ಆರ್.ಇ.ಟಿ ದೈಹಿಕ ಶಿಕ್ಷಣ ಮಹಾವಿದ್ಯಾಲಯ: ಅಥ್ಲೆಟಿಕ್ ಕ್ರೀಡಾಕೂಟ ಉದ್ಘಾಟನಾ



ಆರ್.ಇ.ಟಿ ದೈಹಿಕ ಶಿಕ್ಷಣ ಮಹಾವಿದ್ಯಾಲಯ:             
ಅಥ್ಲೆಟಿಕ್ ಕ್ರೀಡಾಕೂಟ ಉದ್ಘಾಟನೆ 

ರಾಯಚೂರು,ಡಿ.22- ವಿಶ್ವವಿದ್ಯಾಲಯ ರಾಯಚೂರು ಹಾಗೂ ವಿ.ಆರ್.ಇ.ಟಿ ದೈಹಿಕ ಶಿಕ್ಷಣ ಮಹಾವಿದ್ಯಾಲಯ ರಾಯಚೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ ೧೮ ಡಿಸೆಂಬರ್ ೨೦೨೩ ರಿಂದ ೨೦ ಡಿಸೆಂಬರ್ ೨೦೨೩ ರ ವರೆಗೆ ೨೦೨೩-೨೪ ನೆ ಶೈಕ್ಷಣಿಕ ಸಾಲಿನ ಪ್ರಥಮ ಅಂತರ ಮಹಾವಿದ್ಯಾಲಯಗಳ (ಪುರುಷ ಮತ್ತು ಮಹಿಳಾ) ಅಥ್ಲೆಟಿಕ್ ಕ್ರೀಡಾಕೂಟ ಉದ್ಘಾಟನಾ ಸಂಭ್ರಮವನ್ನು ವಿ.ಆರ್.ಇ.ಟಿ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.


 ಈ ಸಮಾರಂಭಕ್ಕೆ ಉದ್ಘಾಟಕರಾಗಿ ಆಗಮಿಸಿರುವಂತಹ ಪ್ರೊ. ಹರೀಶ್ ರಾಮಸ್ವಾಮಿ ಗೌರವಾನ್ವಿತ ಕುಲಪತಿಗಳು ರಾಯಚೂರು ವಿಶ್ವವಿದ್ಯಾಲಯ ರಾಯಚೂರು ಇವರು ಜ್ಯೋತಿ ಬೆಳಗಿಸಿ ಕ್ರೀಡಾಕೂಟದ ಧ್ವಜಾರೋಹಣವನ್ನು ನೆರವೇರಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಇಂದು ನಮ್ಮ ರಾಯಚೂರು ವಿಶ್ವವಿದ್ಯಾಲಯದ ಇತಿಹಾಸದ ಪುಟಗಳಲ್ಲಿ ಅಜರಾಮರ ದಿನ.  ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸನ್ನು ಕೇಂದ್ರಕರಿಸುವುದೇ ಕ್ರೀಡೆಯಾಗಿದೆ. ಕ್ರೀಡೆ ಎಂದರೆ ಕೇವಲ ಮನರಂಜನೆಯಲ್ಲ ಇದು ಶಿಸ್ತು, ಸಂಯಮ, ಆರೋಗ್ಯ, ಉಲ್ಲಾಸ, ಮುಂತಾದ ಹಲವಾರು ಅಂಶಗಳನ್ನು ವ್ಯಕ್ತಿಗಳಲ್ಲಿ ತುಂಬಿ ಉತ್ತಮ ವ್ಯಕ್ತಿತ್ವವನ್ನು ಬೆಳೆಸುತ್ತದೆ. ಕ್ರೀಡೆಗೆ ಜಾತಿ, ಮತ, ಧರ್ಮ, ಭೇದ ಭಾವಗಳನ್ನು ಬಿಟ್ಟು ಎಲ್ಲರನ್ನೂ ಒಗ್ಗೂಡಿಸಿ ಉತ್ಸಾಹ ಮನಸ್ಸಿನಿಂದ ಭಾಗವಹಿಸುವಂತೆ ಮಾಡುವುದೇ ಕ್ರೀಡೆಯಾಗಿದೆ ಎಂದು ಹೇಳಿದರು. ಕ್ರೀಡಾ ಕ್ಷೇತ್ರಕ್ಕೆ ಬೇಕಾದ ಸಹಕರವನ್ನು ನೀಡಲು ವಿಶ್ವ ವಿದ್ಯಾಲಯ ಸದಾ ಮುಂದಿರುತ್ತದೆ ಎಂದು ಹೇಳಿದರು. 



ಅದೇ ರೀತಿಯಾಗಿ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿದ ಅಂತರಾಷ್ಟ್ರೀಯ ಒಲಿಂಪಿಕ್ ಅಥ್ಲೆಟಿಕ್ ಕ್ರೀಡಾಪಟುವಾದ ಶ್ರೀಮತಿ ಸಹನಾ ಕುಮಾರಿಯವರು ಮಾತನಾಡುತ್ತಾ  ಕಾಲೇಜಿನಲ್ಲಿ ಹಲವು ವಿದ್ಯಾರ್ಥಿಗಳು ಪ್ರವೇಶವನ್ನು ಪಡೆದಿರುತ್ತಾರೆ. ಆದರೆ ಈ ಎಲ್ಲಾ ವಿದ್ಯಾರ್ಥಿಗಳಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಮಾತ್ರ ಎಲ್ಲರಕ್ಕಿಂತಲೂ ವಿಭಿನ್ನತೆಯಿಂದ ಕಾಲೇಜಿನಲ್ಲಿ ಕಾಣುತ್ತಾರೆ ಏಕೆಂದರೆ ಕ್ರೀಡಾಪಟುಗಳು ಧರಿಸುವ ಕ್ರೀಡಾ ಸಮವಸ್ತ್ರ, ಶಿಸ್ತು, ಸಮಯ ಪ್ರಜ್ಞೆ, ತಾಳ್ಮೆ, ಮುಂತಾದ ಅಂಶಗಳಿAದ ವಿಭಿನ್ನತೆಯಿಂದ ಕಾಣುತ್ತಾರೆ ಹಾಗೂ ಅವರು ಯಾವಾಗಲೂ ಉತ್ಸಾಹ, ಹುಮ್ಮಸ್ಸು ಸೃಜನಶೀಲತೆಯಿಂದ ಇರುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಅತಿ ಹೆಚ್ಚಿನ ಕ್ರೀಡಾಪಟುಗಳು ಸಿಗುತ್ತಾರೆ ಮನುಷ್ಯನ ಹುಟ್ಟು ಸಾವು ಮಧ್ಯೆ ಸಾಧನೆಗಳು ಎಂಬ ಮೆಟ್ಟಿಲು ಹತ್ತಿದಾಗ ಮಾತ್ರ ಮಾನವನ ಸಾರ್ಥಕ ಜೀವನ ನಡೆಸಿದಂತಾಗುತ್ತದೆ. ಕ್ರೀಡೆಗಳಲ್ಲಿ ಮಹಿಳೆಯ ಕ್ರೀಡಾಪಟುಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಇವರಿಗೆ ವಿಶೇಷ ತರಬೇತಿಗಳನ್ನು ನೀಡಬೇಕು ದೈಹಿಕ ಶಿಕ್ಷಕರಿಗೆ ಅಥವಾ ನಿರ್ದೇಶಕರಿಗೆ, ವಿದ್ಯಾರ್ಥಿಗಳಿಗೆ, ಯುವಕರಿಗೆ ವಿಶೇಷ ಕ್ರೀಡಾ ತರಬೇತಿ ಶಿಬಿರಗಳನ್ನು ಏರ್ಪಡಿಸಿದಾಗ ಮಾತ್ರ ಕ್ರೀಡೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಇಂತಹ ವಿಶೇಷ ಕ್ರೀಡಾ ಶಿಬಿರಗಳನ್ನು ರಾಯಚೂರು ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಬೇಕು ಈ ವಿಶೇಷ ಶಿಬಿರಕ್ಕೆ ನಾನು ನನ್ನ ಟೀಮ್ ಜೊತೆ ಈ ಭಾಗದ ಕ್ರೀಡಾಪಟುಗಳಿಗೆ ತರಬೇತಿ ನೀಡಲು ಬರುತ್ತೇನೆ ಆದರೆ ನನಗೆ ಯಾವುದೇ ಗೌರವಧನ ನೀಡುವ ಅಗತ್ಯವಿಲ್ಲ. ಇಂದಿನ ಅಥ್ಲೆಟಿಕ್ ಕ್ರೀಡೆಯಲ್ಲಿ ಸುಮಾರು ಕ್ರೀಡಾಪಟುಗಳು ಅದರಲ್ಲಿ ಮಹಿಳಾ ಕ್ರೀಡಾಪಟುಗಳು ಭಾಗವಹಿಸಿದನ್ನು ಕಂಡು ನನಗೆ ಸಂತೋಷವಾಗುತ್ತದೆ ಎಂದು ಹೇಳಿದರು.


ಅದೇ ರೀತಿಯಾಗಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸುವಂತಹ ಪ್ರೊ. ವಿಶ್ವನಾಥ್ ಎಂ ಕುಲಸಚಿವರು ರಾಯಚೂರು ವಿಶ್ವವಿದ್ಯಾಲಯ ರಾಯಚೂರು ಇವರುಗಳು ಮಾತನಾಡುತ್ತಾ ಮುಂದಿನ ದಿನಗಳಲ್ಲಿ ಕ್ರೀಡೆಗೆ ಸಂಬAಧಪಟ್ಟ ಹಾಗೆ ಯಾವುದೇ ಸಹಕಾರ ನೀಡಲು ರಾಯಚೂರು ವಿಶ್ವವಿದ್ಯಾಲಯ ಸಹಾಯ, ಸಹಕಾರ ಸದಾ ಇರುತ್ತದೆ ಈ ಭಾಗದ ವಿದಾರ್ಥಿಗಳು ಹೆಚ್ಚಿಬ ಸಂಖ್ಯೆಯಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಲು ಕರೆ ನೀಡಿದರು.  


ಅದೇ ರೀತಿಯಾಗಿ ಈ ಕಾರ್ಯಕ್ರಮದ ವೇದಿಕೆಯ ಮೇಲೆ ಡಾ. ಜಿ. ಎಸ್ ಬಿರಾದರ್ ವಿದ್ಯಾರ್ಥಿ ಕಲ್ಯಾಣ ಅಧಿಕಾರಿಗಳು ಹಾಗೂ ಉಪಕುಲ ಸಚಿವರು ರಾಯಚೂರು ವಿಶ್ವವಿದ್ಯಾಲಯ ರಾಯಚೂರು. ಮುರ್ಘೆಶ, ಮಲ್ಲಿಕಾರ್ಜುನ್ ಕೋ ಆರ್ಡಿನೇಟರ್ ದೈಹಿಕ ಶಿಕ್ಷಣ ಮತ್ತು ಕ್ರೀಡಾ ರಾಯಚೂರು ವಿಶ್ವವಿದ್ಯಾಲಯ ರಾಯಚೂರು, ದೈಹಿಕ ನಿರ್ದೇಶಕರುಗಳಾದ ವಸಂತ್ ರಾಜ್, ರಾಜಶೇಖರ್, ಪರಶುರಾಮ್, ಡಾ. ಪ್ರಸನ್ನ ಕುಮಾರ್, ಡಾ. ರಮೇಶ್ ಸುರಪುರ, ವಿವೇಕಾನಂದ ರೂರಲ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಮತಿ ಮಹಾದೇವಿ ಪಾಸೋಡಿ, ಸಂಸ್ಥೆಯ ಕಾರ್ಯದರ್ಶಿಗಳಾದ ರಾಜಶೇಖರ್ ಪಾಸೋಡಿ, ಡಾ.ನರಸಿಂಹಾಚಾರಿ ಸಂಘಟನಾ ಕಾರ್ಯದರ್ಶಿ ಮತ್ತು ಪ್ರಾಂಶುಪಾಲರು ವಿವೇಕಾನಂದ ರೂರಲ್ ದೈಹಿಕ ಶಿಕ್ಷಣ ಮಹಾವಿದ್ಯಾಲಯ ರಾಯಚೂರು, ಮಹಾವಿದ್ಯಾಲದ ಉಪನ್ಯಾಸಕರುಗಳಾದ ಮೂಕಪ್ಪ, ಚಂದ್ರಶೇಖರ್ ಹೊಸೂರು, ಮಲ್ಲಿಕಾರ್ಜುನ ಹೊಸೂರು, ದಾನಪ್ಪ ಪಾಸೋಡಿ, ಹಾಘೂ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಉಪನ್ಯಾಸಕರುಗಳು, ವಿವಿಧ ಮಹಾವಿದ್ಯಾಲಯಗಳ ಪ್ರಾಂಶುಪಾಲರು, ದೈಹಿಕ ನಿರ್ದೇಶಕರುಗಳು, ಉಪನ್ಯಾಸಕರು ಹಾಗೂ ನೂರಾರು ಕ್ರೀಡಾಪಟುಗಳು ಮುಂತಾದವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮಕ್ಕೆ ಡಾ.ನರಸಿಂಹಾಚಾರ್ಯ ಅವರು ನಿರೂಪಿಸಿದರು. ವಿದ್ಯಾರ್ಥಿನಿಯಾದ ರೇವತಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಶ್ರೀದೇವಿ ರವರು ಸ್ವಾಗತಿಸಿದರು. ದೈಹಿಕ ನಿರ್ದೇಶಕರಾದ ವಸಂತರಾಜ್ ರವರು ವಂದಿಸಿದರು.



          

Comments

Popular posts from this blog