ಮಹಿಳಾ ಸಮಾಜ ಬಯಲು ರಂಗಮಂದಿರ ಕಾಮಗಾರಿ ವೀಕ್ಷಿಸಿದ ಸಚಿವ ಎನ್ ಎಸ್ ಬೋಸರಾಜು:

ಶೀಘ್ರ ಕಾಮಗಾರಿಯನ್ನು ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು 


ರಾಯಚೂರು,ನ.16- ನಗರದ ಮಹಿಳಾ ಸಮಾಜದಲ್ಲಿ ನಿರ್ಮಿಸುತ್ತಿರುವ ಬಯಲು ರಂಗ ಮಂದಿರ ಕಾಮಗಾರಿಯನ್ನು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ ಎಸ್ ಬೋಸರಾಜು ಅವರು ಪರಿಶೀಲಿಸಿ ಶೀಘ್ರ ಕಾಮಗಾರಿಯನ್ನು ಮುಗಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.


ರಾಯಚೂರು ನಗರದ ಹೃದಯ ಭಾಗದಲ್ಲಿ ಮಹಿಳಾ ಸಮಾಜ ಆವರಣ ಇರುವುದರಿಂದ ಶೀಘ್ರ ಬಯಲು ರಂಗಮಂದಿರ ಕಾಮಗಾರಿಯನ್ನು ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಅಧಿಕಾರಿಗಳಿಗೆ  ಸೂಚನೆ ನೀಡಿದರು. ಮಹಿಳಾ ಸಮಾಜ ಬಯಲು ರಂಗಮಂದಿರಕ್ಕೆ ಮುಖ್ಯದ್ವಾರ ಹೊರತುಪಡಿಸಿ ಉಳಿದೆಲ್ಲಕಡೆ ಯಾರು ಪ್ರವೇಶಿಸದಂತೆ ಕಂಪೌಂಡ್ ನಿರ್ಮಿಸಬೇಕು ಎಂದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ಗುರುಸಿದ್ದಯ್ಯ ಹಿರೇಮಠ, ಮುಖಂಡರಾದ ಜಯಣ್ಣ, ಕೆ ಶಾಂತಪ್ಪ, ಜಿಂದಪ್ಪ,  ರುದ್ರಪ್ಪ ಅಂಗಡಿ, ಜಿ ಶಿವಮೂರ್ತಿ, ನಗರಸಭೆ ಸದಸ್ಯರಾದ ಬಿ‌ ರಮೇಶ, ತಿಮ್ಮಾರಡ್ಡಿ,  ಬಸವರಾಜ ಪಾಟೀಲ್ ಅತ್ತನೂರು, ರಮೇಶ ಯಾದವ್, ಹನುಮಂತ ಹೊಸೂರು, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





Comments

Popular posts from this blog