ನ.18 ರಂದು ಕನಕದಾಸರ ಜಯಂತಿ; ಬೀರಪ್ಪ ಕಡದಿನ್ನಿ, ಡಾ.ಹರೀಶ ಮೂರ್ತಿ, ಬಸವರಾಜ ಭೋಗಾವತಿ, ಪ್ರತಿಭಾ ಗೋನಾಳ್ ಸೇರಿದಂತೆ ವಿವಿಧ ಸಾಧಕರಿಗೆ  ಕನಕ ರತ್ನ ಪ್ರಶಸ್ತಿ ಪ್ರದಾನ -ಕೆ.ಬಸವಂತಪ್ಪ.         ರಾಯಚೂರು,ನ.16- ಕನಕ ದಾಸರ 537ನೇ ಜಯಂತ್ಯೋತ್ಸವವನ್ನು ನ.18 ರಂದು ಜಿಲ್ಲಾಡಳಿತದಿಂದ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಬಸವಂತಪ್ಪ ಹೇಳಿದರು.     ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಬೆಳಿಗ್ಗೆ  9ಕ್ಕೆ ಕನಕ ವೃತ್ತದಲ್ಲಿ ಕನಕದಾಸ ಪುತ್ಥಳಿಗೆ ಮಾಲಾರ್ಪಣೆ, ಸ್ಟೇಶನ್ ವೃತ್ತದಿಂದ ಕನಕದಾಸರ ವೃತ್ತದವರೆಗೆ ಮ್ಯಾರಥಾನ್ ಓಟ ,  9.30ಕ್ಕೆ ರಂಗ ಮಂದಿರ ವರೆಗೆ ಮೆರವಣಿಗೆ, 12.30ಕ್ಕೆ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಕನಕ ಜಯಂತಿ ಆಚರಣೆ ನಡೆಯಲಿದ್ದು ಕಾರ್ಯಕ್ರಮದಲ್ಲಿ ಮಠಾಧೀಶರು ಸಚಿವರು, ಸಂಸದರು, ಶಾಸಕರು,ಮಾಜಿ ಶಾಸಕರು, ಸೇರಿದಂತೆ ಚುನಾಯಿತ ಪ್ರತಿನಿಧಿಗಳು ಇನ್ನಿತರರು ಭಾಗವಹಿಸಲಿದ್ದಾರೆ ಎಂದರು.

ಡಾ.ಕೆ.ವೆಂಕಟೇಶ ರವರಿಂದ ಉಪನ್ಯಾಸ ನಡೆಯಲಿದ್ದು ಕಾರ್ಯಕ್ರಮದಲ್ಲಿ ಕನಕ ರತ್ನ ಪ್ರಶಸ್ತಿಯನ್ನು ಮಾನ್ವಿ ಎಪಿಎಂಸಿ ಮಾಜಿ ಅಧ್ಯಕ್ಷ ಬೀರಪ್ಪ ಕಡದಿನ್ನಿರವರಿಗೆ ಪ್ರದಾನ ಮಾಡಲಾಗುತ್ತಿದ್ದು, ಅದೆ ರೀತಿ ವೈದ್ಯಕೀಯ ಕ್ಷೇತ್ರದಿಂದ ಖ್ಯಾತ ಎಲುಬು ಮತ್ತು ಕೀಲು ತಜ್ಞ ಡಾ.ಹರೀಶ ಮೂರ್ತಿ, ಮಾಧ್ಯಮ ಕ್ಷೇತ್ರದಲ್ಲಿ  ಇಂಡಿಯನ್  ಎಕ್ಸ್ ಪ್ರೆಸ್ ಜಿಲ್ಲಾ ವರದಿಗಾರ ಬಸವರಾಜ ಭೋಗಾವತಿ, ಸಾಹಿತ್ಯ ಕ್ಷೇತ್ರದಲ್ಲಿ ಡಾ.ಈರಣ್ಣ ಕೋಸಗಿ, ಶಿಕ್ಷಣ ಕ್ಷೇತ್ರದಲ್ಲಿ ವಿರೇಶ ಅಂಗಡಿ,ಸಂಗೀತ ಕ್ಷೇತ್ರದಲ್ಲಿ ಪ್ರತಿಭಾ ಗೋನಾಳ್,ಸಮಾಜ ಸೇವೆಗಾಗಿ ಈರಣ್ಣ ಪರಿಸರ ಪ್ರೇಮಿ,ಕ್ರೀಡಾ ಕ್ಷೇತ್ರದಲ್ಲಿ ರಾಮಪ್ಪ ಪೊಲೀಸ್,ಸಹಕಾರಿ ಕ್ಷೇತ್ರ ತಿಪ್ಪಣ ಪಾಟೀಲ್ ಡೋನಮರಡಿ ರವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದರು. ಅಲ್ಲದೆ ವಿಶೇಷ್ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದ ಅವರು ಸಂಜೆ.5ಕ್ಕೆ ರಂಗಮಂದಿರದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ  ನವತರುಣ ನಾಟ್ಯ ಸಂಘ ಗೋರ್ಕಲ್ ವತಿಯಿಂದ ನಾಟಕ ಪ್ರದರ್ಶನ ನಡೆಯಲಿದೆ ಎಂದರು. ಈ ಸಂದರ್ಭದಲ್ಲಿ ಬಿ.ಬಸವರಾಜ, ಈಶಪ್ಪ, ನಾಗರಾಜ್, ನಾಗೇಂದ್ರಪ್ಪ ಮಟಮಾರಿ, ಶೇಖರ್ ವಾರದ್ ಇನ್ನಿತರರು ಇದ್ದರು.

Comments

Popular posts from this blog