Posts

Image
  ದುಬೈ ಕನ್ನಡಿಗರು ಹೃದಯವಂತರು-ಶ್ರೀದೇವಿ ನಾಯಕ   ಜಯ ಧ್ವಜ ನ್ಯೂಸ್ , ರಾಯಚೂರು,ಜು .28-   ಹೊರನಾಡಿನಲ್ಲಿ ಜೀವಿಸುತ್ತಿರುವ ಕನ್ನಡಿಗರು ಅದರಲ್ಲೂ ದುಬೈ ಅಂತಹ ಶ್ರೀಮಂತ ರಾಷ್ಟ್ರದಲ್ಲಿ ಇರುವಂತ ಕನ್ನಡಿಗರು ನಿಜಕ್ಕೂ ಹೃದಯವಂತರು . ಇಲ್ಲಿ ಜಾತಿ ಧರ್ಮವಿಲ್ಲ ನಾವೆಲ್ಲರೂ ಕನ್ನಡಿಗರೆಂದು ಬಾಳುತ್ತಿರುವುದು  ಹೆಮ್ಮೆಯ ವಿಷಯ ಎಂದು ವಿಶ್ವಕನ್ನಡ ಸಮ್ಮೇಳನ ದುಬೈದ ಸಮ್ಮೇಳನ ಅಧ್ಯಕ್ಷರಾದ ಶ್ರೀದೇವಿ ಆರ್. ವಿ. ನಾಯಕ ಮಾತನಾಡಿದರು.  ಅವರು ದುಬೈಯಲ್ಲಿ ಕನ್ನಡ ಸಾಂಸ್ಕೃತಿಕ ಸಂಘಟನಾ ಸಂಸ್ಥೆ ಹಾಗೂ ಕಲಾ ಸಂಕುಲ ಸಂಸ್ಥೆಯ ರಾಯಚೂರು ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಕನ್ನಡ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷರಾಗಿ ರಾಯಚೂರು ಜಿಲ್ಲೆಯ ಶ್ರೀದೇವಿ ಆರ್ ವಿ ನಾಯಕ್ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿಸಿದರು.  ಅಬುದಾಬಿಯ ಡಾ. ಐಶ್ವರ್ಯ ಅದ್ಭುತವಾಗಿ ಭರತನಾಟ್ಯವನ್ನು ಪ್ರದರ್ಶನ ಮಾಡಿದರು. ಖ್ಯಾತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಿ ಅಶ್ವತ್ ಗೀತೆಗಳನ್ನು ಅದ್ಭುತವಾಗಿ ಹಾಡಿದರು. ಬೆಂಗಳೂರಿನ ನಾಟಕಕಾರ ತಂಡ ಸಾಕ್ಷಿಕಲ್ಲು ನಾಟಕವನ್ನು ಈ ಸಮ್ಮೇಳನದಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದರು. ಕವಿಗೋಷ್ಠಿಯಲ್ಲಿ ಹೊರನಾಡ ಕನ್ನಡಿಗರು ಭಾಗವಹಿಸಿದ್ದರು ಮತ್ತು ಕೊಟ್ರೇಶಿ ಕೂಡ್ಲಿಗಿ ಇವರಿಂದ ಹಾಸ್ಯಸಂಜೆ ತುಂಬಾ ಚೆನ್ನಾಗಿ ನೆರವೇರಿತು.  ಒಂಬತ್ತು ಜನ ಸಾಧಕರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಲಾಯಿತು. ...
Image
  ಯುವಜನತೆಯಲ್ಲಿ ಹಸಿರು ಇಂಧನದ ಜಾಗೃತಿಗಾಗಿ ಮನೆಯಲ್ಲೇ ಸೋಲರ್ ಚಾಲಿತ ಕಿರು ಚಲನಚಿತ್ರ ಮಂದಿರ ನಿರ್ಮಿಸಿದ ಅಧ್ಯಾಪಕ ಜಯ ಧ್ವಜ ನ್ಯೂಸ್ , ರಾಯಚೂರು, ಜು.26- ಯುವಜನತೆಯಲ್ಲಿ ನವೀಕರಿಸಬಹುದಾದ ಇಂಧನ ಹಾಗೂ ಸೋಲಾರ್ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪತ್ರಕರ್ತ ಹಾಗೂ ಪತ್ರಿಕೋದ್ಯಮ ಅಧ್ಯಾಪಕರೂ ಆದ ಪಟ್ಟಣದ ನಿವಾಸಿ ವಿಜಯ್ ಸರೋದೆ ಅವರು ಸೋಲಾರ್ ಚಾಲಿತ ಗೃಹ ಬಳಕೆಯ ಚಲನಚಿತ್ರ ಮಂದಿರವೊಂದನ್ನು (ಸೋಲಾರ್ ಪವರ್ಡ್ ಹೋಮ್ ಥಿಯೇಟರ್ ಸಿಸ್ಟಮ್) ನಿರ್ಮಿಸಿದ್ದಾರೆ. ಇತ್ತೀಚಿಗೆ ಮನೆಯಲ್ಲಿಯೇ ಸಿನೆಮಾ ಥಿಯೇಟರ್ ನಿರ್ಮಿಸುವ ಪ್ರವೃತ್ತಿ ಹೆಚ್ಚಾಗಿದ್ದು, ಅದಕ್ಕಾಗಿ ಜನ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ. ಆದರೆ ಅದೇ ಒಂದು ದುಬಾರಿ ಮೊಬೈಲ್ ಖರೀದಿಸುವ ಹಣದಲ್ಲಿ ಇಡೀ ಕುಟುಂಬದವರು ಕುಳಿತುಕೊಂಡು ಮನರಂಜನೆ ಪಡೆಯುವ ರೀತಿಯಲ್ಲಿ ಹಸಿರು ಇಂಧನವಾದ ಸೋಲಾರ್ ಚಾಲಿತ ಗೃಹ ಚಲನಚಿತ್ರ ಮಂದಿರವನ್ನು ನಿರ್ಮಿಸಲು ಸಾಧ್ಯವಿದೆ‌ ಎಂದು ಅವರು ತಿಳಿಸುತ್ತಾರೆ. ಗ್ರೀನ್ ರಾಯಚೂರು ಸಂಸ್ಥೆಯ ಮಾಧ್ಯಮ ಸಲಹೆಗಾರರು ಹಾಗೂ ಸ್ವಯಂಸೇವಕ‌ರಾಗಿರುವ ವಿಜಯ್ ಸರೋದೆ ಅವರು ಕಳೆದ ಐದು ವರ್ಷಗಳ ಹಿಂದೆಯೇ ಸಂಪೂರ್ಣವಾಗಿ ತಮ್ಮ ಮನೆಯನ್ನು ಸೋಲಾರ್ ವಿದ್ಯುತ್ ಮೇಲೆ ನಡೆಯುವಂತೆ ಪರಿವರ್ತನೆ ಮಾಡಿಕೊಂಡಿದ್ದು, ಬಿಸಿನೀರಿಗಾಗಿ ಸೋಲಾರ್ ವಾಟರ್ ಹೀಟರ್ ಅಳವಡಿಸಿಕೊಳ್ಳುವ ಜೊತೆಗೆ ಸೋಲಾರ್ ವಿದ್ಯುತ್ ಮೂಲಕವೇ ಚಾರ್ಜ್ ಆಗುವ ಎಲೆಕ್ಟ್ರಿಕ್ ವಾಹನ ಬಳಸುವ ಮೂಲಕ...
Image
  ಸಂಗೀತವು ಮಕ್ಕಳ ಬುದ್ಧಿವಂತಿಕೆ, ಸೃಜನಶೀಲತೆ, ಶಿಸ್ತು, ಆತ್ಮವಿಶ್ವಾಸ ಮತ್ತು ಸಂಸ್ಕಾರಗಳನ್ನು ಬೆಳೆಸುವ ಶಕ್ತಿಶಾಲಿ ಶಿಕ್ಷಣ ಸಾಧನವಾಗಿದೆ- ಶ್ರೀನಿವಾಸ್ ರಾವ್ ಪತಂಗೆ  ಜಯ ಧ್ವಜ ನ್ಯೂಸ್ , ರಾಯಚೂರು,ಜು.26- ಜನನಿ ಕಲಾ ಮತ್ತು ಸಾಂಸ್ಕೃತಿಕ ಯುವ ಬಳಗ (ರಿ). ಯಾಕ್ಲಾಸಪುರ ರಾಯಚೂರು ವತಿಯಿಂದ ಕಲಾ ಸಿರಿ ಎಂಬ ಸಾಂಸ್ಕೃತಿಕ ಕಾರ್ಯಕ್ರಮವು ನಗರದ ವಿಠ್ಠಲ ರುಕ್ಮಿಣಿ ದೇವಸ್ಥಾನದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ತಬಲಾ ಬಾರಿಸುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ಭಾವಸಾರ ಕ್ಷತ್ರಿಯ ಸಮಾಜದ ಗೌರವ ಅಧ್ಯಕ್ಷರಾದ   ಶ್ರೀನಿವಾಸ್ ರಾವ್ ಪತಂಗೆ. ಅವರು ಸಂಗೀತವು ಮಕ್ಕಳ ಬುದ್ಧಿವಂತಿಕೆ, ಸೃಜನಶೀಲತೆ, ಶಿಸ್ತು, ಆತ್ಮವಿಶ್ವಾಸ ಮತ್ತು ಸಂಸ್ಕಾರಗಳನ್ನು ಬೆಳೆಸುವ ಶಕ್ತಿಶಾಲಿ ಶಿಕ್ಷಣ ಸಾಧನವಾಗಿದೆ ಎಂದರು. ಆದ್ದರಿಂದ ಪ್ರತಿಯೊಂದು ಮಗುವಿಗೂ ಸಂಗೀತ ಶಿಕ್ಷಣದ ಅವಕಾಶ ದೊರೆಯಬೇಕು. ಸಂಗೀತ ಕಲಿಯುವ ಮಕ್ಕಳು ಹೆಚ್ಚು ಏಕಾಗ್ರತೆಯಿಂದ ಓದುತ್ತಾರೆ. ಪಾಠಗಳನ್ನು ನೆನಪಿಡುವ ಸಾಮರ್ಥ್ಯ (ಸ್ಮರಣಶಕ್ತಿ) ಹೆಚ್ಚಾಗುತ್ತದೆ. ಭಾಷಾ ಕೌಶಲ್ಯ, ಶ್ರವಣ ಸಾಮರ್ಥ್ಯ ಮತ್ತು ಗ್ರಹಣಶಕ್ತಿ ವೃದ್ಧಿಯಾಗುತ್ತದೆ." ಎಂದರು ಹಾಗೂ ಅಧ್ಯಕ್ಷತೆಯನ್ನುವಹಿಸಿದ  ಸೂರ್ಯನಾರಾಯಣರಾವ್ ಪೀಸೆ. ಅಧ್ಯಕ್ಷರು ಭಾವಸಾರ ಕ್ಷತ್ರಿಯ ಸಮಾಜ. ಸಂಗೀತದ ಮೂಲಕ ಮಕ್ಕಳಿಗೆ ತಮ್ಮ ಭಾಷೆ, ಸಂಸ್ಕೃತಿ, ಜನಪದ ಪರಂಪರೆ ಮತ್ತು ಮೌಲ್ಯಗಳ ಪರಿಚಯವಾಗುತ...
Image
ಸಂಸದ ಗೋವಿಂದ ಕಾರಜೋಳ ಬಗ್ಗೆ ಅವಹೇಳನಕಾರಿ ಪೋಸ್ಟರ್ ಕ್ರಮಕ್ಕೆ ರವೀಂದ್ರ ಜಲ್ದಾರ್ ಪೊಲೀಸರಿಗೆ ಒತ್ತಾಯ   ಜಯ ಧ್ವಜ ನ್ಯೂಸ್, ರಾಯಚೂರು,ಜು.25- ಸಾಮಾಜಿಕ ಜಾಲತಾಣಗಳಲ್ಲಿ  ಚಿತ್ರದುರ್ಗ ಸಂಸದರ  ವಿರುದ್ಧ ಹಾಗೂ ಬಿಜೆಪಿ ಪಕ್ಷದ ಬಗ್ಗೆ ಅವಹೇಳನಕಾರಿ , ಮಾನಹಾನಿಕರ ಹಾಗೂ ಸಾರ್ವಜನಿಕ ಶಾಂತಿ ಕದಡುವ ಉದ್ದೇಶದ ಪೋಸ್ಟ್ ಗಳನ್ನು ಪ್ರಕಟಿಸಿರುವ ಪಾವಗಡ ಮೂಲದ ಶ್ರೀನಿವಾಸ್ ಬಾಬು ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ರವೀಂದ್ರ ಜಲ್ದಾರ್  ಮನವಿ ಪತ್ರಿ ಸಲ್ಲಿಸಿದರು.   ಪಾವಗಡ ತಾಲ್ಲೂಕಿನ ಶ್ರೀನಿವಾಸ್ ಬಾಬು ಎಂಬ ವ್ಯಕ್ತಿಯು , ಚಿತ್ರದುರ್ಗ ಲೊಕಸಭಾ ಸಂಸದರಾದ ಶ್ರೀ ಗೋವಿಂದ್ ಕಾರಜೋಳ ಅವರ ವಿರುದ್ಧ ನಿರಂತರವಾಗಿ ಅವಹೇಳನಕಾರಿ , ಮಾನಹಾನಿಕರ ಹಾಗೂ ಗೌರವಕ್ಕೆ ದಕ್ಕೆ ತರುವ ರೀತಿಯ ಪೋಸ್ಟ್ ಗಳನ್ನು ಪ್ರಕಟಿಸುತ್ತಿದ್ದಾರೆಂದು ದೂರಿದ ಅವರು ದೇಶದ ಪ್ರಮುಖ ರಾಷ್ಟ್ರೀಯ ಪಕ್ಷವಾದ ಭಾರತೀಯ ಜನತಾ ಪಕ್ಷವನ್ನು ಉದ್ದೇಶಪೂರ್ವಕವಾಗಿ "ಬ್ಲೂ ಜೆಪಿ" ಎಂಬ ಅವಹೇಳನಕಾರಿ ಪದ ಮತ್ತು ನಮ್ಮ ಪಕ್ಷದ ಕಾರ್ಯಕರ್ತರನ್ನು "ದಲ್ಲಾಳಿಗಳು" ಎಂಬ ಪದಗಳನ್ನು ಬಳಸಿ ನಿಂದಿಸುತಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರ ಭಾವನೆಗಳಿಗೆ ದಕ್ಕೆ  ಉಂಟಾಗುತ್ತಿದೆ ಇಂತಹ ಪೋಸ್ಟ್ಗಳು ಸಾರ್ವಜನಿಕರಲ್ಲಿ ದ್ವೇಷ, ವೈಮನಸ್ಸು ಮತ್ತು ಉದಿಗ್ನತೆ ಉಂಟು ಮಾಡುವ ಸಾಧ್ಯತೆ ಇದ್ದು , ಕಾನೂನು ಮತ್ತು ಸುವ್ಯವಸ್ಥೆಗೆ ದಕ್ಕೆ ತರುವಂತಿ...
Image
  ಜು.28ರಂದು ರಂದು ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಮತ್ತು  ಜೀವಮಾನ ಸಾಧನೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ - ಗುರುನಾಥ ಜಯ‌ ಧ್ವಜ ನ್ಯೂಸ್ ,ರಾಯಚೂರು,ಜು.25- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಾಯಚೂರು ರಿಪೋಟರ‍್ಸ್ ಗಿಲ್ಡ್ ಮತ್ತು ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಜು.28 ರಂದು ಬೆಳಗ್ಗೆ 10.30  ಗಂಟೆಗೆ ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ ತಿಳಿಸಿದರು. ಅವರಿಂದು ನಗರದ ಪತ್ರಿಕಾ ಭವನದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾರಂಭವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಉದ್ಘಾಟಿಸುವರು. ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಪ್ರಶಸ್ತಿ ಪ್ರದಾನ ಮಾಡುವರು. ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಆಶಯ ನುಡಿಗಳನ್ನಾಡುವರು. ಸಂಸದ ಜಿ.ಕುಮಾರ ನಾಯಕ, ಶಾಸಕರಾದ ಹಂಪನಗೌಡ ಬಾದರ್ಲಿ, ಡಾ.ಶಿವರಾಜ್ ಪಾಟೀಲ್, ಬಸನಗೌಡ ದದ್ದಲ್, ಮಾನಪ್ಪ ವಜ್ಜಲ್, ಕರೆಮ್ಮ ನಾಯಕ, ಹಂಪಯ್ಯ ನಾಯಕ, ಬಸನಗೌಡ ತುರ್ವಿಹಾಳ, ವಿಧಾನ ಪರಿಷತ್ ಸದಸ್ಯರಾದ ಎ.ವಸಂತಕುಮಾರ್, ಬಸನಗೌಡ ಬಾದರ್ಲಿ, ಶರಣಗೌಡ ಬಯ್ಯಾಪುರ, ಜಿಲ್ಲಾಧಿಕಾರಿ ಪೂವಿತಾ ಎಸ್, ಎಸ್‌ಪಿ ಅರುಣಾಂಗ್ಷು ಗಿರಿ, ಜಿಪಂ ಸಿಇಒ ಈಶ್ವರ...
Image
  ಕೆಪಿಎಮ್‌ಇ ಕಾಯ್ದೆ ಅನುಷ್ಠಾನ ಸಮಿತಿ ಸಭೆ: ನಕಲಿ ವೈದ್ಯರು, ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಿ- ಜಿಲ್ಲಾಧಿಕಾರಿ ಪೂವಿತಾ ಎಸ್. ಜಯ ಧ್ವಜ ನ್ಯೂಸ್  ,ರಾಯಚೂರು ಜು. 24- ಜಿಲ್ಲೆಯಲ್ಲಿ ಕೆಪಿಎಮ್‌ಇ ಕಾಯ್ದೆಯಡಿ ನೋಂದಾಯಿಸದ ಅಥವಾ ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ನಕಲಿ ವೈದ್ಯರು, ಆಸ್ಪತ್ರೆಗಳು ಮತ್ತು ವ್ಯಸನ ಮುಕ್ತಿ ಕೇಂದ್ರಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್. ಅವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರಿಂದು  ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಕೆಪಿಎಮ್‌ಇ ಕಾಯ್ದೆ ಅನುಷ್ಠಾನ ಹಾಗೂ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಯಚೂರು ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪರವಾನಗಿ ಇಲ್ಲದ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿ, ನಕಲಿ ವೈದ್ಯರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ವೈದ್ಯರಲ್ಲದವರು ಅನಧಿಕೃತವಾಗಿ ವೈದ್ಯ ವೃತ್ತಿಯನ್ನು ಮಾಡುತ್ತಿರುವ ನಕಲಿ ವೈದ್ಯರ ಮಾಹಿತಿ ಪಡೆಯಬೇಕು. ವೈದ್ಯ ಪದವಿ ಪಡೆಯದೆ ಜನರ ಜೀವಕ್ಕೆ ತೊಂದರೆಯುಂಟು ಮಾಡುವುದನ್ನು ತಡೆಯಲು ಎಲ್ಲ ನಕಲಿ ವೈದ್ಯರನ್ನು ಗುರ್ತಿಸಿ ನಿರ್ದಾಕ್ಷಿಣ್ಯವಾಗಿ ಕಾನೂನಾತ್ಮಕವಾಗಿ ಹಾಗೂ ಕೆಪಿಎಮ್‌ಇ ಕಾಯ್ದೆ-2007ರ ಅಡಿ ಕ್ರಮ ಜರುಗಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು....
Image
  ಓಪೆಕ್ ಆಸ್ಪತ್ರೆಗೆ ಜಿಲ್ಲಾಧಿಕಾರಿಗಳ ಭೇಟಿ ವಿವಿಧ ವಿಭಾಗಗಳ ಪರಿಶೀಲನೆ ಜಯ ಧ್ವಜ ನ್ಯೂಸ್ , ರಾಯಚೂರು ,ಜು.23- ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ಇಂದು  ನಗರದಲ್ಲಿರುವ ಓಪೆ ಕ್ ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ವಿಭಾಗಗಳ ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ವಿವಿಧ ವಿಭಾಗಗಳಾದ ಕಾರ್ಡಿಯಾಲಜಿ. ಕಿಮೋ ಥೆರಫಿ. ಡಯಾಲಿಸಸ್ ಕ್ಯಾಥಲ್ಯಾಬ್ ಸ್ಕ್ಯಾನಿಂಗ್ ಸೆಂಟರ್, ಟ್ರಾಮಾ ಕೇರ್ ಸೇರಿದಂತೆ ಇತರೆ ವಿ‌ಭಾಗಗಳ ಪರಿಶೀಲನೆ ನಡೆಸಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಬೇಕು ಮತ್ತು ಆಸ್ಪತ್ರೆಗೆ ಅವಶ್ಯಕತೆ ಇರುವ ಉಪಕರಣಗಳ ಪಟ್ಟಿ ನೀಡುವಂತೆ ಆಸ್ಪತ್ರೆಯ ನಿರ್ದೇಶಕರಿಗೆ  ಸೂಚಿಸಿದರು.  ಓಫೆಕ್ ಆಸ್ಪತ್ರೆಗೆ ಬಂದ ರೋಗಿಗಳ ಆರೋಗ್ಯ ವಿಚಾರಿಸಿದ ಅವರು ಚಿಕಿತ್ಸೆ ಹೇಗೆ ನೀಡುತ್ತಿದ್ದಾರೆ ಎಂದು ಅವರಿಂದ ಮಾಹಿತಿ ಪಡೆದು ಆಸ್ಪತ್ರೆಯಲ್ಲಿ ಸ್ವಚ್ಚತೆ ಕಾಪಾಡುವಂತೆಯು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಓಫೆಕ್ ಆಸ್ಪತ್ರೆಯ ನಿರ್ದೇಶಕರಾದ ರಮೇಶ್ ಸೇರಿದಂತೆ ಆಸ್ಪತ್ರೆಯ ಇತರೆ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.