ರಂಗಭೂಮಿಯಲ್ಲಿ ರಣಕಹಳೆ ಮೊಳಗಿಸಿದ ರಾಯಣ್ಣ. ರಾಯಚೂರು,ನ.17- ಅದ್ಭುತ ಐತಿಹಾಸಿಕ ಲೋಕವನ್ನೇ ಸೃಷ್ಟಿಸಿದ ನಾಟಕ ' ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ' ಕಲಾವಿದರ ಪರಿಪೂರ್ಣ ಪಕ್ವತೆಯಲ್ಲಿ ಮಿಂದೆದ್ದು ಪ್ರೇಕ್ಷಕರನ್ನು ತನ್ನೊಳಗೆ ಆವಾಹನೆ ಮಾಡಿಕೊಂಡ ರಂಗಭೂಮಿ ತಾನು ಸ್ವತಃ ಒಂದು ಪಾತ್ರವಾಗಿದ್ದು ರೋಮಾಂಚನಗೊಳಿಸಿತ್ತು.
ಇದೆಲ್ಲವೂ ದಿನಾಂಕ16 ನವ್ಹೆಂಬರ್ 2024ರ ಸಾಯಂಕಾಲ 6.30 ಕ್ಕೆ ರಾಯಚೂರು ನಗರದ ಪಂ.ಸಿದ್ದರಾಮ ಜಃಬಲದಿನ್ನಿ ರಂಗಮಂದಿರದಲ್ಲಿ ಅಲ್ತಾಫ ರಂಗಮಿತ ಆಯೋಜಿಸಿದ್ದ ' ಅಭಿನಂದನ ಸಂಭ್ರಮ ಹಾಗೂ ಐತಿಹಾಸಿಕ ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ' ಪ್ರದರ್ಶನದಲ್ಲಿ.
ಪೂಜ್ಯ ಶ್ರೀ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ , ರಾಜ್ಯ ಸಣ್ಣ ನೀರಾವರಿ , ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್. ಎಸ್. ಬೋಸರಾಜು ಕಾರ್ಯಕ್ರಮ ಉದ್ಘಾಟಿಸಿದರು. ಮಾನ್ಯ ಸಚಿವರಿಗೆ ಅಭಿನ0ದನೆ ಸಲ್ಲಿಕೆಯೊಂದಿಗೆ ರಂಗಭೂಮಿಯ ಪ್ರತೀಕ ನಟರಾಜನ ಮೂರ್ತಿಯನ್ನು ಸ್ಮರಣಿಕೆಯಾಗಿ ನೀಡಿ ಗೌರವಿ಼ಸಲಾಯಿತು.
ರಾಯಣ್ಣನಾಗಿ ರಮೇಶ ಜಾಲಿಬೆಂಚಿ , ಚನ್ನಬಸವನಾಗಿ ಚಂದ್ರಕಾಂತ , ಚನ್ನಮ್ಮಳಾಗಿ ಶ್ರೀಗೌರಿ , ವೀರಪ್ಪನಾಗಿ ಮುತ್ತಣ್ಣ ಯಕ್ಲಾಸಪೂರ , ಲಕ್ಕಪ್ಪಗೌಡನಾಗಿ ಅಲ್ತಾಫ್ , ಆಂಗ್ಲ ಅಧಿಕಾರಿಯಾಗಿ ಬಸವರಾಜ , ಹನುಮಣ್ಣನಾಗಿ ಈರಣ್ಣ , ಶಂಭಯ್ಯನಾಗಿ ಕುಮಾರ ಬಸವ , ಗುರುವಯ್ಯನಾಗಿ ಪರಶುರಾಮ , ನಿಂಗಪ್ಪ , ಚಂದ್ರು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾದರು. ನಿಶಾಂತ್ ಸಂಗೀತ ನಿರ್ವಹಿಸಿದರು. ಐತಿಹಾಸಿಕ ಘಟನೆಗಳನ್ನು ಮರುಸೃಷ್ಟಿಸುವಲ್ವಿ ಅಲ್ತಾಫ್ ರಂಗಮಿತ್ರ ತಂಡ ಯಶಸ್ವಿಯಾಯಿತು.



Comments
Post a Comment