ಕಲಿಯುಗದಲ್ಲಿ ನಾಮಜಪವೇ ಶ್ರೇಷ್ಠ ಎಲ್ಲರೂ ನಿರಂತರ ನಾಮಜಪ ಮಾಡಬೇಕು - ಪ್ರಕಾಶ ಖೇಣೆದ
ರಾಯಚೂರು,14- ಕಲಿಯುಗದಲ್ಲಿ ನಾಮಜಪವೇ ಶ್ರೇಷ್ಠ ಎಲ್ಲರೂ ನಿರಂತರ ನಾಮಜಪ ಮಾಡಬೇಕು ಎಂದು ಮುಖ್ಯ ವಕ್ತಾರರಾದ ಪ್ರಕಾಶ ಖೇಣೆದ ಹೇಳಿದರು.
ಅವರು ಬೆಸ್ತವಾರ ಪೇಟೆಯ ಗೀತಾ ಮಂದಿರದಲ್ಲಿ ಗುರುಪೂರ್ಣಿಮಾ ಮಹೋತ್ಸವದಲ್ಲಿ ಹೇಳಿದರು.
ಸನಾತನ ಸಂಸ್ಥೆಯ ಮಾರ್ಗದರ್ಶನದಂತೆ ನಾಮಸ್ಮರಣೆ ಮಾಡುವುದರಿಂದ ಸ್ಥೂಲ ಮತ್ತು ಸೂಕ್ಷ್ಮದೇಹ ಶುದ್ಧಿಕರಣವಾಗುತ್ತದೆ. ಸುಮಾರು ೨೦ ವರ್ಷಗಳಿಂದ ಪೂಜಾ-ಪುನಸ್ಕಾರದಿಂದ ಸಿಗದಂತ ಅನುಭೂತಿ ನಾಮಸ್ಮರಣೆ ಮಾಡುವುದರಿಂದ ಸಿಕ್ಕಿದೆ. ಇತ್ತೀಚಿಗೆ ಗೋವಾದಲ್ಲಿ ನಡೆದ ೧೦ನೇ ಅಖೀಲ ಭಾರತೀಯ ಹಿಂದೂರಾಷ್ಟ್ರ ಅಧಿವೇಶನದಲ್ಲಿ ಪಾಲ್ಗೊಂಡಿದ್ದೆ. ಅಲ್ಲಿ ಹಿಂದೂ ರಾಷ್ಟ್ರ ಬರಲಿಕ್ಕೆ ನಾವು ಏನ್ ಮಾಡಬೇಕು ಎಂದು ಕೇಳಿದ್ದಕ್ಕೆ, ಸಾಧನೆ ಮಾಡಿದರೆ ಹಿಂದೂ ರಾಷ್ಟ್ರ ತಾನಾಗಿಯೇ ಬರುತ್ತದೆಂದು ಹೇಳಿದ್ದನ್ನು ಕೇಳಿ ನನಗೆ ತುಂಬಾ ಒಳ್ಳೆಯದು ಅನ್ನಿಸಿತು. ಅದೇ ಸಂದರ್ಭದಲ್ಲಿ ರಾಮನಾಥಿ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿಯ ದೈವೀ ಚೈತನ್ಯದ ಅನುಭೂತಿ ಪಡೆದೆನು. ಗುರುಗಳು ಸಾಕ್ಷಾತ್ ಈಶ್ವರ ಸ್ವರೂಪರಾಗಿದ್ದಾರೆ. ಇವರ ಮಾಧ್ಯಮದಿಂದಲೇ ಹಿಂದೂ ರಾಷ್ಟ್ರ ಬರುತ್ತದೆ ಎಂಬುದು ನನಗೆ ಅರಿವಾಯಿತೆಂದು ತಮ್ಮ ಅನುಭೂತಿ ವ್ಯಕ್ತಪಡಿಸಿದರು.
ಸುವರ್ಣ ತಮ್ಮ ಅನುಭೂತಿ ವ್ಯಕ್ತಪಡಿಸಿ ‘ಸುಖಸ್ಯ ಮೂಲಂ ಧರ್ಮಃ |’, ಅಂದರೆ ಸುಖದ ಮೂಲವು ಧರ್ಮಾಚರಣೆಯಲ್ಲಿದೆ. ಸಮಾಜ ಮತ್ತು
ರಾಷ್ಟ್ರವನ್ನು ಸುಗಮವಾಗಿ ನಡೆಸಬೇಕಿದ್ದರೆ, ಧರ್ಮದ ಅಧಿಷ್ಠಾನವು ಎಲ್ಲ ಕ್ಷೇತ್ರಗಳಲ್ಲಿ
ಇರುವುದು ಆವಶ್ಯಕವಾಗಿದೆ. ವೈಯಕ್ತಿಕ ಅಥವಾ ಸಾಮಾಜಿಕ ಜೀವನದಲ್ಲಿ ಧರ್ಮದ ಅಧಿಷ್ಠಾನ
ಬಂದರೆ, ವ್ಯಕ್ತಿಯು ನೀತಿವಂತನಾಗುತ್ತಾನೆ ಮತ್ತು ತಪ್ಪು ಕೃತಿಗಳನ್ನು ಮಾಡುವುದನ್ನು
ತಡೆಗಟ್ಟುತ್ತಾನೆ. ಆದುದರಿಂದ ಧರ್ಮದ ಅಧಿಷ್ಠಾನವಿದ್ದರೆ, ಮಾತ್ರ ಧರ್ಮನಿಷ್ಠ ಅಂದರೆ
ಆದರ್ಶವಾದ ಸಮಾಜದ ನಿರ್ಮಿತಿಯಾಗಬಹುದು. ಆದುದರಿಂದ ರಾಷ್ಟ್ರಕ್ಕೆ ನಿಜವಾದ ಅರ್ಥದಲ್ಲಿ
ಉರ್ಜಿತಾವಸ್ಥೆ ಪ್ರಾಪ್ತಮಾಡಿಕೊಳ್ಳಬೇಕಿದ್ದರೆ ಪ್ರತಿಯೊಬ್ಬರು ಧರ್ಮಶಿಕ್ಷಣವನ್ನು
ಪಡೆದು, ಧರ್ಮಾಚರಣೆಯನ್ನು ಮಾಡಿ ಧರ್ಮನಿಷ್ಠ ಸಮಾಜದ ನಿರ್ಮಿತಿ ಮತ್ತು ಧರ್ಮಾಧಿಷ್ಠಿತ
ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಕೃತಿಶೀಲರಾಗಬೇಕು. ಕಾಲಾನುಸಾರ ‘ಹಿಂದೂ
ರಾಷ್ಟ್ರ’ಕ್ಕಾಗಿ ಯೋಗದಾನ ನೀಡುವುದು ಇದು ಶ್ರೀಗುರುಗಳ ಸಮಷ್ಟಿ ರೂಪದ ಸೇವೆಯೇ ಆಗಿದೆ
ಎಂದು ಹೇಳಿದರು.
ಮಹೋತ್ಸವದ
ಆರಂಭದಲ್ಲಿ ಶ್ರೀ ವ್ಯಾಸಪೂಜೆ ಮತ್ತು ಪ.ಪೂ. ಭಕ್ತರಾಜ ಮಹಾರಾಜರ ಭಾವಚಿತ್ರದ ಪೂಜೆ
ಮಾಡಲಾಯಿತು. ದೇಶಾದ್ಯಂತ ಬೇರೆ ಬೇರೆ ಕಡೆ ನಡೆದ ಗುರುಪೂರ್ಣಿಮೆಗಳಲ್ಲಿ ಸನಾತನ ಸಂಸ್ಥೆಯ
ಮರಾಠಿ ಮತ್ತು ಹಿಂದಿ ಭಾಷೆಯ ಗ್ರಂಥ ’ಪರಾತ್ಪರ ಗುರು ಡಾ. ಆಠವಲೆ ಇವರ ಗುರುಭೇಟಿ
ಮತ್ತು ಅವರು ಗುರುಗಳಿಂದ ಕಲಿಯುವುದು’, ಮರಾಠಿ ಭಾಷೆಯ ಗ್ರಂಥ ’ಶ್ರೀ. ಅಶೋಕ ಭಾಂಡ ಇವರ
ಸಾಧನಾಪ್ರವಾಸ’, ಅದೇರೀತಿ ಆಂಗ್ಲ ಭಾಷೆಯ ಗ್ರಂಥ ‘ಪರಾತ್ಪರ ಗುರು ಡಾ. ಆಠವಲೆಸ್
ಸ್ಪಿರಿಚುವಲ್ ವರ್ಕಶಾಪ್ಸ್ ಇನ್ ೧೯೯೨’, ’ಸೀಕರ್ಸ್ ರಿವೀಲ್ ಯುನೀಕ್ ಫೆಸೇಟಸ್ ಆಫ್
ಪರಾತ್ಪರ ಗುರು ಡಾ. ಆಠವಲೆ’ , ’ಎಫೆಕ್ಟ್ಸ್ ಅಟ್ ದ ಸ್ಪಿರಿಚುವಲ್ ಲೆವೆಲ್ ಫಾರ್
ರಿಮೂವಲ್ ಆಫ್ ಪರ್ಸನಾಲಿಟಿ ಡಿಫೆಕ್ಟ್ಸ್’ ಮತ್ತು ಹೌ ಟು ಪ್ರೋಗ್ರೆಸ್ ಫಾಸ್ಟರ್
ಸ್ಪಿರಿಚುವಾಲಿಟಿ ತ್ರೂ ಸತ್ಸೇವಾ?’ ಈ ಗ್ರಂಥಗಳ ಪ್ರಕಾಶನ ಮಾಡಲಾಯಿತು. ಈ ಸಮಯದಲ್ಲಿ
‘ಸ್ವಸಂರಕ್ಷಣ ಪ್ರಾತ್ಯಕ್ಷಿಕೆ’ ತೋರಿಸಲಾಯಿತು. ಸ್ವರಕ್ಷಣ ಪ್ರಶಿಕ್ಷಣ
‘ಪ್ರಾತ್ಯಕ್ಷಿಕೆಯ ಕಿರುಚಿತ್ರ ತೋರಿಸಲಾಯಿತು’ ಮತ್ತು ಈ ಕಾರ್ಯಕ್ರಮಕ್ಕೆ ಹಾಗೂ ೧೦೦ ಜನ
ಜಿಜ್ಞಾಸುಗಳು ಉಪಸ್ಥಿತರಿದ್ದರು.
೯ ಭಾಷೆಗಳಲ್ಲಿ ‘ಆನ್‌ಲೈನ್’ ಗುರುಪೂರ್ಣಿಮೆ
ಮಹೋತ್ಸವ’ : ಈ ವರ್ಷ ಸನಾತನ ಸಂಸ್ಥೆಯ ವತಿಯಿಂದ ಕನ್ನಡ, ಹಿಂದಿ, ಮರಾಠಿ, ಆಂಗ್ಲ,
ತಮಿಳು, ತೆಲುಗು, ಗುಜರಾತಿ, ಬಂಗಾಲಿ, ಒಡಿಯಾ ಈ ೯ ಭಾಷೆಗಳಲ್ಲಿ ಆನ್‌ಲೈನ್
ಗುರುಪೂರ್ಣಿಮಾ ಮಹೋತ್ಸವವು ನೆರವೇರಿತು. ಈ ಮೂಲಕ ದೇಶ-ವಿದೇಶಗಳಲ್ಲಿನ ಸಾವಿರಾರು
ಭಕ್ತರು ‘ಗುರುಪೂರ್ಣಿಮಾ ಮಹೋತ್ಸವ’ಗಳ ಲಾಭವನ್ನು ಪಡೆದುಕೊಂಡರು. ಆನ್‌ಲೈನ್
ಗುರುಪೂರ್ಣಿಮಾ ಮಹೋತ್ಸವದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ.
ಆಠವಲೆ ಇವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ ಬಿಂದಾ ಸಿಂಗಬಾಳ
ಇವರ ಹಸ್ತದಿಂದ ‘ಇಂಪಾರ್ಟೆನ್ಸ್ ಆಫ್ ಗುರು’ ಎಂಬ ಈ-ಬುಕ್ ನ ಪ್ರಕಾಶನ ಮಾಡಲಾಯಿತು.

Comments
Post a Comment