Posts

ಬೊಮ್ಮನಾಳ ಗ್ರಾಮದಲ್ಲಿ ಕ್ರೈಸ್ತ ಅಭಿವೃದ್ಧಿ ನಿಗಮದಿಂದ ಮಂಜೂರಾಗಿರುವ ಅನುದಾನದಲ್ಲಿ ನವೀಕೃತ ಚರ್ಚ್ ಕಾಮಗಾರಿಗೆ ಭೂಮಿ ಪೂಜೆ

Image
ಬೊಮ್ಮನಾಳ ಗ್ರಾಮದಲ್ಲಿ  ಕ್ರೈಸ್ತ ಅಭಿವೃದ್ಧಿ ನಿಗಮದಿಂದ ಮಂಜೂರಾಗಿರುವ ಅನುದಾನದಲ್ಲಿ ನವೀಕೃತ ಚರ್ಚ್ ಕಾಮಗಾರಿಗೆ ಭೂಮಿ ಪೂಜೆ                                                  ರಾಯಚೂರು, ಜೂ.೧6-ಮನುಷ್ಯನನ್ನು ಕಷ್ಟದಿಂದ ಪಾರು ಮಾಡಿ ಆತ ಮಾಡಿದ ಕೆಟ್ಟ ಕೆಲಸಗಳನ್ನು ಕ್ಷಮಿಸಲು ಆರಾಧನಾ ಸ್ಥಳವಾಗಿ ಪ್ರಾರ್ಥನಾ ಮಂದಿರ ಬೇಕು ಎಂದು ಸಿರವಾರ ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ಸನತ್ ಸತಿಶಕುಮಾರ್ ಹೇಳಿದರು. ಇಂದು ದೇವದುರ್ಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಕರ್ನಾಟಕ ಸರ್ಕಾರದ ಕ್ರೈಸ್ತ ಅಭಿವೃದ್ಧಿ ನಿಗಮದಿಂದ ಮಂಜೂರಾಗಿರುವ ನವೀಕೃತ ಚರ್ಚ್ ಕಾಮಗಾರಿಗೆ ಭೂಮಿ ಪೂಜೆ ಜರುಗಿಸಿ ಮಾತನಾಡಿದ ಅವರು ಪ್ರತಿಯೊಬ್ಬರಿಗೆ ತನ್ನ ಧಾರ್ಮಿಕ ವಿಧಿ ವಿಧಾನ ಅನುಸರಿಸಲು ಮತ್ತು ಸಾಮೂಹಿಕ ಪ್ರಾರ್ಥನೆ ಮಾಡಲು ಪ್ರಾರ್ಥನಾ ಮಂದಿರ ಬೇಕು ಆ ದಿಶೆಯಲ್ಲಿ ಈ ಗ್ರಾಮದಲ್ಲಿ ನವೀಕೃತ ಚರ್ಚ್ ಕಾಮಗಾರಿ ಆರಂಭವಾಗುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು. ಪರಮ ಪವಿತ್ರನಾದ ಯೇಸು ನಮ್ಮಲ್ಲಿರುವ ಕಷ್ಟಗಳನ್ನು ನಿವಾರಿಸಿ ಮತ್ತು ನಮ್ಮ ಪಾಪಗಳನ್ನು ಕ್ಷಮೆ ಮಾಡಿ ಸನ್ಮಾರ್ಗದಲ್ಲಿ ಕಳಿಸುವುದರ ಜೊತೆಗೆ ನಮಗೆ ಆಯುರ್ ಆರೋಗ್ಯ ನೀಡುವ ದೇವರಾಗಿದ್ದುಘಿ, ಆತನ ಪ್ರಾರ್ಥನೆಗೆ ಒಂದು ಆರಾಧನಾ ಸ್ಥಾನ ಅಗತ್ಯ...

ಮೂಕ ಹಕ್ಕಿ ಹಾಡುತಿದೆ ಕಾರ್ಯಕ್ರಮ ಉದ್ಘಾಟನೆ: ಎಲ್ಲಕ್ಕಿಂತ ಆರೋಗ್ಯ ಸಂಪತ್ತು ಮಿಗಿಲಾದದ್ದು- ಸಿ.ಆರ್.ಚಂದ್ರಶೇಖರ್.

Image
  ಮೂಕ ಹಕ್ಕಿ ಹಾಡುತಿದೆ  ಕಾರ್ಯಕ್ರಮ ಉದ್ಘಾಟನೆ : ಎಲ್ಲಕ್ಕಿಂತ ಆರೋಗ್ಯ ಸಂಪತ್ತು ಮಿಗಿಲಾದದ್ದು- ಸಿ.ಆರ್.ಚಂದ್ರಶೇಖರ್.                          ರಾಯಚೂರು,ಜೂ. 16- ಎಲ್ಲ ಸಂಪತ್ತಿಗಿಂತ ಮಿಗಿಲಾದ ಸಂಪತ್ತು ಆರೋಗ್ಯ ಸಂಪತ್ತು ಎಂದು ಪದ್ಮಶ್ರೀ ಪುರಸ್ಕೃತ ಖ್ಯಾತ ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್ ಹೇಳಿದರು. ಅವರಿಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕಲಾ ಸಂಕುಲ ಸಂಸ್ಥೆ ಆಯೋಜಿಸಿದ ಮೂಕ ಹಕ್ಕಿ ಹಾಡುತಿದೆ ಸಂಗೀತ ಕಾರ್ಯಕ್ರಮ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನನಗೆ ಇತ್ತೀಚೆಗೆ ದೇಶದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ ರಾಜ್ಯದ ಜನರ ಆಶೀರ್ವಾದದಿಂದ ಪ್ರಶಸ್ತಿ ಲಭಿಸಿದೆ ಎಂದರು. ನಾನು ಮನೋವೈದ್ಯನಾಗಿದ್ದರಿಂದ ಜನರಿಗೆ ನೀಡುವ ಸಲಹೆ ಏನೆಂದರೆ ಉತ್ತಮ ನಡೆ ನುಡಿ ಆರೋಗ್ಯಕರ ಮನೋರಂಜನೆ ಹಾಗೂ ಒಳ್ಳೆ ವಿಚಾರಗಳಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.   ಪ್ರಾಸ್ತಾವಿಕವಾಗಿ ಕಲಾ ಸಂಕುಲ ಸಂಸ್ಥೆಯ ಮಾರುತಿ ಬಡಿಗೇರ ಮಾತನಾಡಿ ಮೈಸೂರಿನಂತೆ ರಾಯಚೂರು ಸಹ ಸಾಂಸ್ಕೃತಿಕ ನಗರಿ ಎಂದ ಅವರು ಕಲಾ ಸಂಕುಲ ಸಂಸ್ಥೆಯಿಂದ ದೇಶ ವಿದೇಶಗಳಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇವೆಂದ ಅವರು ಜನರಿಗೆ ಮನೋರಂಜನೆ ಜೊತೆಗೆ ಸಾಧಕರಿಗೆ ಉತ್ತೇಜನ ನೀಡುವ ಕಾರ್ಯಕ್ರಮ ಮಾಡುತ್ತಿದ್ದ...

ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮ ಉದ್ಘಾಟನೆ: ಡಿಜಿಟಲ್ ಭರಾಟೆಯಲ್ಲಿ ಗಮಕ ಕಲೆ ನಶಿಸುತ್ತಿದೆ-ಡಾ.ಎ.ವಿ.ಪ್ರಸನ್ನ.

Image
  ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮ ಉದ್ಘಾಟನೆ: ಡಿಜಿಟಲ್ ಭರಾಟೆಯಲ್ಲಿ ಗಮಕ ಕಲೆ ನಶಿಸುತ್ತಿದೆ-ಡಾ.ಎ.ವಿ.ಪ್ರಸನ್ನ.                                                                       ರಾಯಚೂರು,ಜೂ.16- ಡಿಜಿಟಲ್ ಭರಾಟೆಯಲ್ಲಿ ಗಮಕ  ಮುಂತಾದ ಪುರಾತನ ಕಲೆ ಸಂಸ್ಕೃತಿ ನಶಿಸುತ್ತಿದೆ ಎಂದು ರಾಜ್ಯ ಗಮಕ ಕಲೆ ಪರಿಷತ್ತು ರಾಜ್ಯಾಧ್ಯಕ್ಷ ಡಾ.ಎ.ವಿ.ಪ್ರಸನ್ನ ಕಳವಳ ವ್ಯಕ್ತಪಡಿಸಿದರು.                                  ಅವರಿಂದು ನಗರದ ಕರ್ನಾಟಕ ಸಂಘದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಜಿಲ್ಲಾ ಘಟಕ ಆಯೋಜಿಸಿದ ಗಮಕ ಕಾವ್ಯ ವಾಚನ ವ್ಯಾಖ್ಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದಕ್ಷಿಣ ಕರ್ನಾಟಕದಲ್ಲಿ ಪ್ರಚಲಿತವಿರುವ ಗಮಕ ಕಲೆ ಉತ್ತರ ಕರ್ನಾಟಕದಲ್ಲಿ ಇನ್ನೂ ಉಚ್ಛಾಯ ಸ್ಥಿತಿಗೆ ಬರಬೇಕೆಂದು ಆಶಿಸಿದ ಅವರು ಕುಮಾರ ವ್ಯಾಸ, ಲಕ್ಷ್ಮೀಶ, ಪಂಪ ಕವಿಗಳಿಗೆ ಮಾದರಿ ಕವಿಗಳಾಗಿದ್ದಾರೆ. ನಮ್ಮ ನಾಡಿಗೆ ಕವಿಗಳ ಕೊಡುಗೆ ಅಪಾರವಾಗಿದೆ ನಾಡಿಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಮತ್ತು ಒಂದು ...

ನಗರದಲ್ಲಿ ನಾಳೆ ಗಮಕವಾಚನ-ವ್ಯಾಖ್ಯಾನ ಕಾರ್ಯಕ್ರಮ

Image
  ನಗರದಲ್ಲಿ ನಾಳೆ ಗಮಕವಾಚನ-ವ್ಯಾಖ್ಯಾನ ಕಾರ್ಯಕ್ರಮ ರಾಯಚೂರು,ಜೂ.೧೫-ನಗರದ ಕರ್ನಾಟಕ ಸಂಘದಲ್ಲಿ ನಾಳೆ ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು ಹಾಗೂ ಕರ್ನಾಟಕ ಗಮಕ ಕಲಾ ಪರಿಷತ್ತು ರಾಯಚೂರು ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ೨೦೨೪-೨೫ನೇ ಸಾಲಿನ ಗಮಕ ವಾಚನ, ವ್ಯಾಖ್ಯಾನ ಕಾರ್ಯಕ್ರಮಗಳ ಉದ್ಘಾಟನೆಯನ್ನು ಬೆಳಿಗ್ಗೆ ೧೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ಗಮಕ ಕಲಾ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ.ಎ.ವಿ.ಪ್ರಸನ್ನ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ.ಜಯಲಕ್ಷ್ಮಿ ಮಂಗಳಮೂರ್ತಿ ಅಂತಾರಾಷ್ಟ್ರೀಯ ಕ್ಲಾರಿಯೋನೆಟ್ ವಾದಕರಾದ ಪಂ.ಡಾ.ನರಸಿಂಹಲು ವಡವಾಟಿ ಪರಿಷತ್ತಿನ ಕಾರ್ಯದರ್ಶಿಗಳಾದ ಜಿ.ದಕ್ಷಿಣಾಮೂರ್ತಿ, ಕರ್ನಾಟಕ ಸಂಘದ ಕಾರ್ಯದರ್ಶಿ ಮುರಳೀಧರ ಕುಲಕರ್ಣಿ, ಕನ್ನಡ ಸಂಘದ ಅಧ್ಯಕ್ಷ ಪಲಗುಲ ನಾಗರಾಜ, ದಾಸಸಾಹಿತ್ಯ ವಿದ್ವಾಂಸ ಡಾ.ಲಕ್ಷ್ಮೀಕಾಂತ ವಿ.ಮೊಹರೀರ ಆಗಮಿಸಲಿದ್ದಾರೆ. ರಾಯಚೂರು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ವೆಂಕಟರಾವ ಕುಲಕರ್ಣಿ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕುಮಾರ ವ್ಯಾಸ ಕಾವ್ಯ ಭಾಗದ ‘ವಿದುರಾತಿಥ್ಯ’ ಸಂದರ್ಭವನ್ನು ಕುರಿತು ವಿಜಯನಗರ ಜಿಲ್ಲೆಯ ಗಮಕಿ ಪಲ್ಲವಿ ಭಟ್ ಕಾವ್ಯ ವಾಚನ ಮಾಡಲಿದ್ದಾರೆ. ರಾಜ್ಯಾಧ್ಯಕ್ಷ ಡಾ.ಎ.ವಿ. ಪ್ರಸನ್ನ ಅವರು ವ್ಯಾಖ್ಯಾನ ಮಾಡಲಿದ್ದಾರೆ.  ಆಸಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಿ ಸದುಪಯೋಗ ಪಡೆದುಕೊಳ...

371(ಜೆ) ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ: ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಸಹಸ್ರಾರು ಜನರು

Image
  371(ಜೆ) ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ:        ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಸಹಸ್ರಾರು ಜನರು .                                                              ರಾಯಚೂರು,ಜೂ.15- ಕಲ್ಯಾಣ ಕರ್ನಾಟಕಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವ ಅನುಚ್ಛೇದ 371(ಜೆ) ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ಸಹಸ್ರಾರು ಜನರು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿ ಸರ್ಕಾರಕ್ಕೆ ಒತ್ತಾಯಿಸಿದರು.                      371(ಜೆ) ರಕ್ಷಣಾ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಕನ್ನಡ ಪರ ಸಂಘಟನೆಗಳು , ಸೇರಿದಂತೆ ಅನೇಕರು ಬೆಂಬಲ ವ್ಯಕ್ತಪಡಿಸಿ ಸರ್ಕಾರಕ್ಕೆ ಒತ್ತಾಯಿಸಿ ಅಪರ ಜಿಲ್ಲಾಧಿಕಾರಿಗಳ  ಮುಖಾಂತರ ರಾಜ್ಯಪಾಲರು ಮತ್ತು ಸಿಎಂಗೆ ಮನವಿ ಪತ್ರ ಸಲ್ಲಿಸಿದರು. ಬೆಂಗಳೂರಿನ ಹಸಿರು ಪ್ರತಿಷ್ಟಾನ 371ಜೆ ರದ್ದು ಮಾಡುವಂತೆ ಕೋರಿದ್ದನ್ನು ಖಂಡಿಸಲಾಯಿತು ಸರ್ಕಾರ ಶೀಘ್ರ ಒಂದು ಸಮಿತಿ ರಚಿಸಬೇಕು ಮತ್ತು 371ಜೆ ಸ‌ಮಗ್ರ ಮತ್ತು ಸಮರ್ಪಕ ಅನುಷ್...

ದಾಸ ಸಾಹಿತ್ಯವನ್ನು ಬೆಳೆಸಿದ ಮಹನೀಯರು ಶ್ರೀ ಮೋಹನ ದಾಸರು- ಮುರಳಿಧರ ಕುಲಕರ್ಣಿ

Image
ದಾಸ ಸಾಹಿತ್ಯವನ್ನು ಬೆಳೆಸಿದ ಮಹನೀಯರು ಶ್ರೀ ಮೋಹನ ದಾಸರು- ಮುರಳಿಧರ ಕುಲಕರ್ಣಿ   ರಾಯಚೂರು,ಜೂ.14-  ದಾಸ ಶ್ರೇಷ್ಠರಾದ ಶ್ರೀ ವಿಜಯದಾಸರ ನೇರ ಶಿಷ್ಯರಾಗಿ ದಾಸ ಸಾಹಿತ್ಯದ ಪರಂಪರೆಯನ್ನು ಬೆಳೆಸಿದ ಮಹನೀಯರೇ ಮೋಹನದಾಸರು ಎಂದು ಶ್ರುತಿ ಸಾಹಿತ್ಯ ಮೇಳದ ಅದ್ಯಕ್ಷ ಮುರಳಿಧರ ಕುಲಕರ್ಣಿ ಅವರು ಹೇಳಿದರು.   ಅವರು ನಿನ್ನೆ ಸಂಜೆ ನಗರದ ಜವಾಹರ ನಗರ ಬಡಾವಣೆಯಲ್ಲಿರುವ ಶ್ರೀ ಬಯಲು ಆಂಜನೇಯ ದೇವಸ್ಥಾನದಲ್ಲಿ ಹಮ್ಮಿಕೊಂಡ ಶ್ರೀ ಮೋಹನ ದಾಸರ ಪೂರ್ವಾ ರಾಧನೆಯ ಕಾರ್ಯಕ್ರಮದಲ್ಲಿಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.    ಆನೆಗುಂದಿಯಲ್ಲಿದ್ದ ಭೀಮಪ್ಪ ನಾಯಕ ಆಭರಣ ವ್ಯಾಪಾರಿ ಆಗಿದ್ದ ಸಾಕಷ್ಟು ಹಣವನ್ನು ಸಹ ಗಳಿಸಿದ್ದ ಕೆಲವು ಪರಿಸ್ಥಿತಿಗೆ ಅನುಗುಣವಾಗಿ ತುಂಬಾ ನಷ್ಟವನ್ನು ಅನುಭವಿಸಿದನು. ಅತಿಯಾದ ಬಡತನ, ಅವಮಾನ, ಸಂಕಷ್ಟಗಳನ್ನು ತಾಳಲಾರದೆ ಭೀಮಪ್ಪ ನಾಯಕನ ಪತ್ನಿ  ತನ್ನ ಅನಾರೋಗ್ಯ ಪೀಡಿತ ಮಗುವಿನೊಡನೆ ಹಂಪಿಯ ಬಳಿ ಇರುವ ಚಕ್ರತೀರ್ಥ ದಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಳ್ಳವ ಸಂದರ್ಭದಲ್ಲಿ ಅಲ್ಲೇ ಧ್ಯಾನಕ್ಕೆ ಕುಳಿತಿದ್ದ ಶ್ರೀ ವಿಜಯದಾಸರು ಇದನ್ನು ನೋಡಿ ತಾಯಿಗೆ ಬುದ್ಧಿವಾದವನ್ನು ಹೇಳಿ ಅವರನ್ನು ರಕ್ಷಿಸಿದರು. ನಂತರ ಅವರ ಪರಿಸ್ಥಿತಿಯನ್ನು ಅರಿತು ಅನಾರೋಗ್ಯ ಪೀಡಿತ ಮಗುವನ್ನು ಅಲ್ಲೇ ದತ್ತಕ್ಕೆ ತೆಗೆದುಕೊಂಡು,ಆ ತಾಯಿಯನ್ನು ತಂಗಿಯಾಗಿ ಸ್ವೀಕಾರ ಮಾಡಿದರು.   ನಂತರ ಮಗುವನ್ನು ಸಂಸ್ಕಾರವಂತರ...

ಯುವ ಪೀಳಿಗೆ ಸಂಸ್ಕಾರಯುತರಾಗಲಿ- ಶ್ರೀ ವಿಶ್ವಪ್ರಸನ್ನ ತೀರ್ಥರು

Image
  ಯುವ ಪೀಳಿಗೆ ಸಂಸ್ಕಾರಯುತರಾಗಲಿ- ಶ್ರೀ ವಿಶ್ವಪ್ರಸನ್ನ ತೀರ್ಥರು.                                         ರಾಯಚೂರು,ಜೂ.13- ದೇಶದ ಯುವ ಪೀಳಿಗೆ ಸಂಸ್ಕಾರಯುತರಾಗಲಿ ಎಂದು ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರು ಹೇಳಿದರು. ಅವರಿಂದು ನಗರದ ಕಾಡ್ಲೂರು ದೇಸಾಯಿ ನಿವಾಸದಲ್ಲಿ ಪಾದಪೂಜೆ ಸ್ವೀಕರಿಸಿದ ನಂತರ ಅವರ ನಿವಾಸದ ಆವರಣದಲ್ಲಿರುವ ಕಿರು ಗ್ರಂಥಾಲಯ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.     ಇಲ್ಲಿರುವ ಪುಸ್ತಕಗಳು ಅನೇಕ ಪುಣ್ಯ ಪುರುಷರು, ದಾರ್ಶನೀಕರು, ಸ್ವಾತಂತ್ರ್ಯ ಹೋರಾಟಗಾರರು ಇನ್ನು ಅನೇಕ ಸಾಧಕರ ಪುಸ್ತಕಗಳಿವೆ ಅವುಗಳನ್ನು ಮಕ್ಕಳು ಓದಿ ಸಂಸ್ಕಾರಯುತರಾಗಿ ದೇಶವನ್ನು ಸದೃಡ ರಾಷ್ಟ್ರವನ್ನಾಗಿಸಲಿ ಎಂದರು.     ಈ ಸಂದರ್ಭದಲ್ಲಿ ಜಯ ಕುಮಾರ್ ದೇಸಾಯಿ, ವಿಜಯ ಕುಮಾರ್ ದೇಸಾಯಿ, ಪ್ರಸನ್ನ ಆಲಂಪಲ್ಲಿ, ಸಮೀರಾಚಾರ್, ರಂಗಾಚಾರ್ ಜೋಷಿ,ಪವನ್ ಆಚಾರ್,ರಾಮು, ಸುವರ್ಣಾ ಬಾಯಿ ದೇಸಾಯಿ,ಬಿಂದು, ಮಾಧವಿ ಇನ್ನಿತರರು ಇದ್ದರು.