ಮಂತ್ರಾಲಯಕ್ಕೆ ಭಾವಿ ಪರ್ಯಾಯಸ್ಥ ಉಡುಪಿ ಪುತ್ತಿಗೆ ಮಠದ ಉಭಯ ಶ್ರೀಪಾದಂಗಳವರು ಭೇಟಿ: ಪರ್ಯಾಯ ಮಹೋತ್ಸವಕ್ಕೆ ಶ್ರೀ ಸುಬುಧೇಂದ್ರತೀರ್ಥರಿಂದ ಎರೆಡು ಲಕ್ಷ ರೂ.ದೇಣಿಗೆ
ಮಂತ್ರಾಲಯಕ್ಕೆ ಭಾವಿ ಪರ್ಯಾಯಸ್ಥ ಉಡುಪಿ ಪುತ್ತಿಗೆ ಮಠದ ಉಭಯ ಶ್ರೀಪಾದಂಗಳವರು ಭೇಟಿ: ಪರ್ಯಾಯ ಮಹೋತ್ಸವಕ್ಕೆ ಶ್ರೀ ಸುಬುಧೇಂದ್ರತೀರ್ಥರಿಂದ ಎರೆಡು ಲಕ್ಷ ರೂ.ದೇಣಿಗೆ ರಾಯಚೂರು,ಡಿ.20- ಉಡುಪಿ ಶ್ರೀ ಕೃಷ್ಣ ಮಠದ ಭಾವಿ ಪರ್ಯಾಯಸ್ಥ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದಂಗಳವರು ಹಾಗೂ ಕಿರಿಯ ಪೀಠಾಧಿಪತಿಗಳಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದಂಗಳವರು ಮಂತ್ರಾಲಯಕ್ಕೆ ಭೇಟಿ ನೀಡಿದರು.
ಶ್ರೀ ಮಠದ ಪಂಡಿತರು ಹಾಗೂ ಸಿಬ್ಬಂದಿಗಳು ಉಭಯ ಶ್ರೀಪಾದಂಗಳವರನ್ನು ದೀಪಾಲಂಕೃತ ಮಧ್ವ ಮಾರ್ಗ ಮುಖಾಂತರ ಶ್ರೀಮಠದ ಸಂಪ್ರದಾಯದಂತೆ ರಜತ ಮುಖ್ಯ ದ್ವಾರ ಬಳಿ ಸ್ವಾಗತಿಸಿದರು ,
ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಬರಮಾಡಿಕೊಂಡರು ನಂತರ ರಾಯರ ಮತ್ತು ವಾದೀಂದ್ರತೀರ್ಥರ ಬೃಂದಾವನ ದರ್ಶನ ಪಡೆದರು.
ಶ್ರೀ ಮಠದ ಪ್ರಾಂಗಣದಲ್ಲಿರುವ ವಸ್ತು ಸಂಗ್ರಹಾಲಯ ವೀಕ್ಷಿಸಿದರು ಉಭಯ ಶ್ರೀಪಾದಂಗಳವರನ್ನು ಶೇಷ ವಸ್ತ್ರದಿಂದ ಸನ್ಮಾನಿಸಿ ಗೌರವಿಸಿ
ಪರ್ಯಾಯ ಮಹೋತ್ಸವಕ್ಕೆ ಶ್ರೀ ಮಠದಿಂದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು ಎರೆಡು ಲಕ್ಷ ರೂ.ದೇಣಿಗೆ ಸಲ್ಲಿಸಿದರು.





Comments
Post a Comment