ಸಂಗೀತವು ಮಕ್ಕಳ ಬುದ್ಧಿವಂತಿಕೆ, ಸೃಜನಶೀಲತೆ, ಶಿಸ್ತು, ಆತ್ಮವಿಶ್ವಾಸ ಮತ್ತು ಸಂಸ್ಕಾರಗಳನ್ನು ಬೆಳೆಸುವ ಶಕ್ತಿಶಾಲಿ ಶಿಕ್ಷಣ ಸಾಧನವಾಗಿದೆ-
ಶ್ರೀನಿವಾಸ್ ರಾವ್ ಪತಂಗೆ 

ಜಯ ಧ್ವಜ ನ್ಯೂಸ್ , ರಾಯಚೂರು,ಜು.26- ಜನನಿ ಕಲಾ ಮತ್ತು ಸಾಂಸ್ಕೃತಿಕ ಯುವ ಬಳಗ (ರಿ). ಯಾಕ್ಲಾಸಪುರ ರಾಯಚೂರು ವತಿಯಿಂದ ಕಲಾ ಸಿರಿ ಎಂಬ ಸಾಂಸ್ಕೃತಿಕ ಕಾರ್ಯಕ್ರಮವು ನಗರದ ವಿಠ್ಠಲ ರುಕ್ಮಿಣಿ ದೇವಸ್ಥಾನದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ತಬಲಾ ಬಾರಿಸುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ಭಾವಸಾರ ಕ್ಷತ್ರಿಯ ಸಮಾಜದ ಗೌರವ ಅಧ್ಯಕ್ಷರಾದ   ಶ್ರೀನಿವಾಸ್ ರಾವ್ ಪತಂಗೆ. ಅವರು ಸಂಗೀತವು ಮಕ್ಕಳ ಬುದ್ಧಿವಂತಿಕೆ, ಸೃಜನಶೀಲತೆ, ಶಿಸ್ತು, ಆತ್ಮವಿಶ್ವಾಸ ಮತ್ತು ಸಂಸ್ಕಾರಗಳನ್ನು ಬೆಳೆಸುವ ಶಕ್ತಿಶಾಲಿ ಶಿಕ್ಷಣ ಸಾಧನವಾಗಿದೆ ಎಂದರು.


ಆದ್ದರಿಂದ ಪ್ರತಿಯೊಂದು ಮಗುವಿಗೂ ಸಂಗೀತ ಶಿಕ್ಷಣದ ಅವಕಾಶ ದೊರೆಯಬೇಕು. ಸಂಗೀತ ಕಲಿಯುವ ಮಕ್ಕಳು ಹೆಚ್ಚು ಏಕಾಗ್ರತೆಯಿಂದ ಓದುತ್ತಾರೆ.
ಪಾಠಗಳನ್ನು ನೆನಪಿಡುವ ಸಾಮರ್ಥ್ಯ (ಸ್ಮರಣಶಕ್ತಿ) ಹೆಚ್ಚಾಗುತ್ತದೆ.
ಭಾಷಾ ಕೌಶಲ್ಯ, ಶ್ರವಣ ಸಾಮರ್ಥ್ಯ ಮತ್ತು ಗ್ರಹಣಶಕ್ತಿ ವೃದ್ಧಿಯಾಗುತ್ತದೆ." ಎಂದರು ಹಾಗೂ ಅಧ್ಯಕ್ಷತೆಯನ್ನುವಹಿಸಿದ  ಸೂರ್ಯನಾರಾಯಣರಾವ್ ಪೀಸೆ. ಅಧ್ಯಕ್ಷರು ಭಾವಸಾರ ಕ್ಷತ್ರಿಯ ಸಮಾಜ. ಸಂಗೀತದ ಮೂಲಕ ಮಕ್ಕಳಿಗೆ ತಮ್ಮ ಭಾಷೆ, ಸಂಸ್ಕೃತಿ, ಜನಪದ ಪರಂಪರೆ ಮತ್ತು ಮೌಲ್ಯಗಳ ಪರಿಚಯವಾಗುತ್ತದೆ. ಇದರಿಂದ ತಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆ ಮೂಡುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಅಶೋಕ್ ಮಹೇಂದ್ರಕರ್ ಸಂಗೀತವು ಕೇವಲ ಮನರಂಜನೆಯ ಕಲೆ ಮಾತ್ರವಲ್ಲ; ಅದು ಮಕ್ಕಳ ಬೌದ್ಧಿಕ, ಭಾವನಾತ್ಮಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ಮಹತ್ವದ ಸಾಧನವಾಗಿದೆ.

ಆದ್ದರಿಂದ ಪ್ರತಿಯೊಬ್ಬ ಮಗುವಿಗೂ ಸಂಗೀತ ಶಿಕ್ಷಣ ದೊರಕಬೇಕು ಎಂದು ಹೇಳಿದರು .ಹಳ ಅತಿಥಿಗಳಾಗಿ ಶ್ರೀ ಹೇಮಂತ್ ಉತ್ತರ ಕರ್. ನಾಗರಾಜ್ ಟಿಕಾರೆ. ವೀರಕಾಂತ್ ನವಳೆ. ಘನ ಶಾಮ್ ಪತಂಗೆ ಹಾಗೂ ನಗರದ ಸಮಸ್ತ ಭಾವಸಾರ ಕ್ಷತ್ರಿಯ ಸಮಾಜದವರು ಭಾಗವಹಿಸಿದ್ದರು . ಸಂಗೀತ ಕಲಾವಿದರಿಂದ ಗಾಯನ ಕಾರ್ಯಕ್ರಮ ನೆರವೇರಿತು.

Comments

Popular posts from this blog