ದುಬೈ ಕನ್ನಡಿಗರು ಹೃದಯವಂತರು-ಶ್ರೀದೇವಿ ನಾಯಕ

 ಜಯ ಧ್ವಜ ನ್ಯೂಸ್ , ರಾಯಚೂರು,ಜು .28-

 ಹೊರನಾಡಿನಲ್ಲಿ ಜೀವಿಸುತ್ತಿರುವ ಕನ್ನಡಿಗರು ಅದರಲ್ಲೂ ದುಬೈ ಅಂತಹ ಶ್ರೀಮಂತ ರಾಷ್ಟ್ರದಲ್ಲಿ ಇರುವಂತ ಕನ್ನಡಿಗರು ನಿಜಕ್ಕೂ ಹೃದಯವಂತರು . ಇಲ್ಲಿ ಜಾತಿ ಧರ್ಮವಿಲ್ಲ ನಾವೆಲ್ಲರೂ ಕನ್ನಡಿಗರೆಂದು ಬಾಳುತ್ತಿರುವುದು  ಹೆಮ್ಮೆಯ ವಿಷಯ ಎಂದು ವಿಶ್ವಕನ್ನಡ ಸಮ್ಮೇಳನ ದುಬೈದ ಸಮ್ಮೇಳನ ಅಧ್ಯಕ್ಷರಾದ ಶ್ರೀದೇವಿ ಆರ್. ವಿ. ನಾಯಕ ಮಾತನಾಡಿದರು.

 ಅವರು ದುಬೈಯಲ್ಲಿ ಕನ್ನಡ ಸಾಂಸ್ಕೃತಿಕ ಸಂಘಟನಾ ಸಂಸ್ಥೆ ಹಾಗೂ ಕಲಾ ಸಂಕುಲ ಸಂಸ್ಥೆಯ ರಾಯಚೂರು ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಕನ್ನಡ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷರಾಗಿ ರಾಯಚೂರು ಜಿಲ್ಲೆಯ ಶ್ರೀದೇವಿ ಆರ್ ವಿ ನಾಯಕ್ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿಸಿದರು.

 ಅಬುದಾಬಿಯ ಡಾ. ಐಶ್ವರ್ಯ ಅದ್ಭುತವಾಗಿ ಭರತನಾಟ್ಯವನ್ನು ಪ್ರದರ್ಶನ ಮಾಡಿದರು. ಖ್ಯಾತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಿ ಅಶ್ವತ್ ಗೀತೆಗಳನ್ನು ಅದ್ಭುತವಾಗಿ ಹಾಡಿದರು. ಬೆಂಗಳೂರಿನ ನಾಟಕಕಾರ ತಂಡ ಸಾಕ್ಷಿಕಲ್ಲು ನಾಟಕವನ್ನು ಈ ಸಮ್ಮೇಳನದಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದರು. ಕವಿಗೋಷ್ಠಿಯಲ್ಲಿ ಹೊರನಾಡ ಕನ್ನಡಿಗರು ಭಾಗವಹಿಸಿದ್ದರು ಮತ್ತು ಕೊಟ್ರೇಶಿ ಕೂಡ್ಲಿಗಿ ಇವರಿಂದ ಹಾಸ್ಯಸಂಜೆ ತುಂಬಾ ಚೆನ್ನಾಗಿ ನೆರವೇರಿತು.

 ಒಂಬತ್ತು ಜನ ಸಾಧಕರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಲಾಯಿತು.

 ಈ ಸಮ್ಮೇಳನದ ಉದ್ಘಾಟನೆಯನ್ನು ದುಬೈ ಖ್ಯಾತ ಉದ್ಯಮಿ ಡಾ. ಶೇಕ್ ಅಬ್ದುಲ್ಲಾ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ ನಾಗರಾಜ್ ಮತ್ತು ಅಬುದಾಬಿ ಕನ್ನಡ ಸಂಘದ ಅಧ್ಯಕ್ಷ ಸರ್ವೋತ್ತಮಶೆಟ್ಟಿ. ದುಬೈ ಕನ್ನಡಿಗರ ಒಕ್ಕೂಟ ಅಧ್ಯಕ್ಷರು ಅರುಣ್ ಕುಮಾರ್. ಇಂಡಿಯನ್ ಕಲ್ಚರಲ್ ಸೊಸೈಟಿ ಅಧ್ಯಕ್ಷರು ಭಾಗವಹಿಸಿದ್ದರು.

 ಕನ್ನಡ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷರಾದ ಶೋಧನಾ ಅತಾವರ್, ಕಲಾ ಸಂಕುಲ ಸಂಸ್ಥೆಯ ಕಾರ್ಯದರ್ಶಿ ಮಾರುತಿ ಬಡಿಗೇರ್ ಮತ್ತು ಹೃದಯವಾಹಿನಿ ಪತ್ರಿಕೆ ಸಂಪಾದಕರಾದ ಮಂಜುನಾಥ ಸಾಗರ ಹಾಗೂ ರಾಯಚೂರಿನ ಉದ್ಯಮಿ ಈ. ಆಂಜನೇಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

Comments

Popular posts from this blog