ಚಾಟ್ ಕಾರ್ನರ್...ರಾಯಚೂರಿನ ತಿನಸುಗಳ ಬಗ್ಗೆ ಮಾಹಿತಿ
ಚಾಟ್ ಕಾರ್ನರ್...ರಾಯಚೂರಿನ ತಿನಸುಗಳ ಬಗ್ಗೆ ಮಾಹಿತಿ. ರಾಯಚೂರು,ಜು.15- ರಾಜ್ಯದ ವಿವಿಧೆಡೆ ವಿವಿಧ ಶೈಲಿಯ ತಿನಸುಗಳು ನಿಮಗೆ ನೋಡಲು ಸಿಗುತ್ತವೆ ಒಂದು ಊರಿನಲ್ಲಿ ಆ ಊರಿನ ಕೆಲವು ತಿನಸುಗಳು ಬಹಳ ಫೇಮಸ್ ಆಗಿರುತ್ತವೆ ಅಂತಹ ಫೇಮಸ್ ತಿನಸುಗಳ ಬಗ್ಗೆ ತಿಳಿಸುವ ಪ್ರಯತ್ನ " ಜಯಧ್ವಜ " ಮಾಡಲಿದ್ದು ಈ ಲೇಖನ ತಿನಸುಗಳನ್ನು ತಿನ್ನುವಂತೆ ನಿಮ್ಮ ನಾಲಿಗೆಯನ್ನು ಪ್ರಚೋದಿಸಲುಬಹುದು ಎಚ್ಚರ... ನಾನಿಂದು ನಿಮಗೆ ರಾಯಚೂರಿನ ಪ್ರಖ್ಯಾತ ಸ್ಥಳವಾದ ಶೆಟ್ಟಿಭಾವಿ ವೃತ್ತದ ಬಳಿ ಸಂದಿಯಲ್ಲಿ ಶೆಟ್ಟಿ ಚಾಟ್ ನಲ್ಲಿ ಸಿಗುವ ತಿನಸುಗಳ ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತೇನೆ . 1986 ರಲ್ಲಿ ಪ್ರಾರಂಭವಾದ ಈ ಒಂದು ಸಣ್ಣ ಅಂಗಡಿ 36 ವರ್ಷದಿಂದ ಜನರಿಗೆ ರುಚಿಕರವಾದ ಚಾಟ್ ಗಳನ್ನು ತಿನ್ನಿಸುತ್ತಿದೆ.
ಇಲ್ಲಿ ಈರುಳ್ಳಿ ಬಳಕೆ ಮಾಡುವುದಿಲ್ಲ ಇಲ್ಲಿ ನಿಮಗೆ ಪಾನಿಪೂರಿ,ಪಾಪಡ್, ಕಟ್ಲೆಟ್, ಕಚೋರಿ, ಸಮೋಸಾ ಮುಂತಾದವು ಸಿಗಲಿದ್ದು ಇಲ್ಲಿಯ ರುಚಿ ನೀವೆಲ್ಲು ಬೇರೆಡೆ ಕಾಣುವುದಿಲ್ಲ ಈ ರುಚಿಯನ್ನು ಹುಡುಕಿಕೊಂಡು ನಗರದ ವಿವಿಧ ಭಾಗದಿಂದ ಜನ ಸಾಯಿಂಕಾಲ ಇಲ್ಲಿ ಹಾಜರಾಗುತ್ತಾರೆ ಚಿಕ್ಕ ಅಡಕಿ ದೊಣ್ಣಿಯಲ್ಲಿ ಪಾನಿ ಪೂರಿ ಸವಿಯುತ್ತಾ ಹೋದರೆ ನಿಮಗೆ ಎಣಿಕೆ ಬಗ್ಗೆ ಗಮನವಿರುವುದಿಲ್ಲ ವಿಶಿಷ್ಟ ಬಗೆಯ ಪಾನಿ ನಿಮ್ಮ ನಾಲಿಗೆಗೆ ವಿಶಿಷ್ಠತೆಯ ಅನುಭವ ನೀಡುತ್ತದೆ ಅದೆ ರೀತಿ ಅಡಿಕೆ ಹಾಳೆಯಲ್ಲಿ ನೀಡುವ ಕಚೋರಿ, ಸಮೋಸಾ, ಪಾಪಡ್ ರುಚಿ ಸವಿದವರೆ ಬಲ್ಲರು ಅದರ ರುಚಿಯನ್ನು. ಇದ್ಲಿ ಒಲೆ ಮೇಲೆ ಕಟ್ಲೇಟ್ ಬಿಸಿ ಮಾಡಲಾಗುತ್ತದೆ. ಟೊಮೇಟೊ, ಪುದೀನಾ ಎಲೆ ರುಚಿಯನ್ನು ಮತ್ತಷ್ಟು ಹೆಚ್ಚಿಗೆ ಮಾಡುತ್ತದೆ ಈರುಳ್ಳಿ ಪ್ರೀಯರಿಗೆ ಇಲ್ಲಿ ನಿರಾಸೆಯಾಗಬಹುದು ಇಲ್ಲಿ ಈರುಳ್ಳಿ ಬಳಸಲಾಗುವುದಿಲ್ಲ.
ಬೆಲೆಯ ಬಗ್ಗೆ ನೋಡುವುದಾದರೆ 3 ಪಾನಿಪೂರಿಗೆ 10/- ರೂಪಾಯಿ ಹಾಗೂ ಪಾಪಡ್, ಕಚೋರಿ, ಸಮೋಸಾ, ಕಟ್ಲೆಟ್ ಗೆ 40/- ದರ ನಿಗದಿಯಾಗಿದೆ. ಸಮಯ ಸಂಜೆ 4 ರಿಂದ ರಾತ್ರಿ 9ರವರೆಗೆ ಅಂಗಡಿ ತೆರೆದಿರುತ್ತಿದೆ ಸಂಡೆ ಹಾಲಿಡೆ ಇರುತ್ತದೆ. ಅಚ್ಚುಮೆಚ್ಚಿನ ಸ್ಥಳ:- ಸುತ್ತಮುತ್ತಲಿರುವ ಕೆಲ ಸರಾಫ್(ಬೆಳ್ಳಿ ಬಂಗಾರ) ಅಂಗಡಿ ಮಾಲೀಕರು, ಕೆಲಸಗಾರರು ಸೇರಿದಂತೆ ಅನೇಕ ಜನರಿಗೆ ಇದು ಅಚ್ಚುಮೆಚ್ಚಿನ ಸ್ಥಳವಾಗಿದೆ. ಮುಂದಿನ ಲೇಖನದಲ್ಲಿ ಮತ್ತೊಂದು ರಾಯಚೂರಿನ ಚಾಟ್ ರುಚಿಯೊಂದಿಗೆ ನಿಮ್ಮ ಭೇಟಿ ಗುಡ್ ಬೈ..



Comments
Post a Comment