ಮಿರ್ಜಾಪೂರು ಕ್ಯಾಂಪ್ ನಿಂದ ಮೀರಾಪೂರು ಗ್ರಾಮದವರೆಗೆ ಡಾಂಬರು ರಸ್ತೆ ನಿರ್ಮಿಸಲು ಗ್ರಾಮಸ್ಥರ ಆಗ್ರಹ
ಮಿರ್ಜಾಪೂರು ಕ್ಯಾಂಪ್ ನಿಂದ ಮೀರಾಪೂರು ಗ್ರಾಮದವರೆಗೆ ಡಾಂಬರು ರಸ್ತೆ ನಿರ್ಮಿಸಲು ಗ್ರಾಮಸ್ಥರ ಆಗ್ರಹ ರಾಯಚೂರು,ಜು.15- ಗಡಿ ಪ್ರದೇಶಗಳಾದ ಮಿರ್ಜಾಪೂರು ಕ್ಯಾಂಪ್ ಮತ್ತು ಮೀರಾಪೂರು ಗ್ರಾಮ ಮದ್ಯದಲ್ಲಿ ಡಾಂಬರು ರಸ್ತೆ ನಿರ್ಮಿಸುವಂತೆ ಗ್ರಾಮಸ್ಥರ ಆಗ್ರಹವಾಗಿದೆ. ಮಿರ್ಜಾಪೂರು ಕ್ಯಾಂಪಿನ ಗ್ರಾಮವು ತಲಮಾರಿ ಗ್ರಾ.ಪಂ. ಬರುತ್ತಿದ್ದು ಮತ್ತು ಮೀರಾಪೂರು ಗ್ರಾಮವು ಇಡಪನೂರು ಗ್ರಾ.ಪಂ. ಬರುತ್ತಿದ್ದು ಮಿರ್ಜಾಪೂರು ಕ್ಯಾಂಪಿನ ಜನರು ಬೆಳಿಗ್ಗೆ ತಮ್ಮ ಹೊಲಗಳಿಗೆ ಹೋಗುವ ದಾರಿ ಹಾಗೂ ಪ್ರತಿದಿನ ಜನರು ಓಡಾಡುವ ದಾರಿ ಹದಗೆಟ್ಟ ರಸ್ತೆ. ಮೀರಾಪೂರು ಗ್ರಾಮೀಣ ಜನ ಮಿರ್ಜಾಪೂರು, ಮಿರ್ಜಾಪೂರು ಕ್ಯಾಂಪಿನ ತರಕಾರಿ ಮಾರಲು (ಮಾರಾಟ) ಬರುತ್ತಿದ್ದಾರೆ. ಈ ದಾರಿಯಲ್ಲಿ ಎತ್ತಿನ ಬಂಡಿ, ಸೈಕಲ್, ಮೋಟಾರ್ ವಾಹನಗಳು ದ್ವಿಚಕ್ರ, ಚತುರ್ಥಿಚಕ್ರ ದಿನಾಲು ಈ ದಾರಿಯಲ್ಲಿ ಓಡಾಡುತ್ತಿವೆ. ರಸ್ತೆ ಸಂಪೂರ್ಣ ಗುಂಡಿ ಮಾಯವಾಗಿದ್ದು. ಈ ರಸ್ತೆಯಲ್ಲಿ ಹೋಗುವವರು ನಿತ್ಯ ಹರಸಾಹಸ ಮಾಡುವಂತಾಗಿದೆ.ಕೆಲವು ದಿನಗಳಿಂದ ಮೇಲಿಂದ ಮೇಲೆ ಮಳೆ ಬೀಳುತ್ತದೆ. ಗುಂಡಿಗಳಲ್ಲಿ ನೀರು ನಿಂತು ರಸ್ತೆ ಯಾವುದು ಎಂಬುದೇ ತಿಳಿಯದಂತಾಗಿದೆ. ಈ ರಸ್ತೆಯ ಮಾರ್ಗದಲ್ಲಿ ಜನರು ಚಲಿಸುವಾಗ ಗುಂಡಿ ಇರುವುದು ಕಾಣದ ಅನೇಕರು ಬಿದ್ದು ತೊಂದರೆ ಅನುಭವಿಸಿದ್ದಾರೆ. ಇದೇ ದಾರಿಯಲ್ಲಿ ಮಿರ್ಜಾಪೂರು ಕ್ಯಾಂಪ್ ಗ್ರಾಮದಿಂದ ದಾರಿಯ ಮೇಲೆ ಬೋಯಲಾಗುಡ್ಡೆಂ ತೆಲಂಗಾಣಕ್ಕೆ ಹೋಗುವ ದಾರಿ ಹಾಗೂ ಮಿರ್ಜಾಪೂರು ಕ್ಯಾಂಪಿನ ದಾರಿಯ ಮೇಲೆ ಮೀರಾಪೂರು ಗ್ರಾಮ ದಾಟಿ ತೆಲಂಗಾಣ ಇಂದುವಾಸಿಗೆ ಗ್ರಾಮಕ್ಕೆ ಹೋಗುವ ದಾರಿಯಾಗಿದೆ. ಗ್ರಾಮೀಣ ಭಾಗದ ಶಾಸಕರಾದ ದದ್ದಲ್ ಬಸನಗೌಡ ಹಾಗೂ ಇಡಪನೂರು ಗ್ರಾ.ಪಂ ಅಧಿಕಾರಿಗಳು , ಸದಸ್ಯರು ಮತ್ತು ತಲಮಾರಿ ಗ್ರಾ.ಪಂ ಅಧಿಕಾರಿಗಳು ಸದಸ್ಯರು ಈ ರಸ್ತೆಯ ದುರಸ್ತಿ ಬಗ್ಗೆ ಗಮನ ನೀಡುವಂತೆ ಗ್ರಾಮಸ್ಥರು ಕೋರಿದ್ದಾರೆ.

Comments
Post a Comment