ನ್ಯಾಯಾಲಯ ಆದೇಶದಂತೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೆ ಕಾರ್ಯ: ಆಧ್ಯಾತ್ಮದಿಂದ ಮನುಷ್ಯನಿಗೆ ನೆಮ್ಮದಿ, ಶಾಂತಿ ಪ್ರಾಪ್ತಿ- ಕಾಶಿ ಜಗದ್ಗುರುಗಳು
ನ್ಯಾಯಾಲಯ ಆದೇಶದಂತೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೆ ಕಾರ್ಯ:
ಆಧ್ಯಾತ್ಮದಿಂದ ಮನುಷ್ಯನಿಗೆ ನೆಮ್ಮದಿ, ಶಾಂತಿ ಪ್ರಾಪ್ತಿ- ಕಾಶಿ ಜಗದ್ಗುರುಗಳು
ರಾಯಚೂರು,ಜು.೧೬-ಆಧ್ಯಾತ್ಮದಿಂದ ಮನುಷ್ಯನಿಗೆ ನೆಮ್ಮದಿ ಶಾಂತಿ ಲಭಿಸುತ್ತದೆ ಎಂದು ಕಾಶಿ ಜಗದ್ಗುರುಗಳಾದ ಶ್ರೀ ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಅವರಿಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಸಿದ್ದಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಮನುಷ್ಯನಿಗೆ ಆಧ್ಯತ್ಮಿಕ ಆಚಾರ ವಿಚಾರ ಬಹುಮುಖ್ಯವೆಂದ ಅವರು ನಮಗೆ ಅಷ್ಟ ಐಶ್ವರ್ಯವಿದ್ದರೂ ನೆಮ್ಮದಿ ನೀಡುವುದು ಮಾತ್ರ ಭಗವಂತನ ನಾಮಸ್ಮರಣೆ ಜಪ ತಪವೆಂದರು.
ಸಾಮ್ರಾಟ ಅಶೋಕ ಚಕ್ರವರ್ತಿ ಕಳಿಂಗ ಯುದ್ಧದ ನಂತರ ಭಗವಾನ ಗೌತಮ ಬುಧ್ದನ ಬಳಿ ಆಗಮಿಸಿ ತನ್ನ ಅರಸೊತ್ತಿಗೆ ತ್ಯಜಿಸಿ ಬುದ್ದನಿಂದ ಜ್ಞಾನಾರ್ಜನೆ ಪಡೆಯುವ ಬಗ್ಗೆ ನಾವೆಲ್ಲ ಓದಿದ್ದೇವೆ ಅದರಂತೆ ನಮಗೆ ಹಣದಿಂದಲೇ ಸುಖ ದೊರಯುವುಯದಿಲ್ಲವೆಂದ ಅವರು ಕಾಶಿಯಲ್ಲಿ ೧೨ ವರ್ಷಕ್ಕೊಮ್ಮೆ ಕುಂಭ ಮೇಳ ಪವಿತ್ರ ಗಂಗಾನದಿಯಲ್ಲಿ ನಡೆಯುತ್ತದೆ ಅಲ್ಲಿಗೆ ಲಕ್ಷಾಂತರ ಸಾಧು ಸಂತರು ಆಗಮಿಸಿ ತನ್ನ ಸುಖಮಯಿ ಜೀವನ ತ್ಯಜಿಸಿ ಭಗವಂತನ ಧ್ಯಾನದಲ್ಲಿ ತಲ್ಲೀನರಾಗುತ್ತಾರೆ ಎಂದರು.
ಈಗ ನಾಲ್ಕು ತಿಂಗಳು ಕಾಲ ಚಾತುರ್ಮಾಸ್ಯ ದೀಕ್ಷೆಯನ್ನು ಪ್ರತಿಯೊಬ್ಬ ಸ್ವಾಮಿಗಳು ಕೈಗೊಳ್ಳುತ್ತಾರೆ ತಾವು ಸಹ ಈ ನಾಲ್ಕು ತಿಂಗಳು ವಿವಿಧೆಡೆ ಪಾಠ ಪ್ರವಚನ ನೀಡುತ್ತೇವೆಂದರು.
ಲಿ0ಗಾಯಿತರು ಇಷ್ಟಲಿಂಗ ಪೂಜೆ ನೆರವೇರಿಸಿ ದೇವರ ಆರಾಧಿಸುತ್ತಾರೆ ಸಿದ್ದಾಂತ ಶಿಖಾಮಣೀ ಪ್ರವಚನದಿಂದ ನಮ್ಮಲ್ಲಿ ಭಗವಂತನ ಬಗ್ಗೆ ತಿಳಿವಳಿಕೆ ಮೂಡುತ್ತದೆ ಎಂದ ಅವರು ಎಲ್ಲರೂ ಸಿದ್ದಾಂತ ಶಿಖಾಮಣಿ ಪ್ರವಚನ ಲಾಭ ಪಡೆಯಬೇಕೆಂದರು.
ನಮ್ಮ ಶರೀರ ರಥವಿದ್ದಂತೆ ಕುದುರೆಗಳು ಇಂದ್ರೀಯವಿದ್ದ0ತೆ ನಮ್ಮ ಮನಸ್ಸು(ಬುದ್ದಿ)ಸಾರಥಿಯಿದ್ದಂತೆ ಆತ ಯಾವ ಕಡೆ ನಡೆಸುತ್ತನೆ ರಥವು ಹಾಗೆ ಚಲಿಸುತ್ತದೆ ನಮ್ಮ ರಥವು ಸನ್ಮಾರ್ಗದಲ್ಲಿ ನಡೆಯಬೇಕೆಂದ ಅವರು ಈ ದೇಶ ಸರ್ವಜನಾಂಗದ ವಾಸ ಸ್ಥಾನ ಇಲ್ಲಿ ಎಲ್ಲ ಧರ್ಮ ಜಾತಿ ಪಂಥಗಳೀಗೆ ವಾಸಿಸುವ ಅವಕಾಶವಿದ್ದು ಸಂವಿಧಾನವು ಅದಕ್ಕೆ ಅವಕಾಶ ನೀಡಿದೆ ನಮ್ಮ ರಾಜ್ಯವು ಸಾಮರಸ್ಯವುಳ್ಳ ಪ್ರದೇಶವಾಗಿದ್ದು ನಾವೆಲ್ಲರು ನಮ್ಮ ಧರ್ಮಕ್ಕೆ ನಿಷ್ಟರಾಗಿ ಪರಧರ್ಮದ ಬಗ್ಗೆ ಸಹೀಷ್ಣುಗಳಾಗಬೇಕು ನಾವು ಶ್ರೇಷ್ಟ ಇನ್ನೊಬ್ಬರು ಕನಿಷ್ಟವೆಂಬ ಭಾವನೆ ಬಿಡಬೇಕೆಂದರು.
ವಿವಿಧ ಸಮಾಜಗಳು ಮೀಸಲಾತಿ ಬಗ್ಗೆ ಕೇಳುತ್ತಿವೆ ಇದರಲ್ಲಿ ತಪ್ಪಿಲ್ಲ ಮೀಸಲಾತಿ ಕೇಳುವುದು ಅವರ ಹಕ್ಕು ಆದರೆ ಮೀಸಲಾತಿ ಅವಧಿಗೆ ಪರಿಮಿತಿ ಕಾಲಾವಧಿ ಬೇಕೆಂದ ಅವರು ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಅದೇ ರೀತಿ ಪಂಚಮಸಾಲಿಯವರ ೨ಎ ಮೀಸಲಾತಿ ಹೋರಾಟವು ತಮ್ಮ ಹಕ್ಕು ಪ್ರತಿಪಾದನೆ ಮಾಡಲಾಗುತ್ತಿದ್ದು ಅದು ಸರ್ಕಾರ ಸೂಕ್ತ ನೀರ್ಣಯ ಕೈಗೊಂಡು ಸೂರ್ಯನಾಥ ಕಾಮತರ ವರದಿ ಅನ್ವಯ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕೆಂದರು.
ಪ0ಚಪೀಠಗಳ ಮಠಾಧೀಶರು ಸಮಾಜಕ ಕಾರ್ಯದಲ್ಲಿ ತೊಡಿಗಿಸಿಕೊಂಡಿದ್ದು ಶಿಕ್ಷಣ ಸಂಸ್ಥೆ , ಆಸ್ಪತ್ರೆ, ವಿಧ್ಯಾರ್ಥಿ ವಸತಿ ನಿಲಯಗಳು, ನಿತ್ಯ ದಾಸೋಹ ಮುಂತಾದ ಕಾರ್ಯದಲ್ಲಿ ತೊಡಗಿದ್ದು ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಸರಿ ಪಡಿಸಿಕೊಳ್ಳಳಾಗುತ್ತದೆ ಎಂದರು.
ಕಾಶಿ ಅಥವಾ ವಾರಣಾಸಿಯಲ್ಲಿರುವ ಗ್ಯಾನವಾಪಿ ಮಸೀದಿ ಬಗ್ಗೆ ನ್ಯಾಯಾಲಯ ಸರ್ವೆ ಕಾರ್ಯಕ್ಕೆ ಅದೇಶಿಸಿದ್ದರಿಂದ ಸರ್ವೆ ಕಾರ್ಯ ನಡೆದಿದ್ದುಅಲ್ಲಿ ಶೀವಲಿಂಗ ಪತ್ತೆಯಾಗಿದ್ದು ನ್ಯಾಯಾಲಯದ ಅದೇಶಕ್ಕೆ ಎಲ್ಲರೂ ಗೌರವ ನೀಡಬೇಕೆಂದರು.
ಈ ಸಂದರ್ಭದಲ್ಲಿ ಸೋಮವಾರಪೇಟೆ ಮಠದ ಶ್ರೀಗಳು, ಮಟಮಾರಿ ಶ್ರೀಗಳು, ಸುಲ್ತಾನಪೂರು ಶ್ರೀಗಳು, ಶಾಸಕ ಡಾ.ಶಿವರಾಜ ಪಾಟೀಲರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Comments
Post a Comment