ಬೆಂಗಳೂರು ವರೆಗೂ ರೈಲು ವಿಸ್ತರಣೆಗೆ ಡಾ. ಬಾಬುರಾವ ಕೇಂದ್ರ ರೈಲ್ವೇ ಸಚಿವರಿಗೆ ಒತ್ತಾಯ
ಬೆಂಗಳೂರು ವರೆಗೂ ರೈಲು ವಿಸ್ತರಣೆಗೆ ಡಾ. ಬಾಬುರಾವ ಕೇಂದ್ರ ರೈಲ್ವೇ ಸಚಿವರಿಗೆ ಒತ್ತಾಯ ರಾಯಚೂರು, ಜ.27-ಕಲ್ಯಾಣ ಕರ್ನಾಟಕ ಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ರೈಲು ಸಂಖ್ಯೆ 77031-32 ಗುಲ್ಬರ್ಗದಿಂದ ರಾಯಚೂರು ಮಾರ್ಗದ ಮೂಲಕ ಬೆಂಗಳೂರು ವರೆಗೂ ವಿಸ್ತರಣೆ ಮಾಡುವಂತೆ ರೈಲ್ವೆ ಬೋರ್ಡ್ ಸದಸ್ಯ ಡಾ. ಬಾಬುರಾವ ಅವರು ಸಂಸದ ರಾಜ ಅಮರೇಶನಾಯಕ ಅವರ ಮೂಲಕ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ರೈಲ್ವೆ ಸಂಖ್ಯೆ 07067-68 ಮಚಲಿಪಟ್ನದಿಂದ ಕರ್ನೂಲ್ ವರೆಗೆ ವಿಸ್ತರಿಸಿದ್ದು, ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಪ್ರಯಾಣಕರ ಮತ್ತು ರಾಘವೇಂದ್ರ ಸ್ವಾಮಿ ಭಕ್ತರ ಅನುಕೂಲಕ್ಕಾಗಿ ಸದರಿ ರೈಲ್ವೆಯನ್ನು ಮಂತ್ರಾಲಯ ವರೆಗೂ ವಿಸ್ತರಣೆ ಮಾಡುವಂತೆ ಮನವಿ ಮಾಡಿದರು. ರೈಲ್ವೆ ಸಂಖ್ಯೆ 12861-62 ದಿನನಿತ್ಯ ಸಂಚರಿಸುವ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ನ್ನು ವಿಶಾಖಪಟ್ನದಿಂದ ಮೆಹಬೂಬನಗರದ ವೆರೆಗೆ ವಿಸ್ತರಿಸಲಾಗಿದೆ. ಸದರಿ ರೈಲ್ವೆಯನ್ನು ರಾಯಚೂರು ವರೆಗೂ ವಿಸ್ತರಣೆ ಮಾಡುವಂತೆ ಒತ್ತಾಯಿಸಿದರು. ಕೇಂದ್ರ ಸಚಿವರು ಪ್ರಯಾಣಿಕರ ಅನುಕೂಲಕ್ಕಾಗಿ ಕೂಡಲೇ ನಮ್ಮ ಮನವಿಯನ್ನು ಆಲಿಸಿ ಶೀಘ್ರದಲ್ಲಿ ರೈಲ್ವೆಯನ್ನು ವಿಸ್ತರಣೆ ಮಾಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ನಾಗೇಶ್ವರರಾವ್, ಭೀಮರೆಡ್ಡಿ, ಶಂಕರರಾವ್,ಸಿದ್ದಯ್ಯಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.