ದೇಶಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ-ಈಶ್ವರ ಖಂಡ್ರೆ
ದೇಶಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ- ಈಶ್ವರ ಖಂಡ್ರೆ
ರಾಯಚೂರು ,ಜು.೧೫- ದೇಶಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರವಾಗಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷರಾದ ಈಶ್ವರ ಖಂಡ್ರೆ ಹೇಳಿದರು .
ಅವರು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಗ್ರೀನ್ ಪ್ಯಾಲೇಸ್ ನಲ್ಲಿ ಹಮ್ಮಿಕೊಂಡಿದ್ದ ನವ ಸಂಕಲ್ಪ ಚಿಂತನಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು..
ಸ್ವಾತಂತ್ರ ನಂತರ ದೇಶದಲ್ಲಿ ಅನೇಕ ಸಮಸ್ಯೆಗಳು ಇದ್ದವು ಅವುಗಳನ್ನು ಸಮರ್ಥವಾಗಿ ಕಾಂಗ್ರೆಸ್ ಪಕ್ಷ ನಿಭಾಯಿಸಿ ದೇಶವನ್ನು ಸುಸ್ಥಿರವಾಗಿಸುವಲ್ಲಿ ಶ್ರಮಿಸಿದೆ ಎಂದ ಅವರು ಬಿಜೆಪಿ ಪಕ್ಷದವರು ಕಾಂಗ್ರೆಸ್ ಪಕ್ರವು ದೇಶಕ್ಕೆ ಏನು ಮಾಡಿದೆ ಎಂದು ಕೇಳುತ್ತಾರೆ, ಜನರಿಗೆ ನಮ್ಮ ಪಕ್ಷದ ಕೋಡುಗೆ ಏನು ಎಂಬುದು ಕಾರ್ಯಕರ್ತರು ಮನವರಿಕೆ ಮಾಡಬೇಕೆಂದು ಹೇಳಿದರು.
ಈ ಸಂದರ‍್ಭದಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ, ಎಐಸಿಸಿ ಕಾರ್ಯದರ್ಶಿ ಎನ್ ಎಸ್ ಬೋಸರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಬಿ.ವಿ ನಾಯಕ್,ಕೆಪಿಸಿಸಿ ಕಾರ್ಯದರ್ಶಿ ಎ.ವಸಂತಕುಮಾರ್, ಶಾಸಕರಾದ ಬಸನಗೌಡ ದದ್ದಲ,ಡಿ ಎಸ್ ಹುಲಗೇರಿ,ಬಸನಗೌಡ ತುರವಿಹಾಳ , ಮಾಜಿ ಶಾಸಕರಾದ .ಹಂಪನಗೌಡ ಬಾರ‍್ಲಿ ,ಸೈಯದ್ ಯಾಸೀನ್, ಹಂಪಯ್ಯ ನಾಯಕ,
ವಿಧಾನ ಪರಿಷತ್ ಮಾಜಿ ಸದಸ್ಯರಾದ ಶರಣಪ್ಪ ಮಟ್ಟೂರು, ಬಸವರಾಜ ಪಾಟೀಲ ಇಟಗಿ, ಮುಖಂಡರಾದ ರಾಜಶೇಖರ ನಾಯಕ, ರಾಮಣ್ಣ ಇರಬಗೇರಾ, ಬಸನಗೌಡ ಬಾದರ್ಲಿ, ಬಷೀರುದ್ದೀನ್, ಪಾಮಯ್ಯ ಮುರಾರಿ, ಜಿ.ಬಸವರಜ ರೆಡ್ಡಿ, ರುದ್ರಪ್ಪ ಅಂಗಡಿ, ಕೆ.ಶಾಂತಪ್ಪ, ಜಿ.ಶೀವಮೂರ್ತಿ, ಅಮರೇಗೌಡ ಹಂಚಿನಾಳ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಜಿಲ್ಲೆಯ ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಜಿಲ್ಲೆಯ ಹಾಗೂ ಎಲ್ಲಾ ತಾಲೂಕುಗಳ ಮುಂಚೂಣಿ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮಹಿಳಾ ಮುಖಂಡರು, ಕಾರ್ಯಕರ್ತರಿದ್ದರು..

Comments
Post a Comment