ವಡವಾಟಿಯವರ ಜನುಮ ದಿನ ಕಲಾವಿದರ ದಿನವಾಗಿ ಆಚರಣೆ ಶ್ಲಾಘನೀಯ-ಮಹದೇವಪ್ಪ ಗಂಗಪ್ಪ
ವಡವಾಟಿಯವರ ಜನುಮ ದಿನ ಕಲಾವಿದರ ದಿನವಾಗಿ ಆಚರಣೆ ಶ್ಲಾಘನೀಯ- ಮಹದೇವಪ್ಪ ಗಂಗಪ್ಪ
ರಾಯಚೂರು,ಜ.24- ವಿಶ್ವಮಟ್ಟದ ಕ್ಲಾರಿಯೋನೆಟ್ ವಾದಕ ಡಾ. ಪಂ. ನರಸಿಂಹಲು ವಡವಾಟಿಯವರ ಜನುಮ ದಿನವನ್ನು ಕಲಾವಿದರಿಗೆ ಅರ್ಪಿಸಿ ಕಲಾವಿದರ ದಿನವನ್ನಾಗಿ ಆಚರಿಸುತ್ತಿರುವುದು ಭಾರತದ ಕಲಾವಿದರಿಗಷ್ಟೇ ಅಲ್ಲದೆ ಪ್ರಪಂಚದ ಕಲಾವಿದರೆಲ್ಲರಿಗೂ ಸಮರ್ಪಿಸಿರುವುದು ಶ್ರೇಷ್ಟತಮ ಧ್ಯೇಯವನ್ನು ತೋರಿಸಿಕೊಡುತ್ತದೆ ಎಂದು ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಮಾನ್ಯ ಮಹದೇವಪ್ಪ ಗಂಗಪ್ಪ ಕುಡ ಒಕ್ಕಲಿಗರ್ ಉದ್ಘಾಟಿಸಿ ಪ್ರಶಂಸೆ ವ್ಯಕ್ತಪಡಿಸಿದರು. ರಾಯಚೂರಿನ ಉದಯನಗರದ ಸ್ವರ ಸಂಗಮ ಸಂಗೀತ ವಿದ್ಯಾ ಸಂಸ್ಥೆಯ ಆವರಣದಲ್ಲಿ ಬೆಂಗಳೂರಿನ ಭಾರತ್ ಸಾಂಸ್ಕöÈತಿಕ ಕಲಾ ಕೇಂದ್ರ ಡಾ. ಪಂ. ನರಸಿಂಹಲು ವಡವಾಟಿಯವರ ಜನುಮ ದಿನ ಜನವರಿ ೨೧ರಂದು ಆಯೋಜಿಸಿದ್ದ ‘ಕಲಾವಿದರ ದಿನ’ ಹಾಗೂ ‘ಸುಗ್ಗಿಯ ಸೊಬಗಲ್ಲಿ ಸಂಗೀತ ಸಂಜೆ’ ಕಾರ್ಯಕ್ರಮವನ್ನು ಪ್ರಶಂಸೆ ವ್ಯಕ್ತಪಡಿಸಿದರು. ವಡವಾಟಿಯವರ ಜನುಮ ದಿನವನ್ನು ಕಲಾವಿದರ ದಿನವಾಗಿ ಹನ್ನೊಂದು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ನೂರ್ಕಾಲ ಇವರ ಕಲಾ ಸೇವೆ ಜಗತ್ತಿಗೆ ದಕ್ಕುತ್ತಿರಲಿ ಎಂದು ಆಶಯ ವ್ಯಕ್ತಪಡಿಸಿದರು. ನಮ್ಮ ಜೊತೆಯಲ್ಲಿ ಅನೇಕ ಕಲಾವಿದರಿದ್ದಾರೆ. ಅವರಿಗೆ ಸರಿಯಾದ ಅವಕಾಶಗಳು ಸಿಗದೆ, ಕಮರಿ ಹೋಗುತ್ತಿದ್ದಾರೆ. ಅನೇಕ ಕಲಾವಿದರು ಬೆಳಕಿಗೆ ಬರುತ್ತಿಲ್ಲ. ಕಲಾವಿದರ ಕಲೆಯನ್ನು ಬೆಂಗಳೂರಿಗಷ್ಟೇ ಕೇಂದ್ರೀಕರಿಸದೆ, ಬೇರೆ ಜಿಲ್ಲೆಗಳಲ್ಲಿರುವ ಕಲಾವಿದರನ್ನೂ ಗುರುತಿಸಿ, ಅವರ ಸೇವೆಯನ್ನು ಸಾರ್ವರ್ತೀಕರಿಸಿ, ಸಂಪೂರ್ಣ ಸಮಾಜಕ್ಕೆ ದಕ್ಕುವಂತೆ ಮಾಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದು ಸಮಾಜದ ಜವಾಬ್ದಾರಿಯನ್ನು ನೆನಪಿಸಿದರು.
೮೨ರ ವಯಸ್ಸಿನಲ್ಲಿಯೂ ೨೮ರ ಯುವಕರಂತೆ ಕ್ರೀಯಾಶೀಲರಾಗಿರುವುದಕ್ಕೆ ಕಾರಣ ವಡವಾಟಿಯವರು ಸಂಗೀತಕ್ಕೆ ಶಕ್ತಿಯನ್ನು ನೀಡಿದ್ದಾರೆ. ಸಂಗೀತ ಇವರಿಗೆ ಶಕ್ತಿ ನೀಡಿದೆ. ಬಿಸ್ಮಿಲ್ಲಾ ಖಾನ್‌ರಂತೆ ಕ್ಲಾರಿಯೋನೆಟ್‌ಗೆ ಮತ್ತೊಂದು ಹೆಸರೇ ನರಸಿಂಹಲು ವಡವಾಟಿ. ನಮ್ಮ ದೇಶದಲ್ಲಿ ಒಂದು ಕಾಲದಲ್ಲಿ ಪಾಂಡಿತ್ಯ ಕೆಲವರ ಸ್ವತ್ತಾಗಿತ್ತು. ಆ ಪಾಂಡಿತ್ಯವನ್ನು ಈ ಹೊತ್ತು ಎಲ್ಲರೂ ಪಡೆದಿದ್ದಾರೆ. ಕೆಲವರ ಸ್ವತ್ತಾಗಿದ್ದ ಜನರು, ಹೊಸ ಪಂಡಿತರನ್ನು ಅರಗಿಸಿಕೊಳ್ಳಲಿಕ್ಕೆ ತುಂಬಾ ಕಷ್ಟಪಡುತ್ತಿದ್ದಾರೆ. ನಮ್ಮ ದೇಶದವರು ಗುರುತಿಸುವುದಕ್ಕಿಂತ ಹೆಚ್ಚಾಗಿ ವಡವಾಟಿಯವರನ್ನು ಪರದೇಶದವರು ಗುರುತಿಸಿ ಗೌರವಿಸಿದ್ದಾರೆ. ವಿದೇಶಕ್ಕೆ ಹೋಲಿಸಿಕೊಂಡಾಗ ನಮ್ಮ ದೇಶದಲ್ಲಿ ಅವರಿಗೆ ಸಿಗಬೇಕಾದಷ್ಟು ನ್ಯಾಯ ಸಿಕ್ಕಿಲ್ಲ. ಇಷ್ಟು ಎತ್ತರಕ್ಕೆ ಸುಲಭವಾಗಿ ಏರಲಿಲ್ಲ. ಕಷ್ಟಪಟ್ಟು ದೈಹಿಕವಾಗಿ, ಮಾನಸಿಕವಾಗಿ ಕಲೆಯಲ್ಲೇ ತಪ್ಪಸ್ಸನ್ನು ಮಾಡಿರುವ ಕಲಾತಪಸ್ವಿ ಎಂದು ಸಾಹಿತಿಗಳು ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಡಾ. ಬಸವ ಪ್ರಭು ಪಾಟೀಲ್ ಹೆಮ್ಮೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಶಿವಮ್ಮ ವಡವಾಟಿ ಹಾಗೂ ವಡವಾಟಿಯವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ವಡವಾಟಿಯವರು ನಾನು ಒಂದು ದಿನವೂ ಸಂಗೀತಾಭ್ಯಾಸ ತಪ್ಪಿಸುವುದಿಲ್ಲ. ತಪ್ಪಿಸಿದರೆ ಆ ದಿನ ನಾನು ಮಾಡುವ ಊಟ ರುಚಿಸುವುದಿಲ್ಲ. ಏನೋ ಕಳೆದುಕೊಂಡಿರುವ ವೇದನೆಯಾಗುತ್ತದೆ. ಕಾರ್ಯಕ್ರಮ ನೀಡುವುದಕ್ಕೆ ಮುನ್ನವೂ ಅಭ್ಯಾಸ ನಿರಂತರವಾಗಿ ಮಾಡುತ್ತಿರುತ್ತೇನೆ ಎಂದು ಸಾಧನೆಯ ಗುಟ್ಟನ್ನು ಹಂಚಿಕೊಂಡರು.
ಕಲಾ ಕೇಂದ್ರದ ಅಧ್ಯಕ್ಷರು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮಾಜಿ ಸದಸ್ಯರಾದ ಖ್ಯಾತ ಹಿಂದೂಸ್ಥಾನಿ ಶಾಸ್ತಿçÃಯ ಸಂಗೀತ ಗಾಯಕಿ ವಡವಾಟಿ ಶಾರದಾ ಭರತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವುದರ ಜೊತೆಗೆ ಕೊನೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕಲಾವಿದರು ಹಾಗೂ ಕಲಾ ಸಂಘಟಕರನ್ನ್ನು ಸ್ಮರಿಸುವ ಕಾರ್ಯಕ್ರಮವೇ ಕಲಾವಿದರ ದಿನವಾಗಿದೆ ಎಂದು ವೇದಿಕೆಯ ಮೇಲೆ ಉಪಸ್ಥಿತರಿದ್ದ ಕಾರ್ಯದರ್ಶಿ ಕೆ. ಯೋಗ ರವೀಶ್ ಭಾರತ್ ಪ್ರಾಸ್ತಾವಿಕವಾಗಿ ಮಾತನಾಡಿದರು.
Comments
Post a Comment