ಮಂತ್ರಾಲಯದಲ್ಲಿ ಜು.17,18, 19 ಶ್ರೀ ಜಯತೀರ್ಥರ (ಟೀಕಾರಾಯರ) ಆರಾಧನೆ- ಆರ್ ಕೆ ವಾದೀಂದ್ರಾಚಾರ್ಯ
ಮಂತ್ರಾಲಯದಲ್ಲಿ ಜು.17,18, 19 ಶ್ರೀ ಜಯತೀರ್ಥರ (ಟೀಕಾರಾಯರ) ಆರಾಧನೆ- ಆರ್ ಕೆ ವಾದೀಂದ್ರಾಚಾರ್ಯ .
ರಾಯಚೂರು,ಜು.15- ಮಾನ್ಯ ಉಚ್ಚ ನ್ಯಾಯಾಲಯ ಧಾರವಾಡ ಪೀಠವು ಜಿಲ್ಲಾಧಿಕಾರಿಗಳ ಆದೇಶಕ್ಕೆ ತಡೆ ನೀಡದೆ ಸೂಕ್ತಪ್ರಾಧಿಕಾರದಲ್ಲಿ ಪರಿಹಾರವನ್ನು ಪಡೆಯುವಂತೆ ಸೂಚಿಸಿದ್ದರಿಂದ ಹಾಗೂ ಕೊಪ್ಪಳ ಜಿಲ್ಲಾಡಳಿತ ತೀರ್ಮಾನದಂತೆ ಮತ್ತು ಸತತ ಮಳೆ ನೆರೆ ಪ್ರವಾಹ ಕಾರಣದಿಂಂದ ದಿನಾಂಕ 17,18,19, ಜೂಲೈ 2022 ಈ ಮೂರು ದಿನಗಳಲ್ಲಿ ನವಬೃಂದಾವನದಲ್ಲಿ ನಡೆಯಬೇಕಿದ್ದ ಶ್ರೀಜಯತೀರ್ಥರ ಆರಾಧನೆಯನ್ನು ಪರಮಪೂಜ್ಯ ಶ್ರೀ 1008 ಶ್ರೀಸುಬುಧೇಂದ್ರತೀರ್ಥಶ್ರೀಪಾದಂಗಳವರ ದಿವ್ಯ ನೇತೃತ್ವದಲ್ಲಿ ಶ್ರೀಕ್ಷೇತ್ರ ಮಂತ್ರಾಲಯದ ಶ್ರೀಮಠದಲ್ಲಿ ನೆರವೇರಿಸಲು ನಿಶ್ಚಯಿಸಿದ್ದು ಶ್ರೀಮಠದ ಶಿಷ್ಯರು ಭಕ್ತರು ಆರಾಧನೆಯಲ್ಲಿ ಪಾಲ್ಗೊಳ್ಳಲು ಶ್ರೀರಾಘವೇಂದ್ರಸ್ವಾಮಿಗಳವರ ಮಠ ಮಂತ್ರಾಲಯದ ಪವರ್ ಆಫ್ ಅಟಾರ್ನಿ ಆರ್ ಕೆ ವಾದೀಂದ್ರಾಚಾರ್ಯ ತಿಳಿಸಿದ್ದಾರೆ.

Comments
Post a Comment