ಕಲ್ಯಾಣ ಕರ್ನಾಟಕದ ಉದಯೋನ್ಮುಖ ನಟರಿಂದ ಮೂಡಿಬಂದಿರುವ ಚಿತ್ರ: ಜು.೧೭ ರಂದು ನಗರದಲ್ಲಿ ಹುಲಿಬೇಟೆ ಚಿತ್ರದ ಧ್ವನಿಸುರಳಿ ಬಿಡುಗಡೆ ಸಮಾರಂಭ-ರಾಜಬಹದ್ದೂರು
ಕಲ್ಯಾಣ ಕರ್ನಾಟಕದ ಉದಯೋನ್ಮುಖ ನಟರಿಂದ ಮೂಡಿಬಂದಿರುವ ಚಿತ್ರ:
ಜು.೧೭ ರಂದು ನಗರದಲ್ಲಿ ಹುಲಿಬೇಟೆ ಚಿತ್ರದ ಧ್ವನಿಸುರಳಿ ಬಿಡುಗಡೆ ಸಮಾರಂಭ-ರಾಜಬಹದ್ದೂರು
ರಾಯಚೂರು,ಜು.೧೬-ಬಹುತೇಕ ಕಲ್ಯಾಣ ಕರ್ನಾಟಕ ಭಾಗದ ಉದಯೋನ್ಮುಖ ನಟರಿಂದ ಮೂಡಿಬಂದಿರುವ ಹುಲಿಬೇಟೆ ಚಿತ್ರದ ಧ್ವನಿಸುರಳಿ ಬಿಡುಗಡೆ ಸಮಾರಂಭ ಜು.೧೭ ರಂದು ನಡೆಯಲಿದೆ ಎಂದು ಚಿತ್ರದ ನಿರ್ದೇಶಕ ರಾಜಬಹದ್ದೂರು ಹೇಳಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ನಗರದ ರಂಗಮOದಿರದಲ್ಲಿ ಧ್ವನಿ ಸುರಳಿ ಬಿಡುಗಡೆ ಸಮಾರಂಭ ಅಂದು ಸಂಜೆ ೪ ಗಂಟೆಗೆ ನಡೆಯಲಿದ್ದು ಕಿಲ್ಲೆ ಶ್ರೀಗಳು ಸಾನಿಧ್ಯ ವಹಿಸಲಿದ್ದು ಶಾಸಕರಾದ ಡಾ.ಶಿವರಾಜ ಪಾಟೀಲ, ಬಸನಗೌಡ ದದ್ದಲ ಸೇರಿದಂತೆ ಮಾಜಿ ಶಾಸಕರು, ಗಣ್ಯರು ಭಾಗವಹಿಸಲಿದ್ದಾರೆಂದರು.
ಧಾನುಬಾಯಿ ಫಿಲ್ಮಂಸ್ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗಿದ್ದು ಆ.೧೯ ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ ಎಂದ ಅವರು ಚಿತ್ರದಲ್ಲಿ ಕೌರ್ಯದ ಜೊತೆ ನವಿರಾದ ಪ್ರೇಮಕಥೆ ಸಹಯಿದ್ದು ತಾರಾಗಣದಲ್ಲಿ ವಿಶ್ವ ಎಂಬ ಹೊಸ ಮುಖ ಪರಿಚಯ ಮಾಡಲಾಗುತ್ತಿದ್ದು ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ, ನಾಯಕ ನಟಿಯಾಗಿ ರೋಹಿಣಿ ಕುಲಕರ್ಣೀ , ಸೇರಿದಂತೆ ತಾರಗಣದಲ್ಲಿ ಅನೇಕರಿದ್ದು ಪತ್ರಕರ್ತ ವಿಶಾಲ ದೋರಣಹಳ್ಳಿ ಸಹಯಿದ್ದು ತಮ್ಮಣ್ಣ ಇನ್ನಿತರರು ಇದ್ದಾರೆ ಎಂದರು.
ಚಿತ್ರದ ಚಿತ್ರೀಕರಣ ಮುಹೂರ್ತ ಮಂತ್ರಾಲಯ ಶ್ರೀ ರಾಯರ ಸನ್ನಿದಾನದಲ್ಲಿ ನೆರವೇರಿದ್ದು ನಂತರದಲ್ಲಿ ಚಿತ್ರೀಕರಣ ಬಹುತೇಕ ಕಲ್ಯಾಣ ಕರ್ನಾಟಕದ ರಾಯಚೂರು, ಯಾದಗೀರಿ ,ಕಲಬುರ್ಗಿ ಸೇರಿದಂತೆ ಹೊರರಾಜ್ಯದ ಬಾಂಬೆ,
ಪೂನಾ ಇನ್ನಿತರ ಪ್ರೇಕ್ಷಣೀಯ ಸ್ಥಳದಲ್ಲಿ ಸುಮಾರು ೧೦೫ ದಿನಗಳ ಕಾಲ ಚಿತ್ರೀಕರಣ ನೆರವೇರಿತು ಎಂದರು.
ಚಿತ್ರಗಳಲ್ಲಿರುವ ಹಾಡಿನ ಧ್ವನಿ ಸುರಳಿಯನ್ನು ಮೈಸೂರು, ಶಹಾಪೂರು ಅನೇಕ ಕಡೆಗಳಲ್ಲಿ ಅಭೀಮಾನಿಗಳ ಒತ್ತಾಯದಂತೆ ಬಿಡುಗಡೆ ಮಾಡಲಾಗಿದ್ದು ಎಲ್ಲ ಹಾಡುಗಳು ಚೆನ್ನಾಗಿವೆ ಎಂದರು.
ಚಿತ್ರವು ಸಮಾಜಕ್ಕೆ ವಿಶಷ್ಟ ಬಗೆಯ ಸಂದೇಶ ನೀಡಲಿದ್ದು ಪ್ರತಯಿಯೊಬ್ಬ ಮನುಷ್ಯನಲ್ಲಿ ವ್ಯಾಘ್ರ ಅಡಗಿರುತ್ತಾನೆ ಹುಲಿ ಕ್ರೌರ್ಯದ ಜೊತೆ ಬಲಿಷ್ಟತನಕ್ಕೆ ಹೆಸರುವಾಸಿಯಾಗಿದೆ ಚಿತ್ರದಲ್ಲಿ ಕ್ರೌರ್ಯ ಹಾಗೂ ಸಮಾಜಕ್ಕೆ ಬೇಕಾಗಿರುವ ಮೌಲ್ಯಗಳು ಇವೆ ಎಂದರು.
ಇ0ದಿನ ಚಿತ್ರಗಳು ಯಾಕ್ಷನ್ ಪ್ರಧಾನವಾಗಿವೆ ಕಾರಣ ಪ್ರೇಕ್ಷಕರು ಅದನ್ನೆ ಬಯಸುತ್ತಾರೆ ಬಹುತೇಕ ಚಿತ್ರಗಳು ಯಾಕ್ಷನ್ ನಿಂದಲೆ ಹಿಟ್ ಆಗಿವೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸತೀಶ, ವಿಶಾಲ, ವಿಶ್ವ, ತಮ್ಮಣ್ಣ ಇದ್ದರು.

Comments
Post a Comment