ಜೋಡು ವೀರಾಂಜನೇಯ 31ನೇ ವಾರ್ಷಿಕೋತ್ಸವ ಅದ್ದೂರಿ ರಥೋತ್ಸವ: ಕಣ್ಮನ ಸೆಳೆದ ರಜತ ಕವಚ ಮತ್ತು ಪುಷ್ಪಾಲಂಕಾರ.

 


ಜೋಡು ವೀರಾಂಜನೇಯ ದೇವಸ್ಥಾನದ 31ನೇ ವಾರ್ಷಿಕೋತ್ಸವ ಅದ್ದೂರಿ ರಥೋತ್ಸವ:                                   ಕಣ್ಮನ ಸೆಳೆದ ರಜತ ಕವಚ ಮತ್ತು  ಪುಷ್ಪಾಲಂಕಾರ.                  ರಾಯಚೂರು,ಡಿ.22- ನಗರದ ಸಾವಿತ್ರಿ ಕಾಲೋನಿಯ ಜೋಡು ವೀರಾಂಜನೇಯ ದೇವಸ್ಥಾನದಲ್ಲಿ 31ನೇ ವಾರ್ಷಿಕೋತ್ಸವ ಅದ್ದೂರಿಯಾಗಿ ನೆರವೇರಿತು. ಬೆಳಿಗ್ಗೆ ಜೋಡು ಮುಖ್ಯಪ್ರಾಣ ದೇವರಿಗೆ ಪಂಚಾಮೃತ ಅಭಿಷೇಕ, ರಜತ ಕವಚ, ಪುಷ್ಪಾಲಂಕಾರ, ರಜತ ರಥೋತ್ಸವ ನೈವೇದ್ಯ, ಸ್ವಸ್ತಿ ವಾಚನ,ಮಹಾ ಮಂಗಳಾರತಿ ,ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಸಾಯಂಕಾಲ ಕುರ್ಡಿ ಪವನಾಚಾರ್ ರಿಂದ ಪ್ರವಚನ ಮಂಗಳ ಮಹೋತ್ಸವ ನೆರವೇರಿತು.      ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.     

 ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ  ಸುಶೀಲೇಂದ್ರ ಆಚಾರ್ಯ ಇನಾಂದಾರ್ , ಮಾಜಿ ಎಂಎಲ್ಸಿ  ಎನ್.ಶಂಕ್ರಪ್ಪ,  ಎ.ಮಾರೆಪ್ಪ, ಕಡುಗೋಲು ಆಂಜನೇಯ ,ದೇವಸ್ಥಾನ ಸಮಿತಿ ಅಧ್ಯಕ್ಷ ದಾನಪ್ಪ ಯಾದವ, ಸಾವಿತ್ರಿ ಪುರುಷೋತ್ತಮ , ಪ್ರಮೋದ್ ರಾಯಕೆಮ್, ಅರವಿಂದ ಕುಲಕರ್ಣಿ ,ವೇಣುಗೋಪಾಲ್ ಆಚಾರ್ಯ ಇನಾಂದಾರ್, ವಿಷ್ಣುತೀರ್ಥ ಸಿರವಾರ್, ವೆಂಕಟೇಶ ನವಲಿ,ಪ್ರಸನ್ನ ಆಲಂಪಲ್ಲಿ, ಗುರುರಾಜ್ ಕುಲಕರ್ಣಿ , ನರಸಿಂಗರಾವ್ ದೇಶಪಾಂಡೆ ,ಪ್ರಸನ್ನ ಕೀಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
.

Comments

Popular posts from this blog