂಗ್ ಮಾಡಿಸುವಂತೆ ಸೂಚನೆ ನೀಡಿದರು. ಇದೇ ವೇಳೆ ಜಿಲ್ಲಾ ಆರೋಗ್ಯ ಮತ್...

ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ : ಬೆಳೆ ವಿಮೆಗೆ ರೈತರ ಒತ್ತಾಯ

Image
  ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ :  ಬೆಳೆ ವಿಮೆಗೆ ರೈತರ  ಒತ್ತಾಯ ರಾಯಚೂರು,ಡಿ.13-  ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಹತ್ತಿ ಬೆಳೆಗೆ ರೈತರು ಬೆಳೆ ವಿಮೆ ಪಾವತಿಸಿದ್ದು, ಆದರೆ  ಹಣ ನೀಡದೇ ವಿಮೆ ಮಾಲೀಕರು ವಂಚನೆ ಮಾಡುತ್ತಿದ್ದರೆಂದು ಮಾಚನೂರು ರೈತರು ಡಿಸಿ ಕಚೇರಿ ಅಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದರು. ಜಿಲ್ಲೆಯ ಸಿರವಾರ ತಾಲೂಕಿನ ಮಾಚನೂರು ಗ್ರಾಮದಲ್ಲಿ  ಅಕಾಲಿಕ ಮಳೆಯಿಂದ ಹತ್ತಿ ಬೆಳೆಯು ಸಂಪೂರ್ಣವಾಗಿ ಹಾಳಾಗಿದ್ದು,ಒಂದು ಎಕರೆ ಜಮೀನಲ್ಲಿ ಕೇವಲ ೨ ಕ್ವಿಂಟಲ್ ಮಾತ್ರ ಇಳುವರಿ ಬಂದಿದ್ದು ಆದರೆ ಗ್ರಾಮ ಅಭಿವೃದ್ಧಿ ಅಧಿಕಾರಿಗಳು ರೈತರ ಮತ್ತೆ ಗ್ರಾಮಪಂಚಯಿತಿಯವರ ಸಮ್ಮುಖದಲ್ಲಿ ಸಿಸಿ ಕಟ್ಟಿಂಗ್ ಮಾಡದೆ ಒಂದು ಎಕರೆಗೆ ೧೪ ಕ್ವಿಂಟಲ್ ಹತ್ತಿ ಬೆಳೆಯಲಾಗಿದೆಂದು ವಿಮೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಇದರಿಂದ ವಿಮೆ ಅಧಿಕಾರಿಗಳು ವಿಮೆ ಪಾವತಿ ಮಾಡುತ್ತಿಲ್ಲ ಅದರಿಂದ ಕೂಡಲೇ ರೈತರ ಜಮೀನುಗಳಿಗೆ ಗ್ರಾಮ ಅಭಿವೃದ್ಧಿ ಅಧಿಕಾರಿಗಳು ರೈತರ ಮನೆಗಳಿಗೆ ತೆರಳಿ ಬೆಳೆ ಸಮೀಕ್ಷೆ ಮಾಡಿ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪಂಪನಗೌಡ, ವೆ0ಕಟೇಶ್, ಬಸವರಾಜ, ರಾಜಪ್ಪ, ಉಮೇಶ್, ರಾಜಪ್ಪ ಗೌಡ,ಸಿದ್ದನ ಗೌಡ, ಮಲ್ಲಿಕಾರ್ಜುನ, ಅಂಬಣ್ಣ, ಆಂಜನೇಯ,ವೆoಕನಗೌಡ,ಕರೆಪ್ಪ ಇದ್ದರು.

ರಾಯಚೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಸ್ಥಳೀಯರಿಗೆ ನೀಡಿ: ಬಿಜೆಪಿ ಪಕ್ಷದ ಆಮೀಷಕ್ಕೊಳಗಾಗಿಲ್ಲವೆಂದು ದದ್ದಲ್ ಪ್ರಮಾಣ ಮಾಡಲಿ-ದೇವಣ್ಣ ನಾಯಕ

Image
 ರಾಯಚೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಸ್ಥಳೀಯರಿಗೆ ನೀಡಿ: ಬಿಜೆಪಿ ಪಕ್ಷದ ಆಮೀಷಕ್ಕೊಳಗಾಗಿಲ್ಲವೆಂದು ದದ್ದಲ್ ಪ್ರಮಾಣ ಮಾಡಲಿ- ದೇವಣ್ಣ ನಾಯಕ ರಾಯಚೂರು,ಡಿ.೧೩-ಬಿಜೆಪಿ ಪಕ್ಷದ ಆಮೀಷಕ್ಕೊಳಗಾಗಿಲ್ಲವೆಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ದೇವರ ಮುಂದೆ ಪ್ರಮಾಣ ಮಾಡಲಿ ಎಂದು ಕಾಂಗ್ರೆಸ್ ಮುಖಂಡರಾದ ದೇವಣ್ಣ ನಾಯಕ ವಕೀಲರು ಸವಾಲು ಹಾಕಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಗ್ರಾಮೀಣ ಕ್ಷೇತ್ರದ ಹಾಲಿ ಶಾಸಕ ಬಸನಗೌಡ ದದ್ದಲ್ ಮತದಾರರಿಗೆ ವಂಚನೆಗೈದಿದಾರೆ   ಅವರು  ಕಾಂಗ್ರೆಸ್ ಪಕ್ಷದಿಂದ ಜಯಿಸಿ ಬಿಜೆಪಿಯ ಆಮೀಷಕ್ಕೊಳಗಾಗಿದ್ದಾರೆಂದು ಆರೋಪಿಸಿದ  ಅವರು ಅಮೀಷಕ್ಕೊಳಗಾಗಿಲ್ಲವೆಂದು ಪಂಚಮುಖಿ ಪ್ರಾಣದೇವರ ಅಥವಾ ದೇವಸ್ಗೂರು ಸೂಗುರೇಶ್ವರ ದೇವಸ್ಥಾನದಲ್ಲಿ ಪ್ರಮಾಣ ಮಾಡಲಿ ಎಂದು ಆಗ್ರಹಿಸಿದರು. ದದ್ದಲ್ ಮೂಲತ ಮಾನ್ವಿ ತಾಲೂಕಿನವರು ಅವರು ಅನೇಕ ಬಾರಿ ಅನೇಕ ಪಕ್ಷಗಳಲ್ಲಿ ಸೋಲುಂಡಿದ್ದರು ಅವರಿಗೆ ಕಾಂಗ್ರೆಸ್ ಪಕ್ಷ ಕಳೆದ ಬಾರಿ ಗ್ರಾಮೀಣ ಕ್ಷೇತ್ರದಲ್ಲಿ ಟಿಕೆಟ್ ನೀಡಿದ್ದು ಮತದಾರರು ಗೆಲ್ಲಿಸಿ ಕಳುಹಿಸಿದ್ದಾರೆ ಆದರೆ ಅವರು ಮತದಾರರಿಗೆ ಬೆಲೆ ನೀಡದೆ ಬಿಜೆಪಿ ಪಕ್ಷದ ಆಮೀಷಕ್ಕೊಳಗಾಗಿದ್ದಾರೆ ಎಂದು ದೂರಿದರು. ಇತ್ತೀಚೆಗೆ ದರ್ಗಾವೊಂದರಲ್ಲಿ ಸಭೆ ನಡೆಸಿ ನನಗೆ ಬಿಜೆಪಿ ಪಕ್ಷದಿಂದ ನೂರಾರು ಕೋಟಿ ರೂಗಳ ಆಮೀಷವಿದ್ದರು ನಾನು ಕಾಂಗ್ರೆಸ್ ನಲ್ಲಿ ಉಳಿದಿದ್ದೇನೆಂದು ಸುಳ್ಳು ಹೇಳಿದ್ದಲ್ಲದೆ ದರ್ಗಾದಂತಹ ಪವಿ...