500 ವಿದ್ಯಾರ್ಥಿಗಳಿಂದ ಭಗವದ್ಗೀತೆ ಪಠಣ: ಡಿ.23 ರಂದು ಗೀತಾ ಜಯಂತಿ ಅಂಗವಾಗಿ ಮಹಾ ಸಮರ್ಪಣಾ ಕಾರ್ಯಕ್ರಮ - ಫಡ್ನೀಸ್.
500 ವಿದ್ಯಾರ್ಥಿಗಳಿಂದ ಭಗವದ್ಗೀತೆ ಪಠಣ: ಡಿ.23 ರಂದು ಗೀತಾ ಜಯಂತಿ ಅಂಗವಾಗಿ ಮಹಾ ಸಮರ್ಪಣಾ ಕಾರ್ಯಕ್ರಮ - ಫಡ್ನೀಸ್. ರಾಯಚೂರು,ಡಿ.21-ಗೀತಾ ಜಯಂತಿ ಅಂಗವಾಗಿ ಡಿ.23 ರಂದು ಭಗವದ್ಗೀತಾ ಮಹಾ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ ಎಂದು ಭಗವದ್ಗೀತಾ ಅಭಿಯಾನ ಸಮಿತಿ ಅಧ್ಯಕ್ಷರಾದ ಡಾ.ಆನಂದತೀರ್ಥ ಫಡ್ನೀಸ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸ್ವರ್ಣವಲ್ಲಿ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮಿಗಳ ಮಾರ್ಗದರ್ಶನದಲ್ಲಿ ಅಂದು ನಗರದ ಗಾಜಗಾರಪೇಟೆಯ ಶ್ರೀ ಶಂಕರ ಮಠದಲ್ಲಿ ಸಂಜೆ 5ಕ್ಕೆ ಮಹಾ ಸಮರ್ಪಣಾ ಕಾರ್ಯಕ್ರಮ ನಡೆಯಲಿದ್ದು ಸಾನಿಧ್ಯವನ್ನು ಮಿಟ್ಟಿಮಲ್ಕಾಪೂರು ಶಾಂತಾಶ್ರಮದ ಪರಮ ಪೂಜ್ಯ ಶ್ರೀ ನಿಜಾನಂದ ಸ್ವಾಮಿಗಳು ವಹಿಸಲಿದ್ದು , ಅತಿಥಿಗಳಾಗಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು , ನಗರ ಶಾಸಕ ಡಾ.ಶಿವರಾಜ ಪಾಟೀಲ್, ಹೋಟೆಲ್ ಉದ್ಯಮಿ ಸದಾನಂದ ಪ್ರಭು, ನಗರಸಭೆ ಸದಸ್ಯ ಈ.ಶಶಿರಾಜ, ಆರ್ ಡಿ ಎ ಮಾಜಿ ಅಧ್ಯಕ್ಷ ಗೋವಿಂದ ಆಗಮಿಸಲಿದ್ದಾರೆಂದರು.
ಕಾರ್ಯಕ್ರಮದಲ್ಲಿ 500 ವಿದ್ಯಾರ್ಥಿಗಳಿಂದ ಭಗವದ್ಗೀತೆ ಪಠಣ ನಡೆಯಲಿದೆ ಗೀತಾ ಜಯಂತಿ ಅಂಗವಾಗಿ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಕಂಠ ಪಾಠ ಸ್ಪರ್ದೆ, ಭಾಷಣ ಸ್ಪರ್ಧೆ, ರಸಪ್ರಶ್ನೆ, ಚಿತ್ರ ಕಲಾ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಅವರಿಗೆ ಬಹುಮಾನ ವಿತರಣೆ ನಡೆಯಲಿದ್ದು ಸಾರ್ವಜನಿಕರು ಆಗಮಿಸುವಂತೆ ಕೋರಿದರು. ಈ ಸಂದರ್ಭದಲ್ಲಿ ಈಶ್ವರ ಹೆಗ್ಡೆ,ಹರೀಶ್ ಭಟ್,ಶ್ರೀಧರ್ ಅಗ್ನಿಹೋತ್ರಿ,ವಿಜಯ, ರಾಮಚಂದ್ರ ನಾಯಕ ಇದ್ದರು.


Comments
Post a Comment