ಶ್ರೀ ಮಾರ್ಕಂಡೇಶ್ವರ ಜಯಂತಿ : ದೇವಸ್ಥಾನ ಅಭಿವೃದ್ದಿಗೆ ಅನುದಾನ, ಸಮಾಜಕ್ಕೆ ಸಿಎ ಸೈಟ್ - ಡಾ. ಶಿವರಾಜ ಪಾಟೀಲ್ ಭರವಸೆ
ಶ್ರೀ ಮಾರ್ಕಂಡೇಶ್ವರ ಜಯಂತಿ : ದೇವಸ್ಥಾನ ಅಭಿವೃದ್ದಿಗೆ ಅನುದಾನ, ಸಮಾಜಕ್ಕೆ ಸಿಎ ಸೈಟ್ -ಡಾ. ಶಿವರಾಜ ಪಾಟೀಲ್ ಭರವಸೆ
ರಾಯಚೂರು,ಜ.೨೩- ಪದ್ಮಶಾಲಿ ಸಮಾಜದ ಶ್ರೀ ಮಾರ್ಕಂಡೇಶ್ವರ ದೇವಸ್ಥಾನದ ಸಭಾಂಗಣದ ಮೊದಲನೇ ಮಹಡಿಯಲ್ಲಿ ಅನ್ನ ದಾಸೋಹ ಕಟ್ಟಡ ಕಾಮಗಾರಿಗೆ ಅನುದಾನ ನೀಡಿ, ಮುಂದಿನ ವರ್ಷದ ಜಯಂತಿಯೊಳಗೆ ಉದ್ಘಾಟಿಸುವುದಾಗಿ ಶಾಸಕ ಡಾ.ಶಿವರಾಜ ಪಾಟೀಲ್ ಭರವಸೆ ನೀಡಿದರು.
ಅವರಿಂದು ಮಾಣಿಕ್ ನಗರದ ಶ್ರೀ ಮಾರ್ಕಂಡೇಶ್ವರ ಜಯಂತಿಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಈಗಾಗÀಲೇ ೧೯ ಕ್ಕೂ ಹೆಚ್ಚು ಸಮಾಜಗಳಿಗೆ ಸಿಎ ಸೈಟ್ ನೀಡಲಾಗಿದೆ. ಅತಿ ಚಿಕ್ಕ ಸಮಾಜವಾದರೂ ಪ್ರತಿ ವರ್ಷ ಶ್ರೀ ಮಾರ್ಕಂಡೇಶ್ವರ ಜಯಂತಿಯನ್ನು ಅತ್ಯಂತ ಅಚ್ಚುಕಟ್ಟಾಗಿ ಮಾಡಿಕೊಂಡು ಬರುತ್ತಿರುವ ಪದ್ಮಶಾಲಿ ಸಮಾಜಕ್ಕೂ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿಎ ಸೈಟ್ ದೊರಕಿಸಿಕೊಡುವುದಾಗಿ ತಿಳಿಸಿದರು.
ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷರು ಕಾಂಗ್ರೆಸ್ ಮುಖಂಡರಾದ ಕೆ. ಶಾಂತಪ್ಪ ಅವರು ಮಾತನಾಡಿ, ಹಿಂದುಳಿದ ಸಮಾಜಗಳು ಮೀಸಲಾತಿ ವಂಚಿತರಾಗಿ ಹಿಂದುಳಿದಿದ್ದೇವೆ. ಸಮಾಜಿಕವಾಗಿ ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಪ್ರಾಭಲ್ಯ ಪಡೆಯುವಲ್ಲಿ ಶಿಕ್ಷಣದ ಜೊತೆಗೆ ಸಂಘಟನೆಯೂ ಅತಿ ಮುಖ್ಯವಾಗಿದೆ. ಸಮಾಜದ ಸಂಘಟನೆಯಿ0ದ ಸರ್ಕಾರದ ಸೌಲಭ್ಯಗಳು ಮನೆ ಬಾಗಿಲೆಗೆ ಬರಲಿವೆ ಎಂಬುದನ್ನು ಪದ್ಮಶಾಲಿ ಸಮಾಜ ಅಭಿವೃದ್ಧಿಯೇ ನಿದರ್ಶನವಾಗಿದೆ ಎಂದರು.
ನಗರಸಭೆ ಮಾಜಿ ಸದಸ್ಯ ಹರೀಶ್ ನಾಡಗೌಡ ಅವರು ಆರ್‌ಡಿಎ ಅಧ್ಯಕ್ಷರಾದ ತಿಮ್ಮಪ್ಪ ನಾಡಗೌಡ ಅವರು ಸಮಾಜಕ್ಕೆ ಸಿಎ ಸೈಟ್ ನೀಡುವು ಉದ್ದೇಶ ಹೊಂದಿದ್ದಾರೆ. ಸಮಾಜದ ಮುಖಂಡರು ಅವರ ಅವಧಿಯಲ್ಲಿ ಮನವಿ ಸಲ್ಲಿಸಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಾರ್ಯಕ್ರಮದಲ್ಲಿ ತಿಳಿಸಿದರು.
೧೦೮ ಸಾವಿರ ದೇವರ ಸಂಸ್ಥಾನ ಕಿಲ್ಲ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಆಶಿರ್ವಚನ ನೀಡಿ, ನೇಕಾರ ಪದ್ಮಶಾಲಿ ಸಮಾಜವು ನೇಯ್ಗೆಯಲ್ಲಿ ವಿಶ್ವ ದಾಖಲೆ ಮಾಡಿದ ಸಮಾಜವಾಗಿದೆ. ಸಮಾಜವು ಪ್ರತಿವರ್ಷ ಮಾರ್ಕಂಡೇಶ್ವರ ಜಯಂತಿಯನ್ನು ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕಾರ, ಹಿರಿಯರಿಗೆ ಸನ್ಮಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಈ ಭಾರಿಯ ಶ್ರೀ ಮಾರ್ಕಂಡೇಶ್ವರ ಜಯಂತಿಯ ಅಂಗವಾಗಿ ಸಮಾಜದ ಮಹಿಳೆಯರಿಗೆ ಉಡಿ ತುಂಬು ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸದ ವಿಷಯ. ಇನ್ನೊಬ್ಬರಿಗೆ ಅನ್ನ ನೀಡಿ ಸಂತಸ ಪಡುವ ಮಾತೆಯರು ಉಡಿ ತುಂಬಿಸಿಕೊAಡ ಹರಸಿ ಹೋಗುವುದು ನಮ್ಮ ಸಂಪ್ರದಾಯ. ನಮ್ಮ ಸಮಾಜದ ಮನೆ ಮನೆಗಳಲ್ಲಿ ದೀಪ ಬೆಳಗಿಸುವ ಮಾತೆಯರು ಉಡಿ ತುಂಬಿಸಿಕೊ0ಡ ಸಮಾಜವನ್ನು ಅಭಿವೃದ್ಧಿಯಾಗಲಿ ಎಂದು ಹಾರೈಸಲಿ ಎಂಬ ಸಂದೇಶವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶ್ರೀ ಮಾರ್ಕಂಡೇಶ್ವರ ದೇವಸ್ಥಾನದ ನೂತನ ರಾಜಗೋಪುರ ಕಾಮಗಾರಿಗೆ ಹಾಗೂ ಕಳಸಗಳಿಗೆ ದೇಣಿಗೆ ನೀಡಿದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಬೆಳಿಗ್ಗೆ ನೂತನವಾಗಿ ನಿರ್ಮಾಣ ಗೊಂಡ ರಾಜಗೋಪುರಕ್ಕೆ ಹಾಗೂ ಕಳಸ ಪೂಜಾ ಕಾರ್ಯಕ್ರಮಗಳು ಜರುಗಿದವು, ನಂತರ ಮಹಿಳೆಯರಿಂದ ಕುಂಬ ಕಳಸದೊಂದಿಗೆ ಶ್ರೀ ಮಾರ್ಕಂಡೇಶ್ವರ ಭಾವಚಿತ್ರ ಮೆರವಣಿಗೆ ಜರುಗಿತು. ಸಮಾಜದ ಎಲ್ಲ ಮುತ್ತೆöÊದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ವೇದಿಕೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ರವಿ ಭೋಸರಾಜು, ನಗರಸಭೆ ಸದಸ್ಯರಾದ ಶ್ರೀನಿವಾಸರೆಡ್ಡಿ, ಈ ಶಶಿರಾಜ, ನರಸರೆಡ್ಡಿ, ಹರೀಶ ನಾಡಗೌಡ , ಆರ್‌ಡಿಎ ಮಾಜಿ ಅಧ್ಯಕ್ಷ ವೈ ಗೋಪಾಲರೆಡ್ಡಿ, ಸಮಾಜದ ಜಿಲ್ಲಾಧ್ಯಕ್ಷ ಪಿ. ಗೋವಿಂದರಾಜು, ಉಪಾಧ್ಯಕ್ಷ ವೆಂಕಟೇಶ ಹೊನ್ನಾಲು, ಖಜಾಂಚಿ ಪಿ. ನಾಗೇಶ, ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಜಿ. ನಾಗರಾಜ, ತಾಲೂಕು ಅಧ್ಯಕ್ಷ ಈರಣ್ಣ ಕರ್ಲಿ, ಯುವ ಘಟಕದ ಅಧ್ಯಕ್ಷ ಚಿನ್ನಿ ಮುನಿಚಂದ್ರ, ಕರ್ಲಿ ಪ್ರಭು, ಮಹಿಳಾ ಮಂಡಳಿ ಅಧ್ಯಕ್ಷೆ ಗಡ್ಡಂ ಕಲಾವತಿ ಮಾನವಿ ಪುರಸಭೆ ಸದಸ್ಯರ ಡಿ. ವೀರೇಶ, ಸೇರಿದಂತೆ ಸಮಾಜದ ಮುಖಂಡರು ಯುವ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಹೊನ್ನಾಳ ವೆಂಕಟೇಶ ಸ್ವಾಗತಿಸಿದರು, ಅಧ್ಯಕ್ಷರಾದ ಪಿ ಗೋವಿಂದರಾಜುಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಈರಣ್ಣ ಕರ್ಲಿ ನಿರೂಪಿಸಿದರು. ಕೊನೆಯಲ್ಲಿ ಸಮಾಜದ ಯುವಕರು ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
.jpg)

.jpg)
Comments
Post a Comment