ವೃತ್ತಿ ಮಾರ್ಗದರ್ಶನ, ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ಕುರಿತು ಎರಡನೇ ದಿನದ ಮಾಹಿತಿ ಕಾರ್ಯಗಾರ : ಉತ್ತಮ ಆಯ್ಕೆಯಿಂದ ಯಶಸ್ಸು ಕಾಣಲು ಸಾಧ್ಯ- ಸಿ.ಇ.ಒ ಶಶಿಧರ ಕುರೇರ
ವೃತ್ತಿ ಮಾರ್ಗದರ್ಶನ, ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ಕುರಿತು ಎರಡನೇ ದಿನದ ಮಾಹಿತಿ ಕಾರ್ಯಗಾರ:
ಆಯ್ಕೆಯಿಂದ ಯಶಸ್ಸು ಕಾಣಲು ಸಾಧ್ಯ- ಸಿ.ಇ.ಒ ಶಶಿಧರ ಕುರೇರ
ರಾಯಚೂರು,ಜ.೨೪- ವಿದ್ಯಾರ್ಥಿಗಳ ಜೀವನದಲ್ಲಿ ಆಯ್ಕೆಯೆಂಬುವುದು ಅತ್ಯಂತ ಮುಖ್ಯವಾದ ಘಟ್ಟವಾಗಿದ್ದು, ಪ್ರತಿಯೊಬ್ಬರು ತಮ್ಮ ಮುಂದಿನ ಜೀವನವನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ಹಂತದ ತೀರ್ಮಾನವನ್ನು ಉತ್ತಮವಾಗಿ ಆಯ್ಕೆ ಮಾಡಿಕೊಳ್ಳಬೇಕು ಅಂದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅವರು ಹೇಳಿದರು.
ಅವರು ಇಂದು ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸೆಂಟರ್ ಫಾರ್ ಎಂಪ್ಲಾಯಿಮೆಂಟ್, ಅಪರ‍್ಚುನಿಟೀಸ್ & ರ‍್ನಿಂಗ್ (ಸಿಯೋಲ್) ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪದವಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ, ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ಕುರಿತು ಎರಡನೇ ದಿನದ ಮಾಹಿತಿ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನದ ಯಶಸ್ಸಿಗೆ ಉತ್ತಮವಾಗಿ ತೀರ್ಮಾನಗಳನ್ನು ಕೈಗೊಳ್ಳುವ ಮೂಲಕ ಹಾಗೂ ಮಾಹಿತಿ ಕಾರ್ಯಗಾರವನ್ನು ಚೆನ್ನಾಗಿ ಸದುಪಯೋಗ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳ ಜೀವನದಲ್ಲಿ ಪದವಿ ನಂತರ ಮುಂದಿನ ಓದು ಹಾಗೂ ಜೀವನ ಏನು ಎಂಬ ಪ್ರಶ್ನಗೆ ಉತ್ತರ ಏನು ಎಂಬುವುದನ್ನು ಗಂಭೀರವಾಗಿ ಆಯ್ಕೆ ಮಾಡಿಕೊಳ್ಳಬೇಕು.
ಉತ್ತಮ ದೃಷ್ಠಿಕೋನದ ಮೂಲಕ ಮುಂದೆ ಜೀವನ ಹೇಗೆ ರೂಪಿಸಿಕೊಳ್ಳಬೇಕು ಎಂಬುವುದು ತಿಳಿದುಕೊಳ್ಳಿ , ವಿದ್ಯಾರ್ಥಿ ಜೀವನದಲ್ಲಿ ತೀರ್ಮಾನ ಮತ್ತು ಆಯ್ಕೆ ಜೀವನದಲ್ಲಿ ಬಹಳ ಮುಖ್ಯ, ನಿಮ್ಮ ಗುರಿಯನ್ನು ಯಾವಾಗಲೂ ದೊಡ್ಡದಾಗಿ ಇಟ್ಟಕೊಳ್ಳಿ, ನಿಮ್ಮ ಶಕ್ತಿ ಮತ್ತು ಬಲಹೀನತೆ ಬಗ್ಗೆ ಮೊದಲು ನೀವು ತಿಳಿದುಕೊಳ್ಳಿ, ಗುರಿ ಗೋಸ್ಕರ ಪ್ರತೀ ಕ್ಷಣ ಕ್ಷಣ ಹಂಬಲಿಸಬೇಕು ಎಂದರು.
ನಿಮ್ಮ ಓದಿಗೆ ಮನೆ, ಬಡತನ, ಪಠ್ಯ ಪುಸ್ತಕ, ಕಾರಣವಾಗಬಾರದು, ಪದವಿ ಹಂತದಲ್ಲಿ ನಿರ್ಲಕ್ಷö್ಯ ಮಾಡಿದರೆ ಜೀವನ ಪೋರ್ತಿ ಕಷ್ಟಪಡಬೇಕಾಗುತ್ತದೆ, ಪತ್ರಿ ಒಬ್ಬ ಮನುಷ್ಯ ದೊಡ್ಡ ವ್ಯಕ್ತಿ ಆಗಲೂ ಸಮಸ್ಯೆ, ತೋಂದರೆಗಳನ್ನು ಎದುರಿಸಬೇಕು, ಇರುವ ಸವಲತ್ತುಗಳನ್ನು ಸದುಪಯೋಗ ಮಾಡಿಕೊಳ್ಳಿ ಎಂದು ಹೇಳಿದರು.
ಇದೇ ವೇಳೆ ರಾಯಚೂರು ಸಹಾಯಕ ಆಯುಕ್ತ ರಜನಿಕಾಂತ ಚೌಹಾಣ್ ಮಾತನಾಡಿ, ಶಿಕ್ಷಣವೆಂಬುವುದು ವ್ಯಕ್ತಿಯ ಸರ್ವತೋಮುಖ ಬೆಳೆವಣಿಗೆ ದಾರಿಯಾಗುತ್ತದೆ. ಇದರಿಂದ ವ್ಯಕ್ತಿಯು ಅಭಿವೃದ್ಧಿ ಹೊಂದುತ್ತಾನೆ, ಸಮಸ್ಯೆಗಳನ್ನು ಎದುರಿಸಿ ಜೀವನದಲ್ಲಿ ಮುಮದೆ ಬಂದಾಗ ಮಾತ್ರ ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ, ಉಪನಿರ್ದೇಶಕ ಮಹೇಶ ಪೋತೇದಾರ, ಕೌಶಲಾಭಿವೃದ್ಧಿ ಅಧಿಕಾರಿ ಮೆಹಬೂಬ್ ಜಿಲಾನಿ, ಪ.ಪಂಗಳ ಕಲ್ಯಾಣಾಧಿಕಾರಿ ರಾಜೇಂದ್ರ ಜಾಲ್ದಾರ್, ರಾಯಚೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ, ಸಾಧನಾ ಅಕಾಡೆಮಿಯ ವಿಷಯ ತಜ್ಞ ಮಂಜುನಾಥ.ಬಿ, ಜಿಲ್ಲಾ ಕಾರ್ಯಕ್ರಮಾಧಿಕಾರಿ ಮಹ್ಮದ್ ಯೂಸೂಫ್ ಅಲಿ, ವೆಂಕಟೇಶ ಗಲಗ, ಶೇಖ್ ಅಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದರು.




Comments
Post a Comment